More

    ನೆರವಿಗೆ ಎದುರುನೊಡುವ ವಿಶೇಷ ಚೇತನರಿಂದಲೇ ಸಹಾಯ ಹಸ್ತ: ಸಂಕಷ್ಟದಲ್ಲಿರುವ ಬಡವರಿಗೆ ದಿನಸಿ ಕಿಟ್

    ಚಿಕ್ಕಬಳ್ಳಾಪುರ: ಕಳೆದೊಂದು ವರ್ಷದಿಂದ ಬಡಮಧ್ಯಮ ವರ್ಗದ ಬದುಕು ಅಷ್ಟೇನೂ ಚೆನ್ನಾಗಿಲ್ಲ. ಅದರಲ್ಲೂ ಕರೊನಾ ಎರಡನೇ ಅಲೆಯ ಸಮಯದಲ್ಲಿ ತೀರಾ ಹದಗೆಟ್ಟಿದೆ‌. ಜನಸಾಮಾನ್ಯರ ಬದುಕೇ ಹೀಗಾದ್ರೆ, ವಿಕಲಚೇತನರ ಬದುಕು ಹೇಗಿರಬೇಕು ಹೇಳಿ?

    ಸರಕಾರವನ್ನೇ ಪರಿಹಾರದ ಹಣವನ್ನೇ ನಂಬಿರುವ ವಿಶೇಷಚೇತನರು ಈ ಸಂಕಷ್ಟದ ಸಮಯದಲ್ಲಿ ವಿಶೇಷಚೇತನರು ಹಾಗೂ ಬಡ ಬಗ್ಗರಿಗೆ ನೆರವು ನೀಡುವ ‌ಮಾದರಿ ಕೆಲಸ ಮಾಡುತ್ತಿದ್ದಾರೆ.

    ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಜಾರಿಗೆ ತಂದಿರುವ ಕಟ್ಟುನಿಟ್ಟಿನ ಲಾಕ್ಡೌನ್ ಕ್ರಮದಿಂದ ಹಾಗೂ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ಕೈಲಾದಷ್ಟು ದುಡಿಮೆ ಮಾಡಿ ಜೀವನ ಸಾಗಿಸಲಾಗದೆ, ಒಪ್ಪೊತ್ತಿನ ಊಟಕ್ಕೂ ಆಹಾರ ಸಾಮಗ್ರಿ ಇಲ್ಲದೆ ಪರದಾಡುತ್ತಿರುವ ಸನ್ನಿವೇಶಗಳು ಜನ ಸಾಮಾನ್ಯರಲ್ಲಿದೆ.

    ಹೀಗಿರುವಾಗ ವಿಶೇಷಚೇತನರು ಬದುಕು ಹೇಗಿರಬಾರದು ಹೇಳಿ..?? ವಿಶೇಷ ಚೇತನರ ನೋವಿಗೆ ಮಾರ್ಧನಿಸಿದ ಕರ್ನಾಟಕ ವಿಶೇಷಚೇತನರ ಸಂಸ್ಥೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳ ದಾನಿಗಳ ನೆರವಿನಿಂದ ಸಂಸ್ಥೆಯ ಪದಾಧಿಕಾರಿಗಳು ತಮ್ಮ ಸ್ನೇಹಿತರೊಡಗೂಡಿ ವಿಶೇಷಚೇತನರಷ್ಟೆ ಅಲ್ಲದೆ, ಎಚ್‍ಐವಿ ಸೋಂಕಿತರು, ಶೋಷಿತ ಮಹಿಳೆಯರು, ವಲಸೆ ಕಾರ್ಮಿಕರು, ಆಟೋ ಚಾಲಕರು, ಲಿಂಗತ್ವ ಅಲ್ಪಸಂಖ್ಯಾತರಲ್ಲಿನ ಕಡುಬಡವರಿಗೆ ದಿನಸಿ ಕಿಟ್ ಮೂಲಕ ನೆರವಾಗಲು ಸನ್ನದ್ಧವಾಗಿದೆ.

    ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳುಳ್ಳ ಕಿಟ್ ಅನ್ನು 6 ವರ್ಗದಲ್ಲಿನ ಬಡವರನ್ನು ಗುರುತಿಸಿ ನೀಡಲಾಗುತ್ತಿದೆ. 7 ಕೆಜಿ ಅಕ್ಕಿ, ಸನ್‍ಪ್ಯೂರ್ ಎಣ್ಣೆ, ಉಪ್ಪು, ಸಕ್ಕರೆ, ಟೀಪುಡಿ, ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಒಟ್ಟು 12 ವಸ್ತುಗಳನ್ನು ಒಳಗೊಂಡ ಒಂದು ಸಾವಿರ ರೂಪಾಯಿ ಮೌಲ್ಯದ ಕಿಟ್‍ಗಳನ್ನು ವಿತರಿsಲು ಸಜ್ಜಾಗಿದೆ. ಮೊದಲ ಹಂತದಲ್ಲಿ 1150 ಮಂದಿಗೆ ಕಿಟ್ ವಿತರಿಸಲು ಸಜ್ಜಾಗಿದೆ. (ದಿಗ್ವಿಜಯ ನ್ಯೂಸ್​)

    ಚೀನಾ ಲೋನ್​ ಆ್ಯಪ್​ ಹಗರಣ; 7 ಕಂಪನಿಗಳ ಆಸ್ತಿ ಜಪ್ತಿ, 76.67 ಕೋಟಿ ರೂ ವಶಕ್ಕೆ

    ಜಿ7 ಶೃಂಗಸಭೆ ಪ್ರವಾಸವನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

    ಕೋವಿಡ್ ನಿಂದ ಸಾಯುವ ಸ್ಥಿತಿಯಲ್ಲಿದ್ದರೂ ‘ಲವ್ ಯು ಜಿಂದಗಿ’ ಎಂದು ಹಾಡು ಹೇಳಿದ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts