More

    VIDEO: ಅಭ್ಯಾಸ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್

    ದುಬೈ: ಐಪಿಎಲ್ ಟೂರ್ನಿಗಾಗಿ ಯುಎಇಗೆ ಕಾಲಿಟ್ಟು 2 ವಾರ ಕಳೆದ ನಂತರ ಕೊನೆಗೂ ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಶುಕ್ರವಾರ ಅಭ್ಯಾಸ ಆರಂಭಿಸಿದೆ. ಕರೊನಾ ಸೋಂಕಿತರಾಗಿರುವ ವೇಗಿ ದೀಪಕ್ ಚಹರ್ ಹಾಗೂ ಋತುರಾಜ್ ಗಾಯಕ್ವಾಡ್ ಹೊರತಾಗಿ ತಂಡದ ಇತರ ಆಟಗಾರರು ನೆಟ್ಸ್‌ನಲ್ಲಿ ಅಭ್ಯಾಸಕ್ಕಿಳಿದಿದ್ದಾರೆ. ಇತರೆಲ್ಲ ತಂಡಗಳು ಈಗಾಗಲೆ ಅಭ್ಯಾಸ ಆರಂಭಿಸಿದ್ದರೂ, ಸಿಎಸ್‌ಕೆ ತಂಡದ ಒಟ್ಟು 13 ಸದಸ್ಯರಿಗೆ ಸೋಂಕು ದೃಢಪಟ್ಟ ಕಾರಣ ಎಲ್ಲರೂ ಹೆಚ್ಚುವರಿ 6 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಿದ್ದರು. ಗುರುವಾರ ನಡೆದ ಕೊನೇ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ಕಾರಣ ಅಭ್ಯಾಸಕ್ಕೆ ಅವಕಾಶ ಲಭಿಸಿದೆ. ಚಹರ್, ಗಾಯಕ್ವಾಡ್ ಮಾತ್ರ 14 ದಿನಗಳ ಕ್ವಾರಂಟೈನ್‌ನ ಕೊನೆಯಲ್ಲಿ ಮತ್ತೆ ಪರೀಕ್ಷೆಗೆ ಒಳಗಾಗಲಿದ್ದು, ನೆಗೆಟಿವ್ ಬಂದರೆ ಅಭ್ಯಾಸಕ್ಕೆ ಇಳಿಯಲಿದ್ದಾರೆ.

    ಇದನ್ನೂ ಓದಿ: ಪಾಕಿಸ್ತಾನದ ಬ್ಯಾಟ್ಸ್‌ಮನ್ ಬಾಬರ್ ಅಜಮ್ ವಿರುದ್ಧ ಅಭಿಮಾನಿಗಳು ಗರಂ..!

    ‘ತಂಡದ ಅಭ್ಯಾಸ ಶುಕ್ರವಾರದಿಂದ ಆರಂಭವಾಗಲಿದೆ. ಕರೊನಾ ಸೋಂಕಿಗೆ ಒಳಗಾಗಿರುವ 13 ಮಂದಿ ಹೊರತುಪಡಿಸಿ ಉಳಿದ ಆಟಗಾರರು ಅಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಂಡದ ಸಿಇಒ ಕೆಎಸ್ ವಿಶ್ವನಾಥನ್ ತಿಳಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ ಹೊರತುಪಡಿಸಿ ಉಳಿದ ಎಲ್ಲ ತಂಡಗಳು ಈಗಾಗಲೇ ಅಭ್ಯಾಸ ಆರಂಭಿಸಿವೆ. ಸೆ.19ರಂದು ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್‌ಕೆ ತಂಡಗಳು ಎದುರಾಗುವ ಸಾಧ್ಯತೆಗಳಿವೆ.

    ಇದನ್ನೂ ಓದಿ: VIDEO | ಅಭ್ಯಾಸದ ವೇಳೆ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ವಿರಾಟ್ ಕೊಹ್ಲಿ

    ಹಿರಿಯ ಆಟಗಾರ ಹರ್ಭಜನ್ ಸಿಂಗ್ ಅನುಪಸ್ಥಿತಿ ಕುರಿತು ಪ್ರತಿಕ್ರಿಯಿಸಲು ವಿಶ್ವನಾಥನ್ ನಿರಾಕರಿಸಿದರು. ಸಿಎಸ್‌ಕೆ ತಂಡದಲ್ಲಿ ಹರ್ಭಜನ್ ಸಿಂಗ್ ಅಲ್ಲದೆ, ಇಮ್ರಾನ್ ತಾಹಿರ್, ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್, ಲೆಗ್‌ಸ್ಪಿನ್ನರ್ ಪೀಯುಷ್ ಚಾವ್ಲ ಸ್ಪಿನ್ ಬೌಲರ್ ಗಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts