More

    ಐಪಿಎಲ್​ನಲ್ಲಿ ಮಿಂಚಿದ್ದ ಯುವ ವೇಗಿಯ ತಂದೆ ಕೋವಿಡ್​ಗೆ ಬಲಿ

    ರಾಜ್​ಕೋಟ್​: ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್​ ಪರ ಮಿಂಚಿದ್ದ ಸೌರಾಷ್ಟ್ರದ ಯುವ ವೇಗಿ ಚೇತನ್​ ಸಕಾರಿಯಾ ಅವರ ತಂದೆ ಕಂಜಿಭಾಯ್​ ಸಕಾರಿಯಾ ಕರೊನಾ ಸೋಂಕಿನಿಂದ ನಿಧನ ಹೊಂದಿದ್ದಾರೆ. ಕಳೆದ ಕೆಲ ದಿನಗಳಿಂದ ಸೋಂಕಿನ ಜತೆಗೆ ಹೋರಾಡುತ್ತಿದ್ದ 42 ವರ್ಷದ ಕಂಜಿಭಾಯ್​ ಭಾನುವಾರ ಭಾವ್​ನಗರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

    22 ವರ್ಷದ ಎಡಗೈ ವೇಗಿ ಚೇತನ್​ ಸಕಾರಿಯಾ ಇತ್ತೀಚೆಗೆ ಸ್ಥಗಿತಗೊಂಡ ಐಪಿಎಲ್​ 14ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್​ ಪರ ಆಡಿದ 7 ಪಂದ್ಯಗಳಲ್ಲಿ 7 ವಿಕೆಟ್​ ಕಬಳಿಸಿ ಗಮನಸೆಳೆದಿದ್ದರು. ಸಯ್ಯದ್​ ಮುಸ್ತಾಕ್​ ಅಲಿ ಟ್ರೋಫಿ ಮತ್ತು ವಿಜಯ್​ ಹಜಾರೆ ಟ್ರೋಫಿಯಲ್ಲಿ ಸೌರಾಷ್ಟ್ರ ಪರ ಉತ್ತಮ ನಿರ್ವಹಣೆ ತೋರಿದ್ದ ಸಕಾರಿಯಾ ಅವರನ್ನು ಕಳೆದ ಹರಾಜಿನಲ್ಲಿ ರಾಜಸ್ಥಾನ ತಂಡ 1.20 ಕೋಟಿ ರೂ. ಮೊತ್ತಕ್ಕೆ ಖರೀದಿಸಿತ್ತು. ಕಳೆದ ವರ್ಷದ ಐಪಿಎಲ್​ ವೇಳೆ ಅವರು ಆರ್​ಸಿಬಿ ತಂಡದ ನೆಟ್​ ಬೌಲರ್​ ಆಗಿದ್ದರು.

    ಇದನ್ನೂ ಓದಿ: ಐಪಿಎಲ್​ ಟೂರ್ನಿಯ ಉಳಿದ ಭಾಗ ಭಾರತದಲ್ಲಿ ನಡೆಯಲ್ಲ ಎಂದ ಗಂಗೂಲಿ

    ಸಕಾರಿಯಾಗೆ ನೋವಿನ ಮೇಲೆ ನೋವು
    ಚೇತನ್​ ಸಕಾರಿಯಾ ಕುಟುಂಬಕ್ಕೆ ಈ ವರ್ಷ ಶೋಕದ ಮೇಲೆ ಶೋಕ ಎದುರಾಗಿದೆ. ಈ ಮುನ್ನ ಅವರ ಅಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದಾಗಿ ಕುಟುಂಬದ ಭಾರವೆಲ್ಲ ಚೇತನ್​ ಸಕಾರಿಯಾ ಹೆಗಲ ಮೇಲೆ ಬಿದ್ದಿತ್ತು. ಟೆಂಪೋ ಚಾಲಕರಾಗಿದ್ದ ಚೇತನ್​ ಸಕಾರಿಯಾ ತಂದೆ ಪುತ್ರದ ಕ್ರಿಕೆಟ್​ ತರಬೇತಿ ವೆಚ್ಚ ಭರಿಸಲು ಅಪಾರವಾಗಿ ಶ್ರಮಿಸಿದ್ದರು. ಚೇತನ್​ ಸೌರಾಷ್ಟ್ರ ಪರ 15 ಪ್ರಥಮ ದರ್ಜೆ ಪಂದ್ಯ ಆಡಿದ್ದು, 41 ವಿಕೆಟ್​ ಕಬಳಿಸಿದ್ದಾರೆ.

    ಚೇತನ್​ ಸಕಾರಿಯಾ ತಂದೆಯ ನಿಧನಕ್ಕೆ ರಾಜಸ್ಥಾನ ರಾಯಲ್ಸ್​ ತಂಡ ಸಂತಾಪ ಸೂಚಿಸಿದ್ದು, ನಾವು ಚೇತನ್​ ಜತೆಗೆ ಸಂಪರ್ಕದಲ್ಲಿದ್ದು, ಈ ಕಠಿಣ ಸಮಯದಲ್ಲಿ ಅವರಿಗೆ ಅಗತ್ಯವಿರುವ ಎಲ್ಲ ಸಹಾಯವನ್ನೂ ಮಾಡಲಿದ್ದೇವೆ ಎಂದು ಹೇಳಿದೆ.

    ಐಪಿಎಲ್​ನಿಂದ ತವರಿಗೆ ಮರಳುವ ಮುನ್ನ ಗುಡ್​ನ್ಯೂಸ್​ ಪಡೆದ ಪ್ಯಾಟ್​ ಕಮ್ಮಿನ್ಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts