More

    ನಾಡೋಜ ಚೆನ್ನವೀರ ಕಣವಿ ಅಂತ್ಯಸಂಸ್ಕಾರ; ಸರ್ಕಾರಿ ಗೌರವದೊಂದಿಗೆ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ

    ಧಾರವಾಡ: ಇಂದು ನಿಧನರಾದ ಕವಿ ನಾಡೋಜ ಚೆನ್ನವೀರ ಕಣವಿ ಅವರ ಅಂತ್ಯಸಂಸ್ಕಾರ ವೀರಶೈವ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವದೊಂದಿಗೆ ಇದೀಗವಷ್ಟೇ ನೆರವೇರಿತು.

    ಧಾರವಾಡ ಹೊರವಲಯದಲ್ಲಿರುವ ಕಣವಿ ಕುಟುಂಬದ ಸೃಷ್ಟಿ ಫಾರ್ಮ್​ ಹೌಸ್​ನಲ್ಲಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಅವರ ಹಿರಿಯ ಪುತ್ರ ಶಿವಾನಂದ ಕಣವಿ ಅವರು ಅಂತಿಮ ವಿಧಿ-ವಿಧಾನಗಳನ್ನು ಕೈಗೊಂಡರು. ಕಣವಿ ಅವರ ಇಚ್ಛೆಯಂತೆ ಪತ್ನಿ ಶಾಂತಾದೇವಿ ಅವರ ಸಮಾಧಿ ಬಳಿಯೇ ಅವರ ಅಂತಿಮಕ್ರಿಯೆ ನಡೆಸಲಾಯಿತು.

    ಇದನ್ನೂ ಓದಿ: ಉದ್ಯೋಗಿಗೆ ಹೊಚ್ಚಹೊಸ ಬೆಂಝ್ ಕಾರನ್ನೇ ಗಿಫ್ಟ್ ಕೊಟ್ಟ ಮಾಲೀಕ!

    ಸರ್ಕಾರದ ಸಕಲ ಗೌರವದೊಂದಿಗೆ ಅವರ ಅಂತ್ಯಸಂಸ್ಕಾರ ನಡೆದಿದ್ದು, ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ವಂದನೆ ಸಲ್ಲಿಸಿದರು.

    ಇದನ್ನೂ ಓದಿ: ಪೊಲೀಸ್ ಕಾನ್​ಸ್ಟೆಬಲ್​ ಮತ್ತು ಪತ್ನಿ ಇಬ್ಬರಿಂದಲೂ ಆತ್ಮಹತ್ಯೆ ಯತ್ನ; ಸಾವಿಗೀಡಾದ ಹೆಂಡತಿ, ಪೇದೆ ಪರಿಸ್ಥಿತಿ ಚಿಂತಾಜನಕ

    ಅಂತ್ಯಸಂಸ್ಕಾರ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕ ಅರವಿಂದ ಬೆಲ್ಲದ ಮಾತ್ರವಲ್ಲದೆ ಅನೇಕ ಸಾಹಿತಿಗಳು, ಜನಪ್ರತಿನಿಧಿಗಳು,‌ ಮಠಾಧೀಶರು ಪಾಲ್ಗೊಂಡು ಅಂತಿಮ ದರ್ಶನವನ್ನು ಪಡೆದರು.

    ಹೆಬ್ಬಾವನ್ನು ಹಿಡಿದೆಳೆದು ಅದರ ಮೇಲೆ ಬಸ್​ ಹತ್ತಿಸಿ ಹಿಂಸಿಸಿ ಕೊಂದು ಸಂಭ್ರಮಿಸಿದ ಜನರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts