More

    ವಿಶ್ವನಾಥನ್ ಆನಂದ್ ಜತೆ ಚೆಸ್ ಆಡಿ, ಕೋವಿಡ್ ವಿರುದ್ಧ ಹೋರಾಟಕ್ಕೆ ನೆರವಾಗಿ!

    ನವದೆಹಲಿ: ಐದು ಬಾರಿಯ ವಿಶ್ವ ಚಾಂಪಿಯನ್ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಕೋವಿಡ್-19 ಪರಿಹಾರ ನಿಧಿ ಸಂಗ್ರಹಕ್ಕಾಗಿ ಇತರ ನಾಲ್ವರು ಗ್ರಾಂಡ್ ಮಾಸ್ಟರ್‌ಗಳ ಜತೆಗೂಡಿ ಆನ್‌ಲೈನ್ ಮೂಲಕ ಪ್ರದರ್ಶನ ಪಂದ್ಯಗಳನ್ನು ಆಡಲಿದ್ದಾರೆ. 2000ಕ್ಕಿಂತ ಕಡಿಮೆ ಫಿಡೆ ರೇಟಿಂಗ್ ಹೊಂದಿರುವ ಯಾವುದೇ ಆಟಗಾರರು ಇದರಲ್ಲಿ ಪಾಲ್ಗೊಳ್ಳಬಹುದು.

    ಆನಂದ್ ಜತೆಗೆ ಆಡಲು ಬಯಸುವವರು ಕನಿಷ್ಠ 150 ಡಾಲರ್ (11 ಸಾವಿರ ರೂ) ಮತ್ತು ಇತರ ಗ್ರಾಂಡ್ ಮಾಸ್ಟರ್‌ಗಳಾದ ಕೊನೆರು ಹಂಪಿ, ದ್ರೋಣವಲ್ಲಿ ಹರಿಕಾ, ನಿಹಾಲ್ ಸರಿನ್ ಮತ್ತು ಪ್ರಜ್ಞಾನಂದ ರಮೇಶ್‌ಬಾಬು ಜತೆ ಆಡಲು ಬಯಸುವವರು ಕನಿಷ್ಠ 25 ಡಾಲರ್ (1,800 ರೂ) ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಚೆಸ್ ಡಾಟ್ ಕಾಮ್‌ನಲ್ಲಿ ಪಂದ್ಯಗಳು ನಡೆಯುವ ವೇಳೆ ದೇಣಿಗೆಗಳನ್ನೂ ಸ್ವೀಕರಿಸಲಾಗುತ್ತದೆ. ಚೆಸ್ ಪಂದ್ಯಗಳಿಂದ ಒಟ್ಟಾರೆ 10 ಸಾವಿರ ಡಾಲರ್ (7.33 ಲಕ್ಷ ರೂ) ಗುರಿ ಇದೆ ಎಂದು ಚೆಸ್ ಡಾಟ್ ಕಾಮ್ ವೆಬ್‌ಸೈಟ್ ತಿಳಿಸಿದೆ.

    ಇದನ್ನೂ ಓದಿ: ಭಾರತ ಕಬಡ್ಡಿ ತಂಡದ ಮಾಜಿ ನಾಯಕಿ ತೇಜಸ್ವಿನಿ ಬಾಯಿ ಪತಿ ಕೋವಿಡ್‌ಗೆ ಬಲಿ

    ಅಖಿಲ ಭಾರತ ಚೆಸ್ ಒಕ್ಕೂಟದ (ಎಐಸಿಎ್) ‘ಚೆಕ್‌ಮೇಟ್ ಕೋವಿಡ್’ ಹೆಸರಿನ ಈ ಅಭಿಯಾನದ ಮೂಲಕ ಸಂಗ್ರಹವಾಗುವ ಮೊತ್ತವನ್ನು ರೆಡ್‌ಕ್ರಾಸ್ ಇಂಡಿಯಾದ ಮೂಲಕ ಕರೊನಾ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು. ಕಳೆದ ವರ್ಷವೂ ಕರೊನಾ ವೈರಸ್ ಹಾವಳಿಯ ಸಮಯದಲ್ಲಿ ಆನಂದ್ ಮತ್ತು ಇತರ ಚೆಸ್ ಆಟಗಾರರು ಆನ್‌ಲೈನ್ ಪಂದ್ಯಗಳ ಮೂಲಕ ದೇಣಿಗೆ ಸಂಗ್ರಹಿಸಿದ್ದರು. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕೂಡ ಅವರನ್ನು ಅಭಿನಂದಿಸಿದ್ದರು.

    ವೈರಲ್ ಆಯ್ತು ಹಾರ್ದಿಕ್ ಪಾಂಡ್ಯ ದಂಪತಿಯ ರೋಮ್ಯಾಂಟಿಕ್ ಚಿತ್ರಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts