More

    ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆ ವಾಪಸ್

    ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವರಸಿದ್ಧಿ ವೇಣುಗೋಪಾಲ್ ರಾಜೀನಾಮೆಯನ್ನು ಶನಿವಾರ ವಾಪಸ್ ಪಡೆದಿದ್ದಾರೆ.
    ನಗರಸಭೆಯ 2ನೇ ಅವಧಿಗೆ ಅಧ್ಯಕ್ಷರಾಗಿ ವರಸಿದ್ಧಿ ವೇಣುಗೋಪಾಲ್ ಆಯ್ಕೆಯಾಗಿದ್ದರು. ಇತ್ತೀಚೆಗೆ ಅವರ ಅಧಿಕಾರ ಅವಧಿ ಪೂರ್ಣಗೊಂಡಿದ್ದು, ರಾಜಕೀಯ ಬೆಳವಣಿಗೆಯಿಂದ ರಾಜೀನಾಮೆ ನೀಡಿ ಅಪರ ಜಿಲ್ಲಾಧಿಕಾರಿ ರೂಪಾ ಅವರಿಗೆ 10 ದಿನಗಳ ಹಿಂದೆ ಸಲ್ಲಿಸಿದ್ದರು. ಅವರ ರಾಜೀನಾಮೆ ಅಂಗೀಕಾರವಾಗಲು ಶನಿವಾರ ಕೊನೆಯ ದಿನವಾಗಿತ್ತು. ಆದರೆ ಅವರು ರಾಜೀನಾಮೆ ವಾಪಸ್ ಪಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
    ಒಪ್ಪಂದದ ಮೇರೆ ಅಧ್ಯಕ್ಷರಾಗಿ ವೇಣುಗೋಪಾಲ್ ಅವಧಿ ಮುಗಿದಿದ್ದು, ಇನ್ನು ಮೂರು ತಿಂಗಳು ಅವಕಾಶ ನೀಡುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಸದಸ್ಯರಲ್ಲಿ ಮನವಿ ಮಾಡಿದ್ದರು. ಆಗ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಪಕ್ಷದ ಸೂಚನೆ ಮೇರೆಗೆ ರಾಜೀನಾಮೆ ಸಲ್ಲಿಸಿದ್ದರು.
    ನಗರಸಭೆಯಲ್ಲಿ 35 ಸದಸ್ಯರ ಪೈಕಿ 18 ಮಂದಿ ಬಿಜೆಪಿ, 12 ಮಂದಿ ಕಾಂಗ್ರೆಸ್, 3 ಮಂದಿ ಜೆಡಿಎಸ್ ಹಾಗೂ ಇಬ್ಬರು ಪಕ್ಷೇತರ ಸದಸ್ಯರ ಬಲಹೊಂದಿದೆ. 30 ತಿಂಗಳ ಅವಧಿಯಲ್ಲಿ 15 ತಿಂಗಳ ಅವಧಿಗೆ ವೇಣುಗೋಪಾಲ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಅವರ ರಾಜೀನಾಮೆ ನಂತರ ಬಿಜೆಪಿ 16 ಸದಸ್ಯರು ಧರ್ಮಸ್ಥಳಕ್ಕೆ ಹೋಗಿ ಮುಂದಿನ ಅಧ್ಯಕ್ಷ ರ ಆಯ್ಕೆ ಸುಸೂತ್ರವಾಗಿ ನಡೆಯಬೇಕು ಎಂದು ಒಗ್ಗಟ್ಟು ಪ್ರದರ್ಶಿಸಿದ್ದರು.
    ಜತೆಗೆ ಅಧ್ಯಕ್ಷರಾಗಲು ದೀಪಾ ರವಿಕುಮಾರ್, ಜೆ.ರಾಜು ಮತ್ತು ಮಧುಕುಮಾರ್ ರಾಜ್ ಅರಸ್ ಪ್ರಬಲ ಆಕಾಂಕ್ಷಿಗಳಾಗಿದ್ದರು. ಈಗ ವೇಣುಗೋಪಾಲ್ ರಾಜೀನಾಮೆ ವಾಪಸ್ ಪಡೆದಿರುವುದು ಆಕಾಂಕ್ಷಿಗಳಲ್ಲಿ ನಿರಾಸೆ ಉಂಟುಮಾಡಿದೆ. ಬಿಜೆಪಿ ಹಿಡಿತದಲ್ಲಿರುವ ನಗರಸಭೆಯಲ್ಲಿ ಅಧ್ಯಕ್ಷ್ಷ ಸ್ಥಾನಕ್ಕೆ ಹಾವು ಏಣಿ ಆಟ ಶುರುವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts