More

    ಕರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಮೂಡಿಗೆರೆಯ ಯುವಕರು ಮಾಡಿದ ತಂತ್ರ ಏನು?

    ಚಿಕ್ಕಮಗಳೂರು: ಕರೊನಾ ಸೋಂಕು ಹರಡುವುದನ್ನು ತಡೆಯಲು ತಮ್ಮ ಗ್ರಾಮಕ್ಕೆ ದಿಗ್ಬಂಧನ ಹಾಕಲು ಮುಂದಾದ ಯುವಕರಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಈಗ ಕಾಡು ಸೇರಿದ್ದಾರೆ.

    ಮೂಡಿಗೆರೆ ತಾಲೂಕಿನ ಮರ್ಕುಲೆ ಗ್ರಾಮದ ಯುವಕರ ತಂಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಮುಚ್ಚಲು ಮುಂದಾಯಿತು. ಇದಕ್ಕೆ ಕೆಲವು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಬೇಸರಗೊಂಡ ಯುವಕರು ಕಾಡಿಗೆ ತೆರಳಲು ನಿರ್ಧರಿಸಿದರು.

    ಒಂದು ತಿಂಗಳಿಗೆ ಅಗತ್ಯವಾದಷ್ಟು ಆಹಾರ ಧಾನ್ಯ, ಹೊದಿಕೆ ಸೇರಿದಂತೆ ನಿತ್ಯ ಬಳಸುವ ವಸ್ತುಗಳನ್ನು ಸಂಗ್ರಹಿಸಿ ಬಣಕಲ್ ಸಮೀಪದ ಬಪ್ಲಿ ಗುಡ್ಡಕ್ಕೆ ಯುವಕರ ತಂಡ ತೆರಳಿತು. ಸ್ವತಃ ಅಡುಗೆ ಮಾಡಿಕೊಂಡು ಕಾಡಿನಲ್ಲೇ ತಿಂಗಳು ವಾಸ ಮಾಡಿ ನಂತರ ಗ್ರಾಮಕ್ಕೆ ಹಿಂದಿರುಗುವುದಾಗಿ ಚರಣ್​ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಪ್ರಯಾಣಿಕರ ಗಮನಕ್ಕೆ – ನೀವು ಈ ಬಸ್​ನಲ್ಲಿ ಪ್ರಯಾಣಿಸಿದ್ದೀರಾ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಸೂಚನೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts