More

    ಚೇಳೂರು ಗ್ರಾಪಂನಲ್ಲಿ ಸಿಬ್ಬಂದಿ ಕೊರತೆ ; ಸಾರ್ವಜನಿಕರ ಕೆಲಸಗಳಿಗೆ ತೊಂದರೆ

    ಚೇಳೂರು : ಗ್ರಾಪಂ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿರುವ ಬೆನ್ನಲ್ಲೇ ಮೂವರು ಸಿಬ್ಬಂದಿ ರಾಜೀನಾಮೆ ನೀಡಿರುವುದರಿಂದ ಜನ ಸಾಮಾನ್ಯರ ಕೆಲಸಗಳಿಗೆ ಅಡಚಣೆ ಎದುರಾಗಿದೆ. ಇದರಿಂದ ನೀರಿನ ಬಿಲ್, ಕಂದಾಯ ವಸೂಲಿಗೂ ಪೆಟ್ಟುಬಿದ್ದಿದೆ.

    ಚೇಳೂರು ಗ್ರಾಪಂಗೆ ಆಯ್ಕೆಗೊಂಡ ಅಧ್ಯಕ್ಷರು, ಉಪಾಧ್ಯಕ್ಷರು ಅಧಿಕಾರ ಸ್ವೀಕರಿಸಿ 40 ದಿನ ಕಳೆದಿವೆ. ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಕಚೇರಿಯ ಸಿಬ್ಬಂದಿ ಬಿಲ್ ಕಲೆಕ್ಟರ್ ಮಂಜುನಾಥ್, ಕಂಪ್ಯೂಟರ್ ಆಪರೇಟರ್ ಎನ್.ಶ್ರೀಕಾಂತ್, ಕಚೇರಿ ಸಹಾಯಕ ಮುರಳಿ ಸ್ವಯಂ ಪ್ರೇರಿತವಾಗಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಕರ್ತವ್ಯದಿಂದ ದೂರ ಉಳಿದಿದ್ದಾರೆ.

    ಇದರಿಂದ ಸಿಬ್ಬಂದಿ ಕೊರತೆ ಜತೆಗೆ ಹಾಲಿ ಸಿಬ್ಬಂದಿಯ ರಾಜೀನಾಮೆಯಿಂದ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿದೆ. ಕಂದಾಯ ವಸೂಲಿ ಸ್ಥಗಿತವಾಗಿದ್ದು, ಮೂಲಸೌಲಭ್ಯ ಒದಗಿಸುವಲ್ಲಿ ಗ್ರಾಪಂ ಸಂಪೂರ್ಣ ವಿಫಲವಾಗಿದೆ. ತಾಪಂ ಹಾಗೂ ಗ್ರಾಪಂ ಆಡಳಿತ ಅಧಿಕಾರಿಗಳು ಎಚ್ಚೆತ್ತುಕೊಂಡು ಆದಷ್ಟು ಬೇಗ ಗ್ರಾಪಂ ಸಿಬ್ಬಂದಿ ಕೊರತೆ ನೀಗಿಸಿ ಸಾರ್ವಜನಿಕರ ಕೆಲಸಗಳನ್ನು ಸಕಾಲಕ್ಕೆ ಮಾಡಿಕೊಡಬೇಕೆಂದು ಸ್ಥಳೀಯರ ಒಕ್ಕೊರಲ ಒತ್ತಾಯವಾಗಿದೆ.

    ಅಧಿಕಾರ ವಹಿಸಿಕೊಂಡು ಎರಡು ದಿನವಾಗಿದೆ, ಗ್ರಾಪಂ ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿ ಇಲ್ಲ, ಸಿಬ್ಬಂದಿಯ ರಾಜೀನಾಮೆ ಸಲ್ಲಿಸಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಸಾಮಾನ್ಯ ಸಭೆ ಕರೆದು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗುತ್ತೇನೆ.
    ಗೌಸ್‌ಪೀರ್, ಪಿಡಿಒ ಚೇಳೂರು ಗ್ರಾಪಂ

    ರಾಜಕೀಯ ಹಾಗೂ ನೂತನ ಗ್ರಾಮ ಪಂಚಾಯಿತಿ ಸದಸ್ಯರ ಒತ್ತಡ, ಗ್ರಾಮ ಪಂಚಾಯಿತಿ ದೊಡ್ಡದಾಗಿರುವುದರಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದೇನೆ.
    ಹೆಸರು ಹೇಳಲು ಇಚ್ಚಿಸದ ಗ್ರಾಪಂ ಸಿಬ್ಬಂದಿ

    ಚೇಳೂರು ಗ್ರಾಪಂ ಬಿಲ್ ಕಲೆಕ್ಟರ್ ಉದ್ಯೋಗಕ್ಕೆ ರಾಜೀನಾಮೆ ನೀಡಿ ತಿಂಗಳು ಕಳೆದಿದೆ. ಅಂದಿನಿಂದ ಕನಿಷ್ಠ ಕಂದಾಯ ರಸೀದಿ ಹಾಕಿ ಎನ್‌ಒಸಿ ಪತ್ರ ನೀಡಲು ಯಾರೂ ಇಲ್ಲ. ಖಾತೆ ಬದಲಾವಣೆ, ಇ ಸ್ವತ್ತುಗಾಗಿ ಅರ್ಜಿ ಸ್ವೀಕರಿಸುವ ಅಧಿಕಾರ ಇಲ್ಲ. ಇದರಿಂದ ಸಾರ್ವಜನಿಕರಿಗೆ ಅನನುಕೂಲವಾಗಿದ್ದು ಜಿಪಂ ಮತ್ತು ತಾಪಂ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
    ಎಸ್.ಎ.ಸುಬ್ರಮಣ್ಯಂ, ಗ್ರಾಪಂ ಮಾಜಿ ಸದಸ್ಯ, ಚೇಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts