More

    ಗರ್ಭಿಣಿಯರು ರಕ್ತ ಪರೀಕ್ಷೆ ಮಾಡಿಸಿಕೊಳ್ಳಲಿ

    ಯಲಬುರ್ಗಾ: ತಾಯಿ ಮಗುವಿನ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಸರ್ಕಾರಗಳು ಹಲವು ಯೋಜನೆ ಜಾರಿಗೊಳಿಸಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮುಖ್ಯ ವೈದ್ಯಾಧಿಕಾರಿ ಕೃಷ್ಣ ಹೊಟ್ಟಿ ತಿಳಿಸಿದರು.

    ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪಿಎಂ ಸುರಕ್ಷಿತ ಮಾತೃತ್ವ ಅಭಿಯಾನ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಯಿ ಮರಣ ಕಡಿಮೆ ಮಾಡುವ ಜತೆಗೆ, ಮಕ್ಕಳ ಜನನ ಪ್ರಮಾಣ ಹೆಚ್ಚಿಸಬೇಕಿದೆ ಎಂದರು.

    ಗರ್ಭಿಣಿಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಮಾರಣಾಂತಿಕ ಕಾಯಿಲೆ ಹರಡುವಿಕೆಯಿಂದ ದೂರವಿರಬಹುದು. ರೋಗಗಳ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯಬೇಕು ಎಂದರು.

    ಸ್ತ್ರೀರೋಗ ತಜ್ಞ ಮಹಾಂತೇಶ ಮಾತನಾಡಿ, ಬ್ಯಾಕ್ಟೀರಿಯಾದಿಂದ ಸಿಫಿಲಿಸ್ ರೋಗ ಗರ್ಭಿಣಿಯರಿಗೆ ಬರಬಹುದು. ಹೀಗಾಗಿ ಹೆರಿಗೆ ಮುನ್ನ ಗರ್ಭಿಣಿಯರು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

    ಮಕ್ಕಳ ತಜ್ಞೆ ಮೀನು ಮಾತನಾಡಿದರು. ಎಚ್‌ಐವಿ, ಸಿಫಿಲಿಸ್ ಹಾಗೂ ಹೆಪಾಟೈಟಿಸ್ ಸೋಂಕಿನಿಂದ ರಕ್ಷಿಸಲು ಗರ್ಭಿಣಿಯರಿಗೆ ರಕ್ತ ಪರೀಕ್ಷೆ ಮಾಡಲಾಯಿತು.

    ಐಸಿಟಿಸಿ ಸಮಾಲೋಚಕ ಕಾಳಪ್ಪ ಬಡಿಗೇರ, ಚಂದ್ರಶೇಖರ್ ನಾಯಕ, ಹದಿಹರೆಯದವರ ಆರೋಗ್ಯ ಆಪ್ತಸಮಾಲೋಚಕ ಶರಣಪ್ಪ ಉಪ್ಪಾರ, ತಾಲೂಕು ಆಶಾ ಮೇಲ್ವಿಚಾರಕಿ ಮಂಜುಳಾ ಛಲವಾದಿ, ಕಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಶ್ರೀದೇವಿ ರೆಡ್ಡಿರ, ಶಿಲ್ಪಾ ಭಜಂತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts