ದೇವರ ದರ್ಶನಕ್ಕೆಂದು ಅಮ್ಮನ ಜತೆ ಬಂದ 2 ವರ್ಷ ಕಂದಮ್ಮ ಕಾವೇರಿ ನದಿಗೆ ಬಲಿಯಾದಳು!

blank

ಶ್ರೀರಂಗಪಟ್ಟಣ: ದೇವಸ್ಥಾನಕ್ಕೆಂದು ಶನಿವಾರ ಪಟ್ಟಣಕ್ಕೆ ಬಂದ ತಾಯಿ-ಮಗಳಿಗೆ ಜಲಕಂಟಕ ಕಾದಿತ್ತು. 2 ವರ್ಷದ ಕಂದಮ್ಮನ ಸಮೇತ ಕಾವೇರಿ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ತಾಯಿಯನ್ನು ಸ್ಥಳೀಯರು ರಕ್ಷಿಸಿದ್ದು, ವಿಧಿಯಾಟದ ಮುಂದೆ ಮಗು ಬದುಕುಳಿಯಲಿಲ್ಲ.

ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಹರೀಶ್​ ಎಂಬುವರ ಪತ್ನಿ ಅಪೂರ್ವ(22) ಅವರನ್ನು ರಕ್ಷಣೆ ಮಾಡಲಾಗಿದೆ. ಈಕೆಯ ಮಗು ಕೀರ್ತನಾ ನದಿಯಲ್ಲಿ ಕಣ್ಮರೆಯಾಗಿದೆ.

ಇದನ್ನೂ ಓದಿರಿ ಬ್ರಹ್ಮಗಿರಿ ಬೆಟ್ಟ ಕುಸಿದು ಐವರು ನಾಪತ್ತೆ, ಮೂರು ದಿನದ ಬಳಿಕ ಒಬ್ಬರ ಮೃತದೇಹ ಪತ್ತೆ

ಅಪೂರ್ವ ತನ್ನ ಮಗುವಿನೊಂದಿಗೆ ಪಟ್ಟಣದ ದೇವಾಲಯಕ್ಕೆ ಆಗಮಿಸಿದ್ದರು. ಬಳಿಕ ಉಕ್ಕಿ ಹರಿಯುತ್ತಿದ್ದ ಕಾವೇರಿ ನದಿಯನ್ನು ವೀಕ್ಷಿಸಲು ವೆಲ್ಲೆಸ್ಲಿ ಸೇತುವೆ ಬಳಿ ಬಂದಿದ್ದಾರೆ. ಈ ವೇಳೆ ದೇವರ ದರ್ಶನಕ್ಕೆಂದು ಅಮ್ಮನ ಜತೆ ಬಂದ 2 ವರ್ಷ ಕಂದಮ್ಮ ಕಾವೇರಿ ನದಿಗೆ ಬಲಿಯಾದಳು!ನಿಯಂತ್ರಣ ತಪ್ಪಿ ಮೆಟ್ಟಿಲುಗಳಿಂದ ಜಾರಿ ಇಬ್ಬರು ನೀರಿನೊಳಗೆ ಬಿದ್ದಿದ್ದಾರೆ. ಇದನ್ನು ಕಂಡ ಸ್ಥಳೀಯರು ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಸುಮಾರು ಎರಡು ಕಿ.ಮೀ. ದೂರದ ಕರೀಘಟ್ಟ ಸೇತುವೆ ಬಳಿ ರಘು ಮತ್ತು ಸ್ನೇಹಿತರು ನದಿಗೆ ಹಾರಿ ಕೊಚ್ಚಿ ಹೋಗುತ್ತಿದ್ದ ತಾಯಿಯನ್ನು ರಕ್ಷಿಸಿದ್ದಾರೆ.

ಶ್ರೀರಂಗಪಟ್ಟಣ ಟೌನ್​ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ತಾಯಿಯನ್ನು ಕರೆದೊಯ್ದು ಸಮಾಧಾನ ಪಡಿಸಿದರು. ಅಗ್ನಿಶಾಮಕ ಸಿಬ್ಬಂದಿ ಮಗುವಿಗಾಗಿ ಶೋಧಕಾರ್ಯ ನಡೆಸಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್​ ಠಾಣೆಯಲ್ಲಿ ಪತಿ ಹರೀಶ್​ ದೂರು ನೀಡಿದ್ದಾರೆ.

ಗಣೇಶ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ, ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ; ಪ್ರಮೋದ್​ ಮುತಾಲಿಕ್​

Share This Article

ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt

salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…

ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts

gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ.  ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…

ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream

ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…