More

    ಹುಚ್ಚುನಾಯಿ ಕಡಿತಕ್ಕೆ 4 ವರ್ಷದ ಮಗು ಬಲಿ; 2 ತಿಂಗಳ ಹಿಂದೆಯೂ ನಾಯಿ ಕಡಿತದಿಂದ ಮಕ್ಕಳಿಬ್ಬರು ಸಾವಿಗೀಡಾಗಿದ್ದರು!

    ಬಳ್ಳಾರಿ: ಹುಚ್ಚುನಾಯಿಯೊಂದು ಕಚ್ಚಿದ್ದರಿಂದಾಗಿ ನಾಲ್ಕು ವರ್ಷದ ಮಗು ಸಾವಿಗೀಡಾದ ಪ್ರಕರಣ ನಡೆದಿದೆ. ಅದರಲ್ಲೂ ಎರಡು ತಿಂಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.

    ಬಳ್ಳಾರಿ ನಗರದ 31ನೇ ವಾರ್ಡ್ ನಿವಾಸಿ ಕಿಶಾರ್ ಎನ್ನುವವರ ನಾಲ್ಕು ವರ್ಷದ ಪುತ್ರಿ ತಯಿಬಾ ಸಾವಿಗೀಡಾದ ಮಗು. ಇದರೊಂದಿಗೆ ಕಳೆದ ಎರಡು ತಿಂಗಳಲ್ಲಿ ಒಟ್ಟು ಮೂವರು ಮಕ್ಕಳು ಹುಚ್ಚುನಾಯಿ ಕಡಿತಕ್ಕೆ ಬಲಿ ಆದಂತಾಗಿದೆ. ಎರಡು ತಿಂಗಳ‌ ಹಿಂದಷ್ಟೇ ಬಾದನಹಟ್ಟಿ ಗ್ರಾಮದ ಎರಡು ಮಕ್ಕಳು ಹುಚ್ಚುನಾಯಿ ಕಡಿತದಿಂದಾಗಿ ಸಾವಿಗೀಡಾಗಿದ್ದರು.

    ಇದನ್ನೂ ಓದಿ: ಪತಿ ಹೃದಯಾಘಾತಕ್ಕೆ ಬಲಿ; ಒಂದೇ ಉರುಳಿಗೆ ಮಗನೊಂದಿಗೆ ಕೊರಳೊಡ್ಡಿ ಪ್ರಾಣ ಬಿಟ್ಟ ಪತ್ನಿ

    ಫೆಬ್ರವರಿ 7ರಂದು ವಟ್ಟಪ್ಪಗೆರೆ ಪ್ರದೇಶದಲ್ಲಿ 30 ಜನರ ಮೇಲೆ ಹುಚ್ಚುನಾಯಿ ದಾಳಿ ಮಾಡಿದ್ದು, ಅಂದು ತಯಿಬಾ ಕೂಡ ಕಡಿತಕ್ಕೆ ಒಳಗಾಗಿದ್ದಳು. ಆಕೆಗೆ ಬಳ್ಳಾರಿಯ ವಿಮ್ಸ್​ನಲ್ಲಿ ಚಿಕಿತ್ಸೆ ನೀಡಿ, ಬಳಿಕ ಬೆಂಗಳೂರಿನ ನಿಮ್ಹಾನ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವಿಗೀಡಾಗಿದ್ದು, ಇಂದು ಸಂಜೆ ಬಳ್ಳಾರಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಬಳ್ಳಾರಿಯಲ್ಲಿ ಪದೇಪದೆ ಹುಚ್ಚು ನಾಯಿ ದಾಳಿ ಆಗುತ್ತಿದ್ದರೂ ಪಾಲಿಕೆ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

    Child Dog Bite

    ಒಂದೇ ಮನೆಯ ನಾಲ್ವರ ಹತ್ಯೆ; ನಾಲ್ಕು ಕೊಲೆಗಳ ಆರೋಪಿಯ ತಾಯಿ ಹೇಳಿದ್ದೇನು?

    ಬೇರೆ ಏನನ್ನಾದರೂ ಬರೆದಿರುವ ನೋಟುಗಳನ್ನು ಸ್ವೀಕರಿಸುವಂತಿಲ್ಲವೇ?: ಇಲ್ಲಿದೆ ಸತ್ಯಾಂಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts