More

    ಮಕ್ಕಳಿಗೆ ಶೀತ, ಕೆಮ್ಮು: ಹನುಮಸಾಗರದ ಆರ್‌ಎಂಎಸ್‌ಎ, ಇಂದಿರಾಗಾಂಧಿ ವಸತಿ ಶಾಲೆಗೆ ಸ್ಯಾನಿಟೈಸೇಷನ್

    ಹನುಮಸಾಗರ: ಇಲ್ಲಿನ ಆರ್‌ಎಂಎಸ್‌ಎ ವಸತಿ ನಿಲಯ ಹಾಗೂ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಗ್ರಾಪಂನಿಂದ ಸ್ಯಾನಿಟೈಸೇಷನ್ ಮಾಡಲಾಯಿತು.

    ಪಿಡಿಒ ನಿಂಗಪ್ಪ ಮೂಲಿಮನಿ ಮಾತನಾಡಿ, ಗ್ರಾಮದ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹವಾಮಾನ ವೈಪರೀತ್ಯದಿಂದ ಶೀತ, ಕೆಮ್ಮು ನೆಗಡಿ ಕಂಡು ಬರುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಆರ್‌ಎಂಎಸ್‌ಎ ಹಾಗೂ ಇಂದಿರಾ ಗಾಂಧಿ ವಸತಿ ಶಾಲೆಗಳಲ್ಲಿ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ನೆಗಡಿ, ಕೆಮ್ಮು, ಶಿತ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂರ್ಪಕಿಸಬೇಕು. ನಿಲಯದಲ್ಲಿ ಅಭ್ಯಾಸ ಕೈಗೊಳ್ಳುವಾಗ, ಆಟವಾಡುವಾಗ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದರು.

    ವಸತಿ ನಿಲಯದ ಮೇಲ್ವಿಚಾರಕ ಸಿದ್ಧರಾಮ ಬಾಬನಿ ಮಾತನಾಡಿ, ವಸತಿ ನಿಲಯದ 100 ವಿದ್ಯಾರ್ಥಿಗಳಲ್ಲಿ ಆರು ವಿದ್ಯಾರ್ಥಿಗಳ ವರದಿ ಪಾಸಿಟಿವ್ ಬಂದಿದೆ. ಸೋಂಕಿತ ವಿದ್ಯಾರ್ಥಿಗಳನ್ನು ಈಗಾಗಲೇ ಹೋಮ್ ಐಸೋಲೇಷನ್‌ಗೆ ಕಳಿಸಲಾಗಿದೆ. ಇನ್ನುಳಿದ ವಿದ್ಯಾರ್ಥಿಗಳ ರ‌್ಯಾಪಿಡ್ ಟೆಸ್ಟ್ ಮಾಡಿದ್ದು, ನೆಗೆಟಿವ್ ಬಂದಿದೆ ಎಂದರು. ಇಂದಿರಾಗಾಂಧಿ ವಸತಿ ಶಾಲೆ ಪ್ರಾಚಾರ್ಯ ಶರಣಪ್ಪ ಬಡಿಗೇರ, ಆರ್‌ಎಂಎಸ್‌ಎ ಹಾಸ್ಟೆಲ್ ನೋಡಲ್ ಅಧಿಕಾರಿ ಸಿದ್ಧರಾಮ ಬಾಬನಿ, ಗ್ರಾಪಂ ಸಿಬ್ಬಂದಿ ಮಹಾಂತಯ್ಯ ಕೋಮಾರಿ, ವೀರೇಶ ಕೂರ್ನಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts