More

    ಇಂಜಿನ್ ಆಯಿಲ್‌ಗೆ ಬಿದ್ದ ನಾಗರಹಾವು ರಕ್ಷಣೆ

    ಮಂಗಳೂರು: ಸೋಮೇಶ್ವರದಲ್ಲಿ ಮನೆಯ ಬಚ್ಚಲು ಗುಂಡಿಗೆ ಬಿದ್ದು, ಅದರಲ್ಲಿದ್ದ ಇಂಜಿನ್ ಆಯಿಲ್‌ನಿಂದ ಚರ್ಮ ಮತ್ತು ಕಣ್ಣಿಗೆ ಹಾನಿ ಮಾಡಿಕೊಂಡಿದ್ದ ನಾಗರಹಾವಿಗೆ ಚಿಕಿತ್ಸೆ ನೀಡಿ ಮತ್ತೆ ಕಾಡಿಗೆ ಬಿಡಲಾಗಿದೆ. ಆದರೆ ಕಣ್ಣಿನಲ್ಲಿ ಆಯಿಲ್ ಅಂಶ ಇನ್ನೂ ಇರುವುದರಿಂದ ಹಾವು ಬಹುತೇಕ ಕುರುಡಾಗಿದೆ.
    ಕಳೆದ ಶುಕ್ರವಾರ ಸೋಮೇಶ್ವರದ ಮನೆಯೊಂದರ ಹಿತ್ತಿಲಲ್ಲಿ ನಾಗರ ಹಾವು ಇದೆ ಎಂದು ಕರೆ ಬಂದ ಹಿನ್ನೆಲೆಯಲ್ಲಿ ಹಾವು ರಕ್ಷಕ ಕೋಟೆಕಾರಿನ ವ್ನಿೇಶ್ ಸ್ಥಳಕ್ಕೆ ತೆರಳಿದ್ದರು. ಅಲ್ಲಿ ಹೋಗಿ ನೋಡಿದಾಗ ಹಾವಿನ ಮೈ ಮತ್ತು ಕಣ್ಣಿನಲ್ಲಿ ಇಂಜಿನ್ ಆಯಿಲ್ ಇತ್ತು.

    ಸೊಳ್ಳೆ ಉತ್ಪತ್ತಿಯಾಗಬಾರದು ಎಂದು ಮನೆಯ ಬಚ್ಚಲುಗುಂಡಿಗೆ ಇಂಜಿನ್ ಆಯಿಲ್ ಸುರಿದಿದ್ದರು. ಹಾವು ಅದಕ್ಕೆ ಬಿದ್ದು, ಅದರಿಂದ ಮೇಲಕ್ಕೆ ಬಂದು, ಮುಂದಕ್ಕೆ ಚಲಿಸಲು ಸಾಧ್ಯವಾಗದೆ ಮಲಗಿತ್ತು ಎಂದು ಅವರು ವಿಜಯವಾಣಿಗೆ ತಿಳಿಸಿದ್ದಾರೆ.

    ಹಾವನ್ನು ಅಲ್ಲಿಂದ ರಕ್ಷಿಸಿ ಕುಲಶೇಖರದ ಡಾ.ಯಶಸ್ವಿ ನಾರಾವಿ ಅವರ ಕ್ಲಿನಿಕ್‌ಗೆ ತಂದು ಚಿಕಿತ್ಸೆಗೆ ಒಳಪಡಿಸಲಾಯಿತು. ಐದು ದಿನಗಳ ಕಾಲ ಚಿಕಿತ್ಸೆ ನೀಡಲಾಗಿದ್ದು, ವೈದ್ಯರು ಚರ್ಮದ ಮೇಲಿದ್ದ ಇಂಜಿನ್ ಆಯಿಲ್ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕಣ್ಣಿಗೆ ಬಿದ್ದ ಇಂಜಿನ್ ಆಯಿಲ್ ಸಂಪೂರ್ಣ ತೆಗೆಯಲು ಸಾಧ್ಯವಾಗಿಲ್ಲ. ಪರಿಣಾಮ ಹಾವು ದೃಷ್ಟಿ ಕಳೆದುಕೊಂಡಿದೆ. ಹಾವು ಆರೋಗ್ಯವಾಗಿದ್ದು, ಬುಧವಾರ ಸೋಮೇಶ್ವರದ ಬಳಿಯ ಕಾಡಿಗೆ ಬಿಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts