More

    ದೇವರ ಉತ್ಸವಗಳಿಂದ ಗ್ರಾಮಗಳು ಸುಭಿಕ್ಷ

    ಮಾಜಿ ಸಚಿವ ಎಂಟಿಬಿ ನಾಗರಾಜ್ ಅಭಿಮತ

    ಚಿಕ್ಕಹುಲ್ಲೂರಿನಲ್ಲಿ ದೀಪೋತ್ಸವ


    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ದೇವರ ಉತ್ಸವ, ಧಾರ್ಮಿಕ ಕಾರ್ಯಗಳಿಂದ ಶಾಂತಿ, ನೆಮ್ಮದಿ ನೆಲೆಸುವುದರೊಂದಿಗೆ ಗ್ರಾಮಗಳು ಸುಭಿಕ್ಷವಾಗಿರುತ್ತವೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.ಹೊಸಕೋಟೆ ತಾಲೂಕು ಕಸಬಾ ಹೋಬಳಿಯ ಚಿಕ್ಕಹುಲ್ಲೂರು ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಈ ಹಿಂದಿನಿಂದಲೂ ಗ್ರಾಮ ದೇವತೆಗಳ ಹಬ್ಬ ಆಚರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಗ್ರಾಮಗಳಲ್ಲಿ ಸಾಮರಸ್ಯ ಮೂಡಿಸಲು ಹಾಗೂ ಬಾಂಧವ್ಯ ಬೆಸೆಯಲು ಹಿರಿಯರು ಇಂಥ ಸಂಪ್ರದಾಯ ಹುಟ್ಟುಹಾಕಿದ್ದಾರೆ. ಇವುಗಳನ್ನು ನಾವೆಲ್ಲರು ಮುಂದುವರಿಸಿಕೊಂಡು ಹೋಗುವ ಜತೆಗೆ ಮುಂದಿನ ಪೀಳಿಗೆಗೂ ಈ ಸಂಪ್ರದಾಯ ಪರಿಚಯಿಸಬೇಕು ಎಂದು ಸಲಹೆ ನೀಡಿದರು.
    ಚಿಕ್ಕಹುಲ್ಲೂರು ಗ್ರಾಮದಲ್ಲಿ ಪ್ರತಿ ವರ್ಷ ವಿಜಯದಶಮಿ ಬಳಿಕ ಗ್ರಾಮದ ಎಲ್ಲರೂ ಒಗ್ಗೂಡಿ ಗ್ರಾಮ ದೇವತೆಗಳ ಹಬ್ಬ ಆಚರಿಸುವ ಮೂಲಕ ಗ್ರಾಮದ ಬಳಿತಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಇಂಥ ಉತ್ತಮ ಸಂಪ್ರದಾಯಗಳಿಗೆ ನಮ್ಮ ನಾಡಿನಲ್ಲಿ ವಿಶೇಷ ಮಾನ್ಯತೆ ಇದ್ದು, ದೇವರ ಕಾರ್ಯಗಳ ಮೂಲಕ ಎಲ್ಲ ಕಡೆ ಉತ್ತಮ ಮಳೆಯಾಗಿ ಸಮೃದ್ಧಿ ಬೆಳೆ ಬರಲಿ ಎಂದು ಆಶಿಸುತ್ತೇನೆ ಎಂದರು.
    ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಚಿಕ್ಕಹುಲ್ಲೂರು ಕೆ.ಸತೀಶ್ ಮಾತನಾಡಿ, ಗ್ರಾಮದಲ್ಲಿ ಪ್ರತಿ ವರ್ಷ ವಿಜಯದಶಮಿ ಹಬ್ಬದ ಬಳಿಕ ಊರ ಹಬ್ಬ ಆಚರಿಸುವುದು ವಾಡಿಕೆ. ಸಪ್ಪಲಮ್ಮ ದೇವರನ್ನು ಮೊದಲು ತರ‌್ನಹಳ್ಳಿ ಗ್ರಾಮದವರು ಪೂಜೆ ಮಾಡಿ, ನಂತರ ಅಲ್ಲಿನ ಸುತ್ತ ಮುತ್ತಲಿನ ಗ್ರಾಮಗಳು ಪೂಜೆ ಸಲ್ಲಿಸಿದ ಬಳಿಕ ನಮ್ಮ ಗ್ರಾಮಸ್ಥರು ಒಮ್ಮತ ನಿರ್ಧಾರದಂತೆ ಉತ್ಸವ ಮಾಡಲಾಗುತ್ತಿದೆ ಎಂದರು.

    ಎಂಟಿಬಿ ಪುಷ್ಪಾರ್ಚನೆ: ಚಿಕ್ಕಹುಲ್ಲೂರಿನ ಗ್ರಾಮ ದೇವತೆಗಳಾದ ಸತ್ಯಮ್ಮ ಸಪ್ಪಲಮ್ಮ, ಗಂಗಮ್ಮ, ಕರಗದಮ್ಮ ಹಾಗೂ ಮುನೇಶ್ವರ ಸ್ವಾಮಿ ದೇವರ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಚಿಕ್ಕಹುಲ್ಲೂರು ಕೆ.ಸತೀಶ್ ನೇತೃತ್ವದಲ್ಲಿ ದೀಪೋತ್ಸವ ಕಾರ್ಯಕ್ರಮ ನಡೆಯಿತು, ಮಾಜಿ ಸಚಿವ ಎಂಟಿಬಿ ನಾಗರಾಜ್ ದೇವರ ಮೂರ್ತಿಗಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಗ್ರಾಮಸ್ಥರೆಲ್ಲ ಸೇರಿ ವಿಶೇಷ ಪೂಜೆ ನೆರವೇರಿಸುವ ಮೂಲಕ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಸಲ್ಲಿಸಿದರು. ಮಹಿಳೆಯರು ದೀಪ ಹೊತ್ತು ದೇವರಿಗೆ ಆರತಿ ಬೆಳಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts