More

    ಚಿದಾನಂದ ಕೋರೆ ಸೇವೆ ಅಮೋಘ

    ಚಿಕ್ಕೋಡಿ: ಕಾರ್ಖಾನೆಗಳಿಗೆ ಕಬ್ಬು ಕಳುಹಿಸಲು ಪರದಾಡುವ ಪರಿಸ್ಥಿತಿ ಇದ್ದ ಸಂದರ್ಭದಲ್ಲಿ ದಿ.ಚಿದಾನಂದ ಕೋರೆ ಅವರು 1969ರಲ್ಲಿ ಕಾರ್ಖಾನೆ ಸ್ಥಾಪಿಸಿದ್ದರು. ಕಾರ್ಖಾನೆಯ ರೂವಾರಿ ಡಾ.ಪ್ರಭಾಕರ ಕೋರೆ ಮಾರ್ಗದರ್ಶನದಲ್ಲಿ ಹೆಮ್ಮರವಾಗಿ ಬೆಳೆದುನಿಂತಿದೆ ಎಂದು ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು.

    ಪಟ್ಟಣದ ಕಾರ್ಖಾನೆ ಆವರಣದಲ್ಲಿ ಸೋಮವಾರ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಸ್ಥಾಪಕ ಅಧ್ಯಕ್ಷ ದಿ.ಚಿದಾನಂದ ಬಸಪ್ರಭು ಕೋರೆ ಅವರ 42ನೇ ಪುಣ್ಯಸ್ಮರಣೆ ನಿಮಿತ್ತ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾತನಾಡಿ, ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆ ಮಹಾಮಂಡಳ ನವದೆಹಲಿಯ ನಿರ್ದೇಶಕ ಅಮಿತ ಕೋರೆ ನೇತೃತ್ವದಲ್ಲಿ ಕಾರ್ಖಾನೆಯು ಹಂತ ಹಂತವಾಗಿ ವಿಸ್ತರಣೆಗೊಂಡು ಇಂದು 10,000 ಮೆ.ಟನ್ ಕಬ್ಬು ನುರಿಸುವುದರೊಂದಿಗೆ 28.7 ಮೆ.ವಾಟ್ ಸಹ ವಿದ್ಯುತ್ ಘಟಕ, 30 ಕೆಎಲ್‌ಪಿಡಿ ಡಿಸ್ಟಿಲರಿ ಮತ್ತು ಎಥೆನಾಲ್ ಉಪ ಉತ್ಪಾದನಾ ಘಟಕ ಹೊಂದಿದೆ ಎಂದರು.

    ಕಾರ್ಖಾನೆ ಹೊಸ 200 ಕೆಎಲ್‌ಪಿಡಿ ಇಥೆನಾಲ್, ಡಿಸ್ಟಿಲರಿ ಘಟಕ ನಿರ್ಮಿಸುತ್ತಿದ್ದು, ಶೀಘ್ರ ಕಾರ್ಯಾರಂಭಿಸಲಿದೆ. ಕಾರ್ಖಾನೆಯು ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿ ಪಡೆದುಕೊಂಡಿದೆ.ರೈತ ಸದಸ್ಯರಿಗೆ, ಬಡವರಿಗೆ, ಕಾರ್ಮಿಕರಿಗೆ ಕಲ್ಪವೃಕ್ಷವಾಗಿದೆ ಎಂದರು.

    ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ಸಂಚಾಲಕರಾದ ಭರತೇಶ ಬನವಣೆ, ಅಜಿತ ದೇಸಾಯಿ, ಪರಸಗೌಡ ಪಾಟೀಲ, ಸಂದೀಪ ಪಾಟೀಲ, ಮಹಾವೀರ ಕಾತ್ರಾಳೆ, ಭೀಮಗೌಡ ಪಾಟೀಲ, ಅಣ್ಣಾಸಾಬ ಇಂಗಳೆ, ನಂದಕುಮಾರ ನಾಶಿಪುಡಿ, ಮಲ್ಲಪ್ಪ ಮೈಶಾಳೆ, ಚೇತನ ಪಾಟೀಲ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್.ಟಿ.ದೇಸಾಯಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts