More

    ಕನ್ನಡ ಶಿಕ್ಷಕನ ವರ್ಗಾವಣೆಗೆ ಖಂಡನೆ; ಶಾಲೆಗೆ ಬೀಗ ಜಡಿದು ವಿದ್ಯಾರ್ಥಿಗಳು, ಪಾಲಕರಿಂದ ಪ್ರತಿಭಟನೆ

    ಬೆಳಗಾವಿ: ನೆಚ್ಚಿನ ಶಿಕ್ಷಕರ ವರ್ಗಾವಣೆಯಾದಾಗ ವರ್ಗಾವಣೆ ವಿರೋಧಿಸಿ ಮಕ್ಕಳು ಪ್ರತಿಭಟನೆ ನಡೆಸುವ ಘಟನೆ ಆಗಾಗ ಅಲ್ಲಲ್ಲಿ ನಡೆಯುತ್ತದೆ. ಇದೀಗ ಜಿಲ್ಲೆಯ ರಾಮದುರ್ಗ ತಾಲೂಕಿನ ಸಂಗಳ ಪ್ರೌಢಶಾಲೆಯಲ್ಲಿಯೂ ಇಂತಹುದೇ ಘಟನೆ ನಡೆದಿದೆ.

    ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಅಂತ್ಯ, ಡೈರಿ ರಹಸ್ಯ ಪತ್ತೆ ಹಚ್ಚಲು ಕಸರತ್ತು 

    ಸಂಗಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿದ್ದ ಎಸ್.ಎನ್. ಅವರಾದಿ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

    ಇದನ್ನೂ ಓದಿ: ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವುದನ್ನು ತಪ್ಪಿಸಲಾಗದು: ಬಿ.ವೈ.ವಿಜಯೇಂದ್ರ

    ಎಸ್.ಎನ್ ಅವರಾದಿ ಅವರನ್ನು ಸಂಗಳದಿಂದ ರಾಮದುರ್ಗ ತಾಲೂಕಿನ ಓಬಳಾಪುರಕ್ಕೆ ವರ್ಗಾಯಿಸಲಾಗಿದೆ. ಎಸ್.ಎನ್ ಅವರಾದಿ ಕಳೆದ ಎಂಟು ವರ್ಷಗಳಿಂದ ಸಂಗಳದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸದ್ಯ ವಿದ್ಯಾರ್ಥಿಗಳು, ಪೋಷಕರು ಶಾಲಾ ಕೊಠಡಿಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಎಸ್.ಎನ್. ಅವರಾದಿ ಅವರ ವರ್ಗಾವಣೆಗೆ ಶಿಕ್ಷಣ ಇಲಾಖೆ ತಡೆ ನೀಡಬೇಕು. ಇಲ್ಲವಾದರೆ ನಾವು ತರಗತಿಗೆ ಹಾಜರಾಗುವುದಿಲ್ಲ ಎಂದು ವಿದ್ಯಾರ್ಥಿಗಳ ಪಟ್ಟು ಹಿಡಿದಿದ್ದಾರೆ.

    ಚಿಕನ್ ಸಾಂಬಾರ್ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts