More

    ಕರೊನಾತಂಕ: ಮತ್ತೆ ಗಡಿಗಳಲ್ಲಿ ಚೆಕ್​ಪೋಸ್ಟ್​! ಈ ರಾಜ್ಯಗಳಿಂದ ಬರುವವರಿಗೆ ನೆಗೆಟಿವ್ ವರದಿ ಕಡ್ಡಾಯ!

    ಬೆಂಗಳೂರು : ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವ ಜನರಿಗೆ 72 ಗಂಟೆಗಳೊಳಗೆ ಪಡೆದ ನೆಗೆಟಿವ್​ ಆರ್​ಟಿಪಿಸಿಆರ್​ ವರದಿ ಕಡ್ಡಾಯಗೊಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ವಿಮಾನ, ರೈಲು, ಬಸ್ ಅಥವಾ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವವರು, ಕರೊನಾ ಲಸಿಕೆ ಪಡೆದಿದ್ದರೂ ಕೂಡ, ರಾಜ್ಯವನ್ನು ಪ್ರವೇಶಿಸುವ ಮುನ್ನ ನೆಗೆಟಿವ್ ವರದಿ ನೀಡಲೇಬೇಕಾಗಿದೆ.

    ದೇಶದ ಅರ್ಧದಷ್ಟು ಕರೊನಾ ಪ್ರಕರಣಗಳನ್ನು ದಾಖಲಿಸುತ್ತಿರುವ ನೆರೆಯ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ಮತ್ತೂ ಹೆಚ್ಚಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ತನ್ನ ಗಡಿಗಳಲ್ಲಿ ಎಚ್ಚರ ವಹಿಸುವ ಕ್ರಮ ಕೈಗೊಂಡಿದೆ. ಈ ರಾಜ್ಯಗಳ ಪ್ರಯಾಣಿಕರಿಗೆ ಟಿಕೇಟು ನೀಡುವ ಮುನ್ನ ನೆಗೆಟಿವ್ ವರದಿ ಇದೆಯೇ ಎಂದು ಪರಿಶೀಲಿಸಬೇಕು ಎಂದು ಸರ್ಕಾರ ಹೇಳಿದೆ.

    ಇದನ್ನೂ ಓದಿ: ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ

    ಕೇರಳದೊಂದಿಗೆ ಗಡಿ ಹಂಚಿಕೊಳ್ಳುವ ದಕ್ಷಿಣ ಕನ್ನಡ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಮತ್ತು ಮಹಾರಾಷ್ಟ್ರದ ಪಕ್ಕ ಬರುವ ಬೆಳಗಾವಿ, ವಿಜಯಪುರ, ಕಲಬುರ್ಗಿ ಮತ್ತು ಬೀದರ್​ ಜಿಲ್ಲೆಗಳಲ್ಲಿ ಚೆಕ್​ಪೋಸ್ಟ್​ಗಳನ್ನು ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

    ರಾಜ್ಯದ ಕರೊನಾ ಪ್ರಕರಣ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಗುರುವಾರದಂದು ರಾಜ್ಯದಲ್ಲಿ 2,052 ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಬುಧವಾರದ 1,531 ನಿತ್ಯಪ್ರಕರಣ ಸಂಖ್ಯೆಗಿಂತ ಶೇ. 34 ರಷ್ಟು ಹೆಚ್ಚಾಗಿತ್ತು. ಬೆಂಗಳೂರು ಒಂದರಲ್ಲೇ ಬುಧವಾರದ 376 ಪ್ರಕರಣಗಳಿಗೆ ಹೋಲಿಸಿದರೆ, ಗುರುವಾರ 505 ಪ್ರಕರಣಗಳು ದಾಖಲಾಗಿ ಏರಿಕೆ ತೋರಿಬಂದಿತ್ತು. (ಏಜೆನ್ಸೀಸ್)

    ಪುಲ್ವಾಮ ದಾಳಿಯ ಸಂಚುಕೋರ ಉಗ್ರವಾದಿ ಇಸ್ಮಲ್​ ಅಲ್ವಿ ಅಂತ್ಯ

    VIDEO | ಒಲಿಂಪಿಕ್ಸ್​ನಲ್ಲಿ ಕಮಲ್​ಪ್ರೀತ್​ ಕೌರ್​ರ​ ಡಿಸ್ಕಸ್​ ಥ್ರೋ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts