More

    ಲಾಕ್ಡೌನ್ನಲ್ಲೂ ಶಂಕರನ ಉಚಿತ ಸೇವೆ

    ವಿಶಾಲ್ ಶಿಂಧೆ ದೋರನಹಳ್ಳಿ
    ಇಡೀ ದೇಶ ಕರೊನಾ ವೈರಸ್ನಿಂದ ತತ್ತರಿಸಿದ್ದು ಈಗಾಗಲೇ ಸರ್ಕಾರ ಆರಂಭಿಸಿರುವ ಕರೊನಾ ನಿಧಿಗೆ ಸಾಕಷ್ಟು ದಾನಿಗಳು ಉದಾರವಾಗಿ ನೆರವು ನೀಡುತ್ತಿದ್ದು, ಈ ನಿಧಿಗೆ ಇಬ್ಬರೂ ಪೊಲೀಸ್ ಅಧಿಕಾರಿಗಳು ತಮ್ಮ ತಿಂಗಳೊಪ್ಪತ್ತಿನ ವೇತನ ಅರ್ಪಿಸಿದರೆ ಈ ತುರ್ತು ಪರಿಸ್ಥಿತಿಯಲ್ಲೂ ಗರ್ಭಿ ಣಿಯರಿಗೆ ಆಟೋ ಚಾಲಕನೊಬ್ಬ ಉಚಿತ ಸೇವೆ ನೀಡುವ ಮೂಲಕ ನಾಗರಿಕ ಸಮಾಜದಲ್ಲಿ ಮಾದರಿ ಎನಿಸಿಕೊಂಡಿದ್ದಾನೆ.

    ಖಾಕಿ ಎಂದರೆ ಭಯ ಅವರು ಮಾತನಾಡಲು ನಿಲ್ಲಿಸಿದರೂ ಎಲ್ಲಿ ಹೊಡೆಯುತ್ತಾರೊ ಎಂಬ ಆತಂಕ. ಪೊಲೀಸರ ಹೃದಯ ಕಲ್ಲು ಅವರದ್ದು ಒರಟು ಭಾಷೆ ಬಾಯಿ ಬಿಟ್ಟರೆ ಏನಾದರೂ ಬೈದು ಬಿಡುತ್ತಾರೆ ಎಂದು ದೂಷಿಸುವವರೆ ಹೆಚ್ಚು. ಇನ್ನು ಮನಬಂದಂತೆ ಆಟೋಗಳ ಚಾಲಕರು ಚಾರ್ಜ್ ಕೇಳುತ್ತಾರೆ. ಆಟೋದಲ್ಲಿ ಹೋದರೆ ಜೀವಂತ ಮುಟ್ಟುತ್ತೇವೆ ಎಂಬ ಭರವಸೆಯಿಲ್ಲ ಎಂಬ ಭಯ. ಆದರೆ ಇವುಗಳಿಗೆ ಅಪವಾದವೆಂಬಂತೆ ಇಬ್ಬರು ಪೋಲಿಸ್ ಅಧಿಕಾರಿಗಳು ಮತ್ತೊಬ್ಬ ಸಾಮಾನ್ಯ ಆಟೋ ಚಾಲಕ ಕರೊನಾ ಕರಿನೆರಳಿನಲ್ಲೂ ಸಹಾಯ ಹಸ್ತ ನೀಡಿದ್ದಾರೆ.

    ಶಹಾಪುರ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಪಿಐ ಶ್ರೀನಿವಾಸ್ ಅಲ್ಲಾಪೂರ್ ಹಾಗೂ ಭೀಮರಾಯನ ಗುಡಿಯ ಪಿಎಸ್ಐ ರಾಜಕುಮಾರ ಜಾಮಗೊಂಡ ತಮ್ಮ ಒಂದು ತಿಂಗಳ ಸಂಬಳವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಅದರಂತೆ ಗ್ರಾಮದ ಶಂಕರ ಮಲಗೊಂಡ ಎಂಬ ಯುವಕ ಸದಾ ಗಭರ್ೀಣಿಯರಿಗೆ ಉಚಿತವಾದ ಸೇವೆ ನೀಡಿ ಮನವಿಯತೆ ಮೆರೆಯುತ್ತಿದ್ದಾನೆ.

    ಕರೊನಾ ವೈರಸ್ ತನ್ನ ಅಟ್ಟಹಾಸ ಹೆಚ್ಚಿಸುತ್ತಲೇ ಇದೆ. ಇದರಿಂದ ದೇಶದ, ರಾಜ್ಯದ ಮೇಲೆ ಗಂಭಿರ ಪರಿಣಾಮಗಳು ಉಂಟಾಗಿವೆ. ಲಾಕ್ಡೌನ್ ಘೋಷಣೆಯಾದ ನಂತರ ಸರ್ಕಾರಕ್ಕೆ ಆಥರ್ಿಕವಾಗಿ ಹೊಡೆತ ಬಿದ್ದಿದೆ.ಇಂಥ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯದ ಜತೆ ಸಾಮಾಜಿಕ ಪ್ರಜ್ಞೆ ಮೆರೆದಿರುವುದಕ್ಕೆ ಜನರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ದೋರನಹಳ್ಳಿಯಲ್ಲಿ ವಾಹನಗಳ ಸೌಕರ್ಯ ಇಲ್ಲವಾಗಿರುವ ಈ ಸಮಯದಲ್ಲಿ ಅವನ ಶಂಕರ ಆಟೋ ಸೇವೆ ಹಲವು ಗಭರ್ಿಣಿ ಮತ್ತು ಮಕ್ಕಳ ಜೀವ ಉಳಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎನಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts