More

    ಪ್ರಧಾನಿ ಮೋದಿಯವರನ್ನು ‘ಕಾಯಕಯೋಗಿ’ ಎಂದ ಸಿಎಂ ಯಡಿಯೂರಪ್ಪ: ಭಿನ್ನಮತದ ಬಗ್ಗೆ ಹೇಳಿದ್ದು ಹೀಗೆ…

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿಯವರನ್ನು ಗುಣಗಾನ ಮಾಡಿದರು. ದೇಶ ಕಟ್ಟುವ ಕಾಯಕಕ್ಕೆ ತನ್ನನ್ನು ತಾನೇ ಅರ್ಪಿಸಿಕೊಂಡ ಕಾಯಕಯೋಗಿ ಪ್ರಧಾನಿ ನರೇಂದ್ರ ಮೋದಿಯವರು ಎಂದು ಹೊಗಳಿದರು.

    ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಹಲವು ವರ್ಷಗಳಿಂದ ತುಕ್ಕು ಹಿಡಿದಿದ್ದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿದ್ದಾರೆ. ಪಾರದರ್ಶಕತೆ, ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಭ್ರಷ್ಟಾಚಾರ ನಿಗ್ರಹ ಮಾಡಿ, ಆಡಳಿತ ವ್ಯವಸ್ಥೆಯನ್ನು ಉತ್ತಮಗೊಳಿಸಿದ್ದಾರೆ. ದೇಶದ ಭದ್ರತೆಯನ್ನೇ ಆದ್ಯತೆಯನ್ನಾಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

    ಇದನ್ನೂ ಓದಿ: ಗ್ರಾಮ ಪಂಚಾಯಿತಿ ಮಾಜಿ ಸದಸ್ಯನನ್ನು ತೋಟದಲ್ಲಿ ಅಟ್ಟಾಡಿಸಿಕೊಂಡು ಹೊಡೆದ ಐವರ ಗುಂಪು

    ನರೇಂದ್ರ ಮೋದಿಯವರು ಈ ಅವಧಿಯನ್ನು ಪೂರ್ಣಗೊಳಿಸಿ, ಮತ್ತೊಂದು ಅವಧಿಗೆ ಪ್ರಧಾನಿಯಾದರೆ ಈ ದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬುದು ದೇಶದಲ್ಲಿ 100ರಲ್ಲಿ 70 ಮಂದಿ ಅಪೇಕ್ಷೆ ಪಡುತ್ತಿದ್ದಾರೆ. ಮೋದಿ ಸಂವಿಧಾನವನ್ನು ಎತ್ತಿ ಹಿಡಿದು ಅಧಿಕಾರ ನಡೆಸುತ್ತಿದ್ದಾರೆ. ಮೊದಲ ಅವಧಿಗೆ ಪ್ರಧಾನಿಯಾದ ಮೊದಲ ದಿನವೇ ಹೇಳಿದ್ದರು. ನಮ್ಮ ಸರ್ಕಾರ ಎರಡನೇ ಅವಧಿಗೂ ಆಡಳಿತಕ್ಕೆ ಬರುತ್ತದೆ. ಮೊದಲ ಅವಧಿಯಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳಿಂದಲೇ ಚುನಾಯಿತರಾಗುತ್ತೇವೆ ಎಂದಿದ್ದರು. ಹಾಗೇ ಆಯಿತು. ಮೊದಲ ವರ್ಷದಲ್ಲಿ ಜನಧನ, ಆಯುಷ್ಮಾನ್​ ಭಾರತ್​, ರಸಗೊಬ್ಬರ ಬಳಕೆ, ಮುದ್ರಾ ಯೋಜನೆ, ಜನೌಷಧ ಮಳಿಗೆಗಳಂತಹ ಜನಪರ ಕಾರ್ಯಕ್ರಮಗಳನ್ನು ರೂಪಿಸಿದರು. ಅವೆಲ್ಲವನ್ನೂ 2019ರ ಲೋಕಸಭಾ ಚುನಾವಣೆ ವೇಳೆಗೆ ಜನರ ಎದುರು ಇಟ್ಟು, ಆಶೀರ್ವಾದ ಕೇಳಿದರು. ಮತ್ತೆ ಜಯ ಸಾಧಿಸಿದರು ಎಂದು ಹೇಳಿದರು.

    ಕರ್ನಾಟಕದಲ್ಲಿ ಸೋಲಿಲ್ಲದ ಸರದಾರರು ಎನಿಸಿಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್​.ಮುನಿಯಪ್ಪ, ಎಚ್​.ಡಿ. ದೇವೇಗೌಡರಂತಹ ನಾಯಕರೂ ಸಹ ಮೋದಿಯವರ ಅಲೆಯಲ್ಲಿ ಸೋತರು. ಎರಡನೇ ಅವಧಿಯಲ್ಲೂ ಮೋದಿಯರು ದೇಶದ ಸುರಕ್ಷತೆ, ಹಲವು ದಶಕಗಳಿಂದ ಉಳಿದಿದ್ದ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಿದ್ದಾರೆ.
    ಪ್ರಪಂಚದ ನಾಯಕರಲ್ಲಿ ಅಗ್ರಗಣ್ಯಸ್ಥಾನ ಗಳಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಹಿರಿಮೆ ಹೆಚ್ಚಿಸಿದರು. ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್​ ತೀರ್ಪು ಪಡೆಯುವಲ್ಲಿ ಅವರು ನಡೆಸಿದ ಕಾನೂನು ಸಮರ ಮತ್ತು ಚಾಣಾಕ್ಷತೆಯನ್ನು ಇಡೀ ದೇಶವೇ ಪ್ರಶಂಸೆ ಮಾಡುತ್ತಿದೆ ಎಂದು ಹೇಳಿದ ಯಡಿಯೂರಪ್ಪನವರು, ಕೇಂದ್ರ ಸರ್ಕಾರ ಮೊದಲ ಅವಧಿಯಲ್ಲಿ ಕರ್ನಾಟಕ್ಕೆ ನೀಡಿದ ಕೊಡುಗೆಗಳ ಬಗ್ಗೆಯೂ ವಿವರಣೆ ನೀಡಿದರು. ಇದನ್ನೂ ಓದಿ: ‘ಮೋದಿಯವರು ಪ್ರಧಾನಿಯಾಗಿರದಿದ್ದರೆ ಕೊವಿಡ್​ -19 ಸವಾಲನ್ನು ಎದುರಿಸುವುದೇ ಕಷ್ಟವಾಗಿತ್ತು…’

    ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೊವಿಡ್​-19 ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲಾಗುತ್ತಿದೆ. ಈ ಸಮಯದಲ್ಲಿ ದೇಶದ ಜನರ ಹಿತರಕ್ಷಣೆ ಮಾಡಿ, ಮಹಾಮಾರಿಯಿಂದ ದೇಶವನ್ನು ಸಂರಕ್ಷಿಸಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ. ಆತ್ಮ ನಿರ್ಭರ್​ ಭಾರತ್​ಗಾಗಿ ಬಿಡುಗಡೆ ಮಾಡಿದ 20 ಲಕ್ಷ ಕೋಟಿ ರೂ.ದಿಂದ ಎಲ್ಲ ವಲಯಗಳ ಆರ್ಥಿಕ ಚಟುವಟಿಕೆ ಉತ್ತೇಜನಗೊಂಡಿದ್ದು, ಬಡಜನರಿಗೆ ನೆರವಾಗಿದೆ ಎಂದು ಹೇಳಿದರು.

    ಭಿನ್ನಮತದ ಬಗ್ಗೆ ಮಾತಾಡೋಲ್ಲ

    ಇನ್ನು ಬಿಜೆಪಿ ವಲಯದಲ್ಲಿ ಅಸಮಾಧಾನಿತರು ಸಭೆ ನಡೆಸಿದ್ದಾರೆ ಎಂಬ ವಿಚಾರಕ್ಕೆ ಯಡಿಯೂರಪ್ಪನವರು ಯಾವುದೇ ಉತ್ತರ ನೀಡಲು ನಿರಾಕರಿಸಿದರು. ನಾನು ರಾಜ್ಯದ ಅಭಿವೃದ್ಧಿ ಬಗ್ಗೆ ಅಷ್ಟೇ ಯೋಚನೆ ಮಾಡುತ್ತಿದ್ದೇನೆ. ಸದ್ಯದ ಮಟ್ಟಿಗೆ ನನ್ನ ಕೆಲಸ ಕೊವಿಡ್​-19 ನಿರ್ವಹಣೆ. ಅದರಲ್ಲೇ ಮಗ್ನನಾಗಿದ್ದೇನೆ. ಉಳಿದಿದ್ದರ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ, ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ ಎಂದು ತಿಳಿಸಿದರು.

    ಸರ್ಕಾರಿ ಆಸ್ಪತ್ರೆಗಳಿಗೊಂದು ಸೂಚನೆ

    ಸರ್ಕಾರಿ ಆಸ್ಪತ್ರೆಗಳು ಎಮರ್ಜನ್ಸಿ ಕೇಸ್​​ಗಳನ್ನು ನಿರ್ವಹಣೆ ಮಾಡಲೇಬೇಕು. ಚಿಕಿತ್ಸೆ ನೀಡಬೇಕು ಎಂದು ಯಡಿಯೂರಪ್ಪನವರು ಸೂಚನೆ ನೀಡಿದರು. ಆಸ್ಪತ್ರೆಗಳಲ್ಲಿ ರೋಗಿಗಳನ್ನು ಅಲೆದಾಡಿಸುವ ವಿಚಾರ ನಮ್ಮ ಗಮನಕ್ಕೂ ಬಂದಿದೆ. ಇನ್ನು ಹಾಗೆ ಮಾಡುವಂತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನಿರ್ಗತಿಕರಿಗೆ ಸಹಾಯ ಹಸ್ತ ನೀಡಿದ ಅಂಗವಿಕಲ ಭಿಕ್ಷಕ; ‘ಮನ್ ಕಿ ಬಾತ್​​’ನಲ್ಲಿ ಶ್ಲಾಘಿಸಿದ ಪ್ರಧಾನಿ ಮೋದಿ

    ಇನ್ನು ಮಹಾರಾಷ್ಟ್ರದಿಂದ ಬಂದವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್​ ಕಡ್ಡಾಯವಾಗಿದೆ. ಬೇರೆ ರಾಜ್ಯದಿಂದ ಬರುವವರೂ ಸಹ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಮಾಡಲೇಬೇಕು ಎಂದು ಸಿಎಂ ಹೇಳಿದರು.

    ಮೈ ಭೀ ದುಃಖಿ ಹ್ಞೂ ಅಂತಾರೆ ಪ್ರಧಾನಿ: ಮಲ್ಲಿಕಾರ್ಜುನ ಖರ್ಗೆ ಟೀಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts