More

    ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಬಿಗ್ ಶಾಕ್..!

    ದುಬೈ: 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಣೆ ಬರಹವೇ ಸರಿ ಇಲ್ಲ. ಟೂರ್ನಿ ಆರಂಭದಲ್ಲೇ ಅನುಭವಿ ಆಟಗಾರರಾದ ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ವೈಯಕ್ತಿಕ ಕಾರಣದಿಂದ ಹಿಂದೆ ಸರಿದ ಕಾರಣ ತಂಡ ದೊಡ್ಡ ಆಘಾತ ಎದುರಿಸಿತ್ತು. ಅನುಭವಿ ಪಡೆಯನ್ನೇ ಹೊಂದಿದ್ದರೂ ಹೀನಾಯ ನಿರ್ವಹಣೆ ಮೂಲಕ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದೆ. ಇದೀಗ ತಂಡದ ಆಲ್ರೌಂಡರ್ ಡ್ವೇನ್ ಬ್ರಾವೊ ಕೂಡ ಗಾಯದ ಸಮಸ್ಯೆಯಿಂದ ಲೀಗ್‌ನಿಂದ ಹೊರಬಿದ್ದಿದ್ದಾರೆ.

    ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ ಡ್ವೇನ್ ಬ್ರಾವೊ ಗಾಯದ ಸಮಸ್ಯೆಯಿಂದಾಗಿ ಲೀಗ್‌ನಿಂದ ಹೊರಬಿದ್ದಿದ್ದಾರೆ. ಇದರೊಂದಿಗೆ ಈಗಾಗಲೇ ಲೀಗ್‌ನಿಂದ ಹೊರಬೀಳುವ ಸನಿಹದಲ್ಲಿರುವ ಸಿಎಸ್‌ಕೆ ತಂಡಕ್ಕೆ ಭಾರೀ ಹಿನ್ನಡೆಯದಂತಾಗಿದೆ. 37 ವರ್ಷದ ಬ್ರಾವೊ, ಅಕ್ಟೋಬರ್ 17 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗಾಯದಿಂದಾಗಿ ಕಡೇ ಓವರ್ ಎಸೆದಿರಲಿಲ್ಲ. ಬಳಿಕ ನಾಯಕ ಧೋನಿ, ಬೌಲಿಂಗ್ ಮಾಡಲು ರವೀಂದ್ರ ಜಡೇಜಾಗೆ ನೀಡಿದ್ದರು. ‘ಗಾಯದ ಸಮಸ್ಯೆಯಿಂದಾಗಿ ಆಲ್ರೌಂಡರ್ ಡ್ವೇನ್ ಬ್ರಾವೊ ಲೀಗ್‌ನಿಂದ ಹೊರಗುಳಿಯಲಿದ್ದಾರೆ’ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ. ಬ್ರಾವೊ ಲೀಗ್‌ನಲ್ಲಿ ಆಡಿದ 6 ಪಂದ್ಯಗಳಿಂದ 7 ರನ್‌ಗಳಿಸಿ, 6 ವಿಕೆಟ್ ಕಬಳಿಸಿದ್ದರು. ಸಿಎಸ್‌ಕೆ ತಂಡ ಇದುವರೆಗೂ ಆಡಿರುವ 10 ಪಂದ್ಯಗಳಲ್ಲಿ 7 ರಲ್ಲಿ ಸೋಲನುಭವಿಸಿ ಅಂಕಪಟ್ಟಿಯಲ್ಲಿ ಕಡೇ ಸ್ಥಾನದಲ್ಲಿದೆ.

    ತಂಡದ ನಾಯಕ ಧೋನಿ ವಿರುದ್ಧವೂ ಅಭಿಮಾನಿಗಳು ಸಾಕಷ್ಟು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ರನ್‌ಗಳಿಸದೆ ಪರದಾಡುತ್ತಿರುವ ಕೇದಾರ್ ಜಾಧವ್‌ಗೆ ಅವಕಾಶದ ಮೇಲೆ ಅವಕಾಶ ನೀಡುತ್ತಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೂರು ಚಾಂಪಿಯನ್ ಸಿಎಸ್‌ಕೆ, ಇದುವರೆಗೂ ಎಲ್ಲ ಆವೃತ್ತಿಗಳಲ್ಲೂ ಪ್ಲೇ-ಆ್ ಹಂತಕ್ಕೇರಿದ ಸಾಧನೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts