More

    ಜೈನಮುನಿ ಹತ್ಯೆ ಖಂಡಿಸಿ ವಿನೂತನ ಪ್ರತಿಭಟನೆ

    ವಿಜಯಪುರ: ಚಿಕ್ಕೋಡಿ ತಾಲೂಕಿನ ಹಿರೇಕೊಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕ ಗುರುವಾರ ವಿನೂತನವಾಗಿ ಪ್ರತಿಭಟನೆ ನಡೆಸಿತು.

    ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಿಂದ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಂಬೇಡ್ಕರ್ ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

    ನಂತರ ಇಂದ್ರೇಶ ಜೈನ್ ಹಾಗೂ ನೇಮನಾಥ ಬಾಗೇವಾಡಿ ಎಂಬವರು ಕೇಶ ಮುಂಡನೆ ಮಾಡಿಸಿಕೊಂಡು ಘಟನೆಯನ್ನು ವಿನೂತನವಾಗಿ ಖಂಡಿಸಿದರು. ಜೈನ್ ಸಮುದಾಯದ ಶೀತಲಕುಮಾರ ರೂಗಿ ಮಾತನಾಡಿ, ಈ ರೀತಿ ಬರ್ಬರವಾಗಿ ಜೈನಮುನಿಗಳ ಹತ್ಯೆ ನಡೆದಿರುವುದು ಅತ್ಯಂತ ಹೇಯ ಕೃತ್ಯ. ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯವಿದ್ದರೂ ಸಹ ರಾಜ್ಯ ಸರ್ಕಾರ ಅದಕ್ಕೆ ಒಪ್ಪದೇ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ಜೈನ ಸಮುದಾಯ ಜಗತ್ತಿಗೆ ಅಪಾರ ಕೊಡುಗೆ ನೀಡಿದೆ. ಅಹಿಂಸೆ ಸಂದೇಶ ಸಾರುವ ಮುನಿಗಳ ಹತ್ಯೆ ಖಂಡನೀಯ. ಅಖಂಡ ಹಿಂದು ಸಮಾಜ ಜೈನ ಸಮುದಾಯದ ಜತೆಗಿದೆ. ನ್ಯಾಯ ಕೊಡಿಸಲು ಹೋರಾಟ ನಡೆಸುತ್ತೇವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದು ಕಾರ್ಯಕರ್ತರ ಕೊಲೆಗಳು ನಡೆಯುತ್ತಿವೆ. ಹಿಂದಿನ ಅವಧಿಯಲ್ಲೂ ಇದೇ ಪರಿಸ್ಥಿತಿ ಇತ್ತು. ದೊಡ್ಡ ಸ್ವಾಮೀಜಿಗಳಿಗೆ ರಕ್ಷಣೆ ಇಲ್ಲವೆಂದರೆ ಜನಸಾಮಾನ್ಯರ ಗತಿ ಏನು ಎಂಬ ಆತಂಕ ಕಾಡುತ್ತಿದೆ ಎಂದರು.

    ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮುಖಂಡರಾದ ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ಪ್ರಕಾಶ ಅಕ್ಕಲಕೋಟ, ಮಹಾನಗರ ಪಾಲಿಕೆ ಸದಸ್ಯ ಮಳುಗೌಡ ಪಾಟೀಲ, ಜೈನ ಸಮುದಾಯದ ಮಹಾವೀರ ಪಾರೇಖ್, ಪ್ರವೀಣ ಕಾಸರ, ಭರತ ಧನಶೆಟ್ಟಿ, ಸಮೀರ ಧನಶೆಟ್ಟಿ, ಬಸು ಬಿರಾದಾರ, ಮಲ್ಲಿಕಾರ್ಜುನ ಜೋಗೂರ ಇದ್ದರು.

    ತನಿಖೆಗೆ ಹಾಲಮತ ಸಮಾಜ ಒತ್ತಾಯ
    ಜೈನಮುನಿ ಕಾಮಕುಮಾರ ನಂದಿ ಅವರ ಹತ್ಯೆಯನ್ನು ಹಾಲುಮತದ ಪಟ್ಟದ ಪೂಜ್ಯರು ಜಡೆತಲೆ ಶ್ರೀಗಳು ಹಾಗೂ ಜಿಲ್ಲಾ ಕುರಿಗಾರರ ಸಂಘ ಖಂಡಿಸಿದೆ. ಜಿಲ್ಲಾ ಕುರಿಗಾರ ಸಂಘದ ಅಧ್ಯಕ್ಷ ಬೀರಪ್ಪ ಜುಮನಾಳ, ಹಾಲುಮತ ಪಟ್ಟದ ಪೂಜಾರಿಗಳ ಅಧ್ಯಕ್ಷ ಮಹಾಲಿಂಗರಾಯ ಸೇರಿದಂತೆ ವಿವಿಧ ಕ್ಷೇತ್ರದ ಮಹಾರಾಜರು ಜಂಟಿ ಹೇಳಿಕೆ ನೀಡಿ, ಇದು ಕೇವಲ ಜೈನ ಸಮುದಾಯದ ಮೇಲೆ ನಡೆದ ಕೃತ್ಯವಲ್ಲ, ಎಲ್ಲ ಸಮಾಜದವರ ಮೇಲೆ ನಡೆದ ಕೃತ್ಯವಾಗಿದೆ. ಸರ್ಕಾರ ತಕ್ಷಣ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts