More

    ಆಸ್ಪತ್ರೆಗಳಿಗೆ ಅಲೆದರೂ ಚಿಕಿತ್ಸೆ ಸಿಗದೆ ಮಗು ಸಾವು; ಸಿಎಂ ಮನೆ ಬಳಿ ತಂದೆ ಹೋರಾಟ

    ಬೆಂಗಳೂರು: ಕರೊನಾ ನಡುವೆ ಸುಮಾರು 10 ಆಸ್ಪತ್ರೆಯನ್ನು ಅಲೆದರೂ ಚಿಕಿತ್ಸೆ ಸಿಗದೆ 1 ತಿಂಗಳ ಮಗುವನ್ನು ಕಳೆದುಕೊಂಡ ತಂದೆ, ಸಿಎಂ ಖಾಸಗಿ ನಿವಾಸ ಧವಳಗಿರಿಯ ಮುಂದೆ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ.

    ಆಸ್ಪತ್ರೆಯಲ್ಲಿ ಬೆಡ್​ ಸಿಗದಿದ್ದಕ್ಕೆ ಆತಂಕಗೊಂಡು ಕರೊನಾ ಸೋಂಕಿತನೊಬ್ಬ ಪತ್ನಿ ಮತ್ತು ಮಕ್ಕಳೊಂದಿಗೆ ಮೊನ್ನೆ(ಜು.16), ‘ಸಿಎಂ ಸರ್ ದಯವಿಟ್ಟು ಟ್ರೀಟ್ಮೆಂಟ್​ ಕೊಡ್ಸಿ… ನನಗೆ ಕರೊನಾ ಪಾಸಿಟಿವ್​ ಇದೆ. ಚಿಕಿತ್ಸೆ ಪಡೆಯಲು ಆಸ್ಪತ್ರೆಯಲ್ಲಿ ಎಲ್ಲೂ ಬೆಡ್ ಸಿಗುತ್ತಿಲ್ಲ. ಆಂಬುಲೆನ್ಸ್​ ಬರ್ತಿಲ್ಲ… ಸುಸ್ತಾಗ್ತಿದೆ ಆಸ್ಪತ್ರೆಗೆ ಶಿಫ್ಟ್ ಮಾಡಿ..’ ಎಂದು ಸಿಎಂ ನಿವಾಸ ಕಾವೇರಿ ಬಳಿ ಪರಿಪರಿಯಾಗಿ ಬೇಡಿಕೊಂಡಿದ್ದ ದೃಶ್ಯ ರಾಜ್ಯದ ದುರ್ಗತಿಯನ್ನೇ ಅನಾವರಣ ಮಾಡಿತ್ತು. ಇದೀಗ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯದಿಂದ ತನ್ನ ಮಗು ಕಳೆದುಕೊಂಡ ವ್ಯಕ್ತಿ, ‘ತನಗಾದ ಅನ್ಯಾಯ ಬೇರೆಯವರಿಗೆ ಆಗದಿರಲಿ. ಜವಾಬ್ದಾರಿ ಮರೆತ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಏಕಾಂಗಿಯಾಗಿ ಧರಣಿಗೆ ಕುಳಿತ್ತಿದ್ದರು.

    ಇದನ್ನೂ ಓದಿರಿ ಮದುವೆ ತಂದ ಆಪತ್ತು; ಕೋವಿಡ್​ಗೆ ವರನ ತಂದೆ, ವಧುವಿನ ತಾಯಿ ಬಲಿ; ಒಂದೇ ಕುಟುಂಬದ 32 ಜನರಿಗೆ ಸೋಂಕು

    ಬೆಂಗಳೂರಿನ ಮಂಜುನಾಥ ನಗರದ ನಿವಾಸಿ ವೆಂಕಟೇಶ್ ನಾಯ್ಡು ಅವರ 1 ತಿಂಗಳ ಮಗು ಚಿಕಿತ್ಸೆ ಸಿಗದೆ ಜು.11ರಂದು ಮೃತಪಟ್ಟಿತ್ತು. ಈ ಘಟನೆ ಜುಲೈ 16ರಂದು ತಡವಾಗಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ಡಿಸಿಎಂ ಹಾಗೂ ಸಚಿವರು ಕೂಡ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಸಿಎಂ ಯಡಿಯೂರಪ್ಪ ಮನೆ ಮುಂದೆ ನ್ಯಾಯ ಕೊಡಿಸಿ ಎಂದು ಮೃತ ಮಗುವಿನ ತಂದೆ ಮಗಳ ಫೋಟೋ ಹಿಡಿದು ಕಣ್ಣೀರು ಹಾಕಿತ್ತ ರೋಧಿಸಿದರು.

    ‘ನನ್ನ ಮುಗುವಿನ ಸಾವಿಗೆ ನ್ಯಾಯ ಬೇಕು. ನನಗಾದ ಅನ್ಯಾಯ ಬೇರೆ ಯಾರಿಗೂ ಆಗಬಾರದು. ತಡ ಮಾಡಬೇಡಿ, ದಯವಿಟ್ಟು ಖಾಸಗಿ ಆಸ್ಪತ್ರೆಗಳಿಗೆ ಆದೇಶ ಹೊರಡಿಸಿ. ಇಲ್ಲದೆ ಹೋದರೆ ನನ್ನ ಹೋರಾಟ ಮುಂದುವರಿಯುತ್ತದೆ, ನನ್ನ ಪ್ರಾಣ ಬೇಕಿದ್ದರೆ ಹೋಗಲಿ ಉಪವಾಸ ಮಾಡುತ್ತೇನೆ’ ಎಂದು ಎಚ್ಚರಿಸಿದರು.

    ಪ್ರತಿಭಟನೆಗೆ ಕುಳಿತಿದ್ದ ವೆಂಕಟೇಶ್ ನಾಯ್ಡ್ ಅವರನ್ನು ವಶಕ್ಕೆ ಪಡೆದ ಪೊಲೀಸರು, ಧರಣಿಗೆ ಇದು ಸರಿಯಾದ ಸಮಯವಲ್ಲ ಎಂದು ಮನವೊಲಿಸಿದರು. ಬಳಿಕ ಸಿಎಂ ಭೇಟಿ ಮಾಡಿಸುವುದಾಗಿ ಸಿಎಂ ಕಾವೇರಿ ನಿವಾಸದ ಬಳಿಗೆ ಕರೆದೊಯ್ದರು. ಈ ವೇಳೆ ಪೊಲೀಸರ ಮುಂದೆ ವೆಂಕಟೇಶ್ ತನ್ನ ಸಂಕಟ ಹೇಳಿಕೊಳ್ಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.

    video/ ಬೆಡ್​ ಸಿಗದಿದ್ದಕ್ಕೆ ಹೆಂಡ್ತಿ, ಮಕ್ಕಳ ಜತೆ ಸಿಎಂ ಮನೆಗೆ ಬಂದ ಕರೊನಾ ಸೋಂಕಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts