More

    ಜೋಡೆತ್ತಿನ ಗಾಡಿ ಸ್ಪರ್ಧೆಯ ‘ಕಿಂಗ್ ಸೂರ್ಯ’ ಅನಾರೋಗ್ಯದಿಂದ ಸಾವು

    ಚಿಕ್ಕಮಗಳೂರು: ವಿಧಿಯಾಟದ ಮುಂದೆ ಯಾವುದು ಶಾಶ್ವತ ಅಲ್ಲ. ಒಂದು ಜೀವ ಹುಟ್ಟಿದೆ ಎಂದ್ರೆ ಅದಕ್ಕೆ ಅಂತ್ಯ ಕೂಡಾ ಇದೆಯಂತೆ. ಅದು ಮನುಷ್ಯನಲ್ಲಾದರೂ ಇರಬಹುದು ಅಥವಾ ಮೂಖ ಪ್ರಾಣಿಗಳಲ್ಲಾದರೂ ಇರಬಹುದು. ಇದಕ್ಕೆ ಉದಾಹರಣೆ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿದ್ದ ನೆಚ್ಚಿನ ಜೋಡಿ ಎತ್ತಿನಗಾಡಿಯ ಚಾಂಪಿಯನ್ ಸೂರ್ಯ ವಿಧಿವಶವಾಗಿದ್ದಾನೆ.

    ಹೌದು ಕೆಲ ದಿನಗಳ ಹಿಂದೆ ಜೋಡೆತ್ತಿನ ಗಾಡಿ ರೇಸ್‌ನಲ್ಲಿ ನಡೆದ ಅವಘಡದಲ್ಲಿ ಸೂರ್ಯ ಎಂಬ ಹೋರಿ ಕಾಲು ಮುರಿದುಕೊಂಡಿತ್ತು. ಕಾಲು ಮುರಿದುಕೊಂಡ ಹೋರಿಗೆ ಮಾಲೀಕ ಚಿಕಿತ್ಸೆ ಕೋಡ ಕೊಡಿಸುತ್ತಿದ್ದರು. ಆದರೆ ಚಿಕಿತ್ಸೆಯಿಂದ ಚೇತರಿಸಿಕೊಳ್ಳದ ಸೂರ್ಯ ಲಕ್ಷಾಂತರ ಅಭಿಮಾನಿಗಳನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾನೆ.

    12 ಲಕ್ಷ ರುಪಾಯಿಗೂ ಅಧಿಕ ಬೆಲೆಯ ಜೋಡಿ ಎತ್ತಿನ ಗಾಡಿಯಲ್ಲಿ ಕಿಂಗ್ ಆಗಿ ಮೆರೆದಿದ್ದ ಸೂರ್ಯಗೆ ಕಾಲು ಮುರಿದಾಗ ಅಭಿಮಾನಿಗಳು ಬಹಳಷ್ಟು ನೊಂದಿದ್ದರು. ಸೂರ್ಯ ಹೋರಿ ಚೇತರಿಸಿಕೊಂಡು ಮತ್ತೆ ಅಖಾಡದಲ್ಲಿ ಮಿಂಚಲಿ ಎಂದು ದೇವರಲ್ಲಿ ಪ್ರಾರ್ಥಸುತ್ತಿದ್ರು. ಆದ್ರೆ ಸೂರ್ಯ ಹೋರಿ ನಮ್ಮೆಲ್ಲರನ್ನು ಅಗಲಿದ್ದಾನೆ.

    ಒಂದು ಕಡೆ ಅಭಿಮಾನಿಗಳು ಕಣ್ಣೀರಿಟ್ಟರೆ ಮತ್ತೊಂದೆಡೆ ಸೂರ್ಯ ಹೋರಿಯ ಒಡೆಯ ಅಜ್ಜಂಪುರ ತಾಲೂಕಿನ ಚನ್ನಾಪುರದ ನಾಗಣ್ಣ ಮತ್ತು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಸೂರ್ಯ ಹೋರಿಯನ್ನ ನೆನೆಯುತ್ತಾ ಗಳ ಗಳನೆ ಕಣ್ಣೀರು ಹಾಕುತ್ತಿದ್ದಾರೆ. ಜತೆಗೆ ಸೂರ್ಯನನ್ನ ಅಜ್ಜಂಪುರದ ಚನ್ನಾಪುರದಲ್ಲಿ ಊರ ತುಂಬಾ ಮೆರವಣಿಗೆ ಮಾಡಿ ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು ಮಾಲೀಕ ಹೇಳಿದ್ದಾರೆ.

     

    ಎರಡು ಸಾವಿರ ರೂ.ಗೆ ಯುವತಿಯ ಜತೆ ಮಂಚಕ್ಕೆ ಹೋದ ಇನ್ಸ್​ಪೆಕ್ಟರ್​: ಪೊಲೀಸರ ಬಲೆಗೆ ಗಂಡ-ಹೆಂಡ್ತಿ, ಅಪ್ಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts