More

    ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಕ್ಕೆ ಹೆದರಿ ಹೀಗೆ ಮಾಡಿಕೊಂಡಿದ್ದಾರೆ: ಸಚಿವ ಸುಧಾಕರ್​

    ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲ್ಲೂಕಿನ ಹೀರೇನಾಗವಲ್ಲಿ ಗ್ರಾಮದ ಬಳಿಯ ಕಲ್ಲು ಗಣಿಗಾರಿಕೆಯಲ್ಲಿ ಸಂಭವಿಸಿರುವ ಸ್ಫೋಟದ ಬಗ್ಗೆ ಸಚಿವ ಸುಧಾಕರ್​ ಮಾತನಾಡಿದ್ದು, ಕಾನೂನಿನ ಅಡಿಯಲ್ಲಿ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

    ಮಧ್ಯರಾತ್ರಿ 12:30 ನಡೆದಿರುವ ಘಟನೆ ನಿಜವಾಗಿ ಆತಂಕ ತಂದಿದೆ. ಶಿವಮ್ಮೊಗ್ಗದ ದುರಂತದ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿತ್ತು. ಅನಧಿಕೃತ ಕ್ರಷರ್ ನಡೆಯಬಾರದು ಎಂದು ನಾನು ಸಹ ಸೂಚನೆ ನೀಡಿದ್ದೆ. ಇದಾದ ಬಳಿಕ‌ವೂ ಸಹ ಸಭೆಗಳು ನಡೆದಿವೆ. ಹೀಗಿದ್ದರೂ ಘಟನೆ ನಡೆದಿರುವುದು ಆತಂಕಕಾರಿ ವಿಚಾರ ಎಂದರು.

    ಇದನ್ನೂ ಓದಿರಿ: ಶಿವಮೊಗ್ಗ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ: ಚಿಕ್ಕಬಳ್ಳಾಪುರದಲ್ಲಿ ಗಣಿಸ್ಫೋಟಕ್ಕೆ ಐವರು ಬಲಿ

    ಒಟ್ಟು ಆರು ಜನ ಸ್ಪೋಟಕವನ್ನು ಸಂಗ್ರಹ ಮಾಡಿದ್ದರು. ಏಳು ಅಡಿಗೆ ಇಡಬೇಕಾದ ಸ್ಫೋಟಕವನ್ನು 15 ಅಡಿಗೆ ತಜ್ಞರ ಸಹಾಯ ಇಲ್ಲದೆ ಇಟ್ಟಿದ್ದರು. ಹೀಗಾಗಿ ಅವರ ವಿರುದ್ಧ ಕ್ರಮ ಜರುಗಿಸಲಾಗಿತ್ತು. ಇದಾದ ಬಳಿಕೆ ಸ್ಫೋಟಕಗಳನ್ನು ಕಾಡಿನಲ್ಲಿ ಬಚ್ಚಿಟ್ಟಿರಬಹುದು. ನಿನ್ನೆ ರಾತ್ರಿ ಟಾಟಾ ಏಸ್ ಮೂಲಕ ಮತ್ತು ಇಬ್ಬರು ಬೈಕಿನಲ್ಲಿ ಕಾಡಿನಿಂದ ಸ್ಫೋಟಕ ತಂದು ಬಿಸಾಡಿ ಹೋಗಲು ಬಂದಿರುವ ಶಂಕೆ ವ್ಯಕ್ತವಾಗಿದೆ.

    ಆರು ಜನರ ಮೃತರಾದವರಲ್ಲಿ ಓರ್ವ ಹೀರೇನಾಗವಲ್ಲಿ, ಮತ್ತೊರ್ವ ಬಾಗೇಪಲ್ಲಿ, ಮೂವರು ಆಂಧ್ರ ಪ್ರದೇಶ ಹಾಗೂ ಇನ್ನೊರ್ವ ನೇಪಾಳ ಮೂಲದವರು. ಘಟನೆ ಬಗ್ಗೆ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ನಾನು ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು, ಮಾಹಿತಿ ಪಡೆದುಕೊಂಡಿದ್ದೇನೆಂದು ತಿಳಿಸಿದರು.

    ಇಬ್ಬರು ಆಂಧ್ರ ಮೂಲದವ ಹಾಗೂ ಮೂರು ಜನ ಗುಡಿಬಂಡೆ ಮೂಲದವರ ಬಂಧನಕ್ಕೆ ಮುಂದಾಗಿದ್ದಾರೆ. ಅಕ್ರಮವಾಗಿ ಸ್ಫೋಟಕ ಸಾಗಿಸಿದವರ ವಿರುದ್ಧವೂ ಕ್ರಮ ಜರುಗಿಸಲಿದ್ದೇವೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಕ್ಕೆ ಹೆದರಿ ಹೀಗೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತ ಘಟನೆ ಮರುಕಳಿಸದ ಹಾಗೆ ಅಧಿಕಾರಿಗಳು ಕ್ರಮ ಜರುಗಿಸುತ್ತಾರೆಂದರು.

    ಇದನ್ನೂ ಓದಿರಿ: ನಾವಿಬ್ಬರೂ ಈಗಾಗಲೇ ಅಪ್ಪ-ಅಮ್ಮ: ಐಂದ್ರಿತಾ-ದಿಗಂತ್ ಅಚ್ಚರಿಯ ಹೇಳಿಕೆ

    ಮೃತ ಪಟ್ಟವರು ಅಲ್ಲಿ ಕೆಲಸ ಮಾಡುತ್ತಿದ್ದವರು. ಮೊದಲು ಮಾಲೀಕರ ವಿರುದ್ಧ ಕ್ರಮ ಜರುಗಿಸುತ್ತೇವೆ. ಯಾರೇ ಆಗಿದ್ರು ಸರಿ ಅಂತವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಇದು ಅಕ್ರಮವಾಗಿ ನಡೆಯುತ್ತಿರುವ ಕ್ರಶರ್ ಅಲ್ಲ. ಪರವಾನಗಿ ಪಡೆದು ನಡೆಸುತ್ತಿದ್ದ ಕ್ರಶರ್ ಎಂದು ಸುಧಾಕರ್​ ತಿಳಿಸಿದರು. (ದಿಗ್ವಿಜಯ ನ್ಯೂಸ್​)

    ಕೇಂದ್ರ ಸಚಿವರ ಕಾರನ್ನು ಓವರ್​ಟೇಕ್​ ಮಾಡಿದ ಪ್ರವಾಸಿಗರಿಗೆ ಕಾದಿತ್ತು ಬಿಗ್​ ಶಾಕ್​..!

    Web Exclusive | ಹಳಿ ತಪ್ಪಿದ ಹೋಟೆಲ್ ಉದ್ಯಮ: ಖಾದ್ಯ ತೈಲ, ತರಕಾರಿ ತುಟ್ಟಿ; ಜಿಎಸ್​ಟಿ ಮನ್ನಾ ಮಾಡಲು ಉದ್ಯಮಿಗಳ ಆಗ್ರಹ

    ಆಸ್ಪತ್ರೆಯ ಡ್ರೆಸ್ ಚೇಂಜಿಂಗ್ ರೂಮಲ್ಲಿ ಕ್ಯಾಮೆರಾ! ಮೊಬೈಲ್ ಚಾರ್ಜ್​ಗೆ ಹಾಕಿ ರೆಕಾರ್ಡಿಂಗ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts