More

    8 ಐಪಿಎಲ್ ತಂಡಗಳು ರಿಟೇನ್ ಮಾಡಿಕೊಳ್ಳಲಿರುವ ಸಂಭಾವ್ಯ ಆಟಗಾರರ ಪಟ್ಟಿ

    ನವದೆಹಲಿ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡ ನಾಯಕ ಎಂಎಸ್ ಧೋನಿ ಅವರನ್ನು ರಿಟೇನ್ ಮಾಡಲಿದೆ ಎಂದು ವರದಿಯಾಗಿದೆ. ಐಪಿಎಲ್‌ನ ಹಾಲಿ 8 ತಂಡಗಳಿಗೆ ಗರಿಷ್ಠ 4 ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು, ನವೆಂಬರ್ 30ರವರೆಗೆ ಗಡುವು ನೀಡಲಾಗಿದೆ. ಬಳಿಕ 2 ಹೊಸ ತಂಡಗಳಿಗೆ ಹರಾಜಿಗೆ ಮುನ್ನವೇ ಗರಿಷ್ಠ 3 ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅವಕಾಶವಿದೆ.

    ಈ ಬಾರಿ ತಂಡಗಳು ಆಟಗಾರರ ಖರೀದಿಗೆ ಗರಿಷ್ಠ 90 ಕೋಟಿ ರೂ. ಬಜೆಟ್ ಹೊಂದಿದ್ದು, ಗರಿಷ್ಠ ನಾಲ್ವರನ್ನು ರಿಟೇನ್ ಮಾಡಿಕೊಂಡರೆ 42 ಕೋಟಿ ರೂ. (16, 12, 8, 6) ಕಡಿತವಾಗಲಿದೆ. ಮೂವರನ್ನು ರಿಟೇನ್ ಮಾಡಿದರೆ 33 ಕೋಟಿ ರೂ. (15, 11, 7) ಕಡಿತವಾಗಲಿದೆ. ಇಬ್ಬರನ್ನು ರಿಟೇನ್ ಮಾಡಿದರೆ 24 ಕೋಟಿ ರೂ. (14, 10) ಕಡಿತವಾಗಲಿದೆ. ಒಬ್ಬ ಆಟಗಾರನನ್ನು ರಿಟೇನ್ ಮಾಡಿದರೆ 14 ಕೋಟಿ ರೂ. ಕಡಿತವಾಗಲಿದೆ.

    ತಂಡಗಳ ಸಂಭಾವ್ಯ ರಿಟೇನ್ ಪಟ್ಟಿ:
    ಚೆನ್ನೈ ಸೂಪರ್‌ಕಿಂಗ್ಸ್: ಎಂಎಸ್ ಧೋನಿ, ರವೀಂದ್ರ ಜಡೇಜಾ, ಋತುರಾಜ್ ಗಾಯಕ್ವಾಡ್, ಮೊಯಿನ್ ಅಲಿ/ಫಾಫ್​ ಡು ಪ್ಲೆಸಿಸ್.
    ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್, ಪೃಥ್ವಿ ಷಾ, ಅಕ್ಷರ್ ಪಟೇಲ್, ಅನ್ರಿಚ್ ನೋಕಿಯ.
    ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮ, ಜಸ್‌ಪ್ರೀತ್ ಬುಮ್ರಾ, ಕೈರಾನ್ ಪೊಲ್ಲಾರ್ಡ್, ಇಶಾನ್ ಕಿಶನ್/ಸೂರ್ಯಕುಮಾರ್ ಯಾದವ್.
    ಕೆಕೆಆರ್: ಸುನೀಲ್ ನಾರಾಯಣ್, ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ.
    ಆರ್‌ಸಿಬಿ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಯಜುವೇಂದ್ರ ಚಾಹಲ್, ದೇವದತ್ ಪಡಿಕಲ್.
    ರಾಜಸ್ಥಾನ ರಾಯಲ್ಸ್: ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್.
    ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್, ಶಾರುಖ್ ಖಾನ್, ರವಿ ಬಿಷ್ಣೋಯಿ.
    ಸನ್‌ರೈಸರ್ಸ್‌: ಕೇನ್ ವಿಲಿಯಮ್ಸನ್, ರಶೀದ್ ಖಾನ್.

    ಐಪಿಎಲ್‌ನ ಹೊಸ ತಂಡ ಲಖನೌಗೆ ಕನ್ನಡಿಗ ಕೆಎಲ್ ರಾಹುಲ್ ನಾಯಕ?

    PHOTO: ಗೆಳತಿಯೊಂದಿಗೆ ವಿವಾಹವಾದ ಕರ್ನಾಟಕದ ಕ್ರಿಕೆಟಿಗ ಶ್ರೇಯಸ್ ಗೋಪಾಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts