More

    ಪಾಂಡುರಂಗಸ್ವಾಮಿ ದೇಗುಲದಲ್ಲಿ ದೀಪೋತ್ಸವ

    ಬೇಲೂರು: ಕಡೇ ಕಾರ್ತಿಕ ಅಂಗವಾಗಿ ಪಟ್ಟಣದ ಹಳೇ ಪೋಸ್ಟ್ ಆಫೀಸ್ ರಸ್ತೆಯಲ್ಲಿರುವ ಶ್ರೀ ಪಾಂಡುರಂಗಸ್ವಾಮಿ ದೇಗುಲದಲ್ಲಿ ದೀಪೋತ್ಸವ ಕಾರ್ಯಕ್ರಮ ನೂರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ರಾತ್ರಿ ಅದ್ದೂರಿಯಾಗಿ ಜರುಗಿತು.

    ಶ್ರೀ ಪಾಂಡುರಂಗಸ್ವಾಮಿ ದೇವಾಲಯದಲ್ಲಿ ಕಡೇ ಕಾರ್ತಿಕ ವಿಶೇಷ ಪೂಜೆಯು ಬೇಲೂರು ಭಾವಸಾರ ಕ್ಷತ್ರಿಯ ಸಮಾಜದವರು ಮತ್ತು ನಗರದ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ದೇವರಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ಅರ್ಚಕರು ವಿಶೇಷವಾಗಿ ಪೂಜೆ ನೆರವೇರಿಸಿದರೆ, ಮಹಿಳೆಯರು ಕಡೇ ಕಾರ್ತಿಕ ಪೂಜೆ ಅಂಗವಾಗಿ ದೇಗುಲದ ಮುಂಭಾಗ ಮತ್ತು ಒಳ ಆವರಣದಲ್ಲಿ ರಂಗೋಲಿಯ ಚಿತ್ತಾರ ಬಿಡಿಸಿ ಸಾವಿರಾರು ದೀಪಗಳನ್ನು ಹಚ್ಚಿದರು. ಮುಖ್ಯದ್ವಾರದಲ್ಲಿ ಜ್ಯೋತಿ ಹಚ್ಚಿ ಭಕ್ತರನ್ನು ಸ್ವಾಗತಿಸಿದರು.

    ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಭಗವಂತರಾವ್ ಮಾತನಾಡಿ, ದೀಪಾವಳಿ ಕಾರ್ತಿಕ ಮಾಸದ ಅಮಾವಾಸ್ಯೆ ಅಂಗವಾಗಿ ಶ್ರೀ ಪಾಂಡುರಂಗಸ್ವಾಮಿಗೆ ವಿಶೇಷವಾಗಿ ಅಭಿಷೇಕ ಮತ್ತು ಪುಷ್ಪಲಂಕಾರಗಳಿಂದ ಶೃಂಗರಿಸಿ ವಿಶೇಷ ಪೂಜೆ ಸಲ್ಲಿಸಿ ಮಳೆ, ಬೆಳೆ, ಶಾಂತಿ- ನೆಮ್ಮದಿ ನೆಲೆಸಿ, ಜನತೆಗೆ ಆರೋಗ್ಯ ಆಯಸ್ಸು ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.

    ಪೂಜೆಗೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ತಾಲೂಕು ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರಾದ ನಂದಕುಮಾರ್, ಬಾಬುರಾವ್, ಕೃಷ್ಣಮೂರ್ತಿ, ಗಣೇಶ್, ಮಂಜುನಾಥ್, ಕಿರಣ್ ಗುಜರ್, ಜಯಣ್ಣ, ಗಣೇಶ್‌ರಾವ್, ದೀಪಕ್, ಕಾರ್ತಿಕ್, ಗೋಪಿ, ಅರುಣ್, ಸಂಪತ್ ಹಾಗೂ ಮಹಿಳಾ ಮಂಡಳಿಯ ಜ್ಯೋತಿ ಗಣೇಶ್, ಸದಸ್ಯರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts