More

    ತಂದೆ ತಾಯಿ ಪ್ರೀತಿ ಗೆಲ್ಲಲು ಆಕೆ ಸುಲಿಗೆಕೋರಳಾದಳೇ?

    ಮುಂಬೈ: ‘ಸಂಬಂಧಿಗಳ ಬಗ್ಗೆ ಅಸೂಯೆಪಡುವಿಕೆ’ಯಂತಹ ಅಪರೂಪದ ಘಟನೆಯೊಂದರಲ್ಲಿ, ತನ್ನ ತಂದೆ ತಾಯಿಯ ಪ್ರೀತಿಯಿಂದ ವಂಚಿತಳಾಗುವ ಭಯದಲ್ಲಿ 12ರ ಅಪ್ರಾಪ್ತ ಬಾಲಕಿಯೋರ್ವಳು ಪಾಲಕರಿಗೆ ಬುದ್ಧಿ ಕಲಿಸಲು ಸುಲಿಗೆಕೋರಳಂತೆ ನಟಿಸಿದ್ದಾಳೆ.
    ಆಕೆ 12 ರ ಬಾಲಕಿ. ತಂದೆ ಬಹುರಾಷ್ಟ್ರೀಯ ಬ್ಯಾಂಕೊಂದರಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಾರೆ.
    ಆಕೆಯ ಮೂರು ವರ್ಷದ ತಂಗಿಯನ್ನು ಹೆಚ್ಚು ಮುದ್ದಿಸುತ್ತಿದ್ದ ಪೋಷಕರ ಬಗ್ಗೆ ಅಸಮಾಧಾನಗೊಂಡಿದ್ದ 12 ವರ್ಷದ ಬಾಲಕಿ ತನ್ನ ತಂದೆಗೆ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಲು ಪ್ರಾರಂಭಿಸಿದ್ದಳು.
    ಇಮೇಲ್‌ ಸಂದೇಶದಲ್ಲಿ ಬಾಲಕಿ ತನ್ನ ತಂದೆಯ ಇಡೀ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಳು.
    ಜುಲೈ 18 ರಂದು ಚಾರ್ಟರ್ಡ್ ಅಕೌಂಟೆಂಟ್ ಬೋರಿವಿಲಿ ಪೊಲೀಸರ ಬಳಿ ಹೋಗಿ ಚೀನಾದಿಂದ ಮೂರು ಬೆದರಿಕೆ ಇಮೇಲ್‌ಗಳನ್ನು ಸ್ವೀಕರಿಸಿದ್ದಾಗಿ ತಿಳಿಸಿದ್ದರು.

    ಇದನ್ನೂ ಓದಿ:  ದುಷ್ಟಶಕ್ತಿ ಕಾಟದಿಂದ ಸಾವಿನ ಮನೆಯವರೆಗಿನ ಆಕೆಯ ಪಯಣದ ಹಾದಿ ಹೀಗಿತ್ತು ನೋಡಿ….!

    ಮೊದಲ ಇಮೇಲ್‌ ಸಂದೇಶದಲ್ಲಿ ಒಂದು ಲಕ್ಷ ರೂ. ನೀಡಲು, ಎರಡನೇ ಸಂದೇಶದಲ್ಲಿ,12 ಮಿಲಿಯನ್ ಹಣವನ್ನು ಆನ್‌ಲೈನ್ ಅಥವಾ ಅಮೆಜಾನ್ ಅಥವಾ ಪೇಟಿಎಂ ಮೂಲಕ ಹಣವನ್ನು ಪಾವತಿಸಬೇಕು ಹಾಗೂ ನಮ್ಮವರು ಮುಂಬೈನಲ್ಲಿದ್ದಾರೆ, ಅವರು ಬಂದು ನಿಮ್ಮ ಮನೆಯಲ್ಲಿರುವ ಎಲ್ಲರನ್ನೂ ಕೊಲ್ಲುತ್ತಾರೆ. ಎಂದೂ, ಮೂರನೇ ಸಂದೇಶದಲ್ಲಿ, ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದರೆ ಸಿಎ ಅವರ ಇಡೀ ಕುಟುಂಬವನ್ನು ಕೊಲ್ಲುತ್ತೇನೆ ಎಂದು ತಿಳಿಸಲಾಗಿತ್ತು. ಇಮೇಲ್‌ ಸಂದೇಶ ಕಳುಹಿಸಿದವರು ಹಣವನ್ನು ಪಾವತಿಸಬೇಕಾದ ಕರೆನ್ಸಿಯನ್ನು ಉಲ್ಲೇಖಿಸಿಲ್ಲ ಎಂದ ಪೊಲೀಸರು, ಮೊದಲ ಸಂದೇಶ ಕಳುಹಿಸಿದವರೇ ಇನ್ನುಳಿದವನ್ನು ಕಳುಹಿಸುತ್ತಿದ್ದಾರೆ ಎಂದು ಶಂಕಿಸಿದ್ದರು.
    ನಂತರ ಪ್ರಕರಣವನ್ನು ಅಪರಾಧ ಶಾಖೆಗೆ ವರ್ಗಾಯಿಸಲಾಯಿತು, ಅದು ಕಳುಹಿಸಿದವರ ಸ್ಥಳವನ್ನು ಪತ್ತೆ ಮಾಡಲು ತಾಂತ್ರಿಕ ವಿಶ್ಲೇಷಣೆಯನ್ನು ಬಳಸಲಾಯಿತು. ತನಿಖೆಯ ಪ್ರಕಾರ, ಸಿಎಯ ಐಪಿ ವಿಳಾಸದಲ್ಲಿ ಇಮೇಲ್ ಖಾತೆಯನ್ನು ಸೃಷ್ಟಿಸಲಾಗಿದೆ. ಪೊಲೀಸರು ಕುಟುಂಬವನ್ನು ವಿಚಾರಿಸಲು ಪ್ರಾರಂಭಿಸಿದಾಗ, ಆ ಬಾಲಕಿ ಉತ್ತರಿಸದೇ ತಪ್ಪಿಸಿಕೊಳ್ಳಲಾರಂಭಿಸಿದ್ದಳು. ಆಗ ಅವರು ಬಾಲಕಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

    ಇದನ್ನೂ ಓದಿ:  ಮಿಸ್​ ಇಂಡಿಯಾ ಫೈನಲಿಸ್ಟ್​ ಈಗ ಯುಪಿಎಸ್ಸಿ ಸಾಧಕಿ: ಮಾಡೆಲಿಂಗ್​ ಚೆಲುವೆಯ ಯಶಸ್ಸಿನ ಕತೆ ಇದು!

    ನಂತರ ಬಾಲಕಿಯನ್ನು ಮಹಿಳಾ ಪೋಲೀಸರು ತಾಯಿಯ ಸಮ್ಮುಖದಲ್ಲಿ ಪ್ರಶ್ನಿಸಿದರು. ತನ್ನ 3 ವರ್ಷದ ತಂಗಿಯನ್ನು ಪಾಲಕರು ಹೆಚ್ಚು ಮುದ್ದಿಸುತ್ತಿದ್ದು, ಆಕೆಗೆ ಹೆಚ್ಚಿನ ಗಮನ ನೀಡುತ್ತಿರುವುದರಿಂದ ತನ್ನ ಹೆತ್ತವರೊಂದಿಗೆ ಅಸಮಾಧಾನಗೊಂಡಿರುವುದಾಗಿ ಬಾಲಕಿ ಒಪ್ಪಿಕೊಂಡಿದ್ದಾಳೆ. ಅಪ್ರಾಪ್ತೆಯಾಗಿರುವದರಿಂದ ಆಕೆಯನ್ನು ಬಂಧಿಸಲಾಗಿಲ್ಲ. ಆದರೆ ಕೌನ್ಸೆಲಿಂಗ್‌ಗೆ ಕಳುಹಿಸುವಂತೆ ಪೋಷಕರಿಗೆ ತಿಳಿಸಲಾಯಿತು.
    ಬಹುಪಾಲು ಮಕ್ಕಳು ಸಾಮಾಜಿಕ ಮಾಧ್ಯಮ ಹಾಗೂ ಇಂಟರ್ನೆಟ್ ಬಳಸುವಲ್ಲಿ ಬುದ್ಧಿವಂತರು. ಈ ಪ್ರಕರಣದಲ್ಲಿ, ಮಗು ಒಡಹುಟ್ಟಿದವರ ಬಗ್ಗೆ ಅಸೂಯೆ ಅನುಭವಿಸುತ್ತಿದೆ ಎಂದು ತೋರುತ್ತದೆ. ಆಕೆಯ ಪೋಷಕರು ಅವಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕಾಗಿದೆ. ಕುಟುಂಬದ ಎಲ್ಲ ಸದಸ್ಯರು ಕೌನ್ಸೆಲಿಂಗ್‌ಗೆ ಒಳಗಾಗಬೇಕಾಗಿದೆ ಮತ್ತು ಸಮಸ್ಯೆಯ ಕಾರಣವನ್ನು ಹುಡುಕಬೇಕಾಗುತ್ತದೆ ಎಂದು ಡಾ. ಯೂಸುಫ್ ಮ್ಯಾಚೆಸ್ವಾಲ್ಲಾ ತಿಳಿಸಿದ್ದಾರೆ.

    ಆ.16ರಿಂದ ಮೆಟ್ರೋ ರೈಲು ಸಂಚಾರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts