More

    ಬಿಪಿನ್​ ಚಿಕ್ಕಟ್ಟಿ ಶಾಲೆಯಲ್ಲಿ ವಾಷಿರ್ಕ ಸಮ್ಮೇಳನ

    ವಿಜಯವಾಣಿ ಸುದ್ದಿಜಾಲ ಗದಗ
    ನಗರದ ಬಿಪಿನ್​ ಚಿಕ್ಕಟ್ಟಿ ಶಾಲೆಯಲ್ಲಿ ಬುಧವಾರ ವಾಷಿರ್ಕ ಸ್ನೇಹ ಸಮ್ಮೇಳ ಜರುಗಿತು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಮ್ಸ್​ ನಿದೇರ್ಶಕ ಬಸವರಾಜ ಬೊಮ್ಮನಹಳ್ಳಿ, ಚಿಕ್ಕಟ್ಟಿ ಶಾಲೆಯು ಪರಿಸರದಲ್ಲಿ ಬೆರೆತಿದೆ. ನಿಸರ್ಗದ ಮಡಿಲಿನಲ್ಲಿ ಶಾಲೆ ನಿರ್ಮಾಣವಾಗಿದೆ. ಇಂತಹ ಪ್ರಕೃತಿಯಲ್ಲಿ ಶಿಕ್ಷಣ ಪಡೆಯುವುದು ಮಕ್ಕಳ ಮನಸ್ಸಿನ ಮೇಲೆ ಗುಣಾತ್ಮಕ ಪರಿಣಾಮ ಬೀರಲಿದೆ ಎಂದರು.
    ಆಧುನಿಕ ಯುಗದಲ್ಲಿ ಅನೇಕ ಮೂಲಗಳಿಂದ ಮಾಹಿತಿ ಸಿಗುತ್ತದೆ. ಆದರೆ, ಜ್ಞಾನ ಎನ್ನುವುದು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಜ್ಞಾನವಿರುವ ವ್ಯಕ್ತಿ ಜೀವನದಲ್ಲಿ ಎಂತಹ ಕಠಿಣ ಪರಿಸ್ಥಿತಿ ಉಂಟಾದರೂ ಅದನ್ನು ಎದುರಿಸಿ ನಿಲ್ಲುತ್ತಾನೆ. ಅಂತಹ ವಿದ್ಯಾಭ್ಯಾಸ ನೀಡುವ ಶಾಲೆಗಳಲ್ಲಿ ಈ ಚಿಕ್ಕಟ್ಟಿ ಶಾಲೆಯು ಒಂದಾಗಿದೆ. ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಹೊರಬಂದ ಮಕ್ಕಳು ಸದೃಢ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಮಾಡುತ್ತಾರೆ. ವಿದ್ಯಾಥಿರ್ಗಳು ಮೊಬೈಲ್​ ಬಳಕೆಯಿಂದ ದೂರ ಇರಬೇಕು. ಮೊಬೈಲ್​ ಬಳಕೆಯಿಂದ ಮಕ್ಕಳು ಮಾನಸಿಕ ಅಸ್ಥಿರತೆಗೆ ಒಳಗಾಗುತ್ತಿದ್ದಾರೆ. ಕಣ್ಣಿನಿಂದ ಮಾಹಿತಿಯನ್ನು ನೋಡುತ್ತೇವೆ. ಕಿವಿಯಿಂದ ಕೇಳುತ್ತೇವೆ. ಬಾಯಿಯಿಂದ ಮಾತನಾಡುತ್ತೇವೆ. ಇವೆಲ್ಲವುಗಳನ್ನು ನಮ್ಮ ಮನಸ್ಸು ಗ್ರಹಿಸುತ್ತದೆ ಎಂದರು. ಇದರಿಂದ ನಮ್ಮ ಮನಸ್ಸು ಅತೀ ವೇಗವಾಗಿ ಚಲಿಸುತ್ತದೆ ಎಂದರು.
    ಜಿಮ್ಸ್​ ಸಹ ಪ್ರಾಧ್ಯಾಪಕಿ ಡಾ. ರುದ್ರಮ್ಮ ಜೆ ಮಾತನಾಡಿ ಮಕ್ಕಳು ನಿಮ್ಮ ಹಾವ&ಭಾವ, ನಡೆ&ನುಡಿ, ವರ್ತನೆ ಎಲ್ಲವನ್ನು ಗಮನಿಸುತ್ತಿರುತ್ತಾರೆ. ಆದ್ದರಿಂದ ಸರಿಯಾದ ವರ್ತನೆಯನ್ನು ಮಕ್ಕಳಿಗೆ ಕಲಿಸಿರಿ. ಪ್ರತಿದಿನ ಪ್ರಾರ್ಥನೆ, ಯೋಗ ಮುಖ್ಯವಾಗಿ ಮಾಡಲೆಬೇಕು. ಶಾಲೆಯಲ್ಲಿ ಗುರುನಮನ, ತಂದೆ ತಾಯಿ ಆಶಿರ್ವಾದ ಕಾರ್ಯಕ್ರಮ, ಅಜ್ಜಾ ಅಜ್ಜಿ ಸಮಾವೇಶ ಮುಂತಾದ ಕಾರ್ಯಕ್ರಮಗಳನ್ನು ನಡೆಸುವುದರಿಂದ ಮಕ್ಕಳಲ್ಲಿ ಉತ್ತಮವಾದ ಸಂಸತಿ ಬೆಳಸಲು ಸಹಾಯಕವಾಗುತ್ತದೆ. ಮಕ್ಕಳು ಓದುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಅವರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
    ಕಾರ್ಯಕ್ರಮದಲ್ಲಿ ಡಾ. ಬಸವರಾಜ ಬೊಮ್ಮನಹಳ್ಳಿ ಹಾಗೂ ಡಾ. ರುದ್ರಮ್ಮ ಜೆ ಅವರನ್ನು ಚಿಕ್ಕಟ್ಟಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
    ಎಸ್​.ವೈ. ಚಿಕ್ಕಟ್ಟಿ, ದೀಪಾ ಬಂಡಿವಾಡಮಠ, ನಿವೇದಿತಾ ಶಿಸಿರ್ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts