More

    ಒಂಟಿತೋಳಗಳ ಬೆನ್ನು ಹತ್ತಿ ಹೊರಟಾಗ…

    2022ರಲ್ಲಿ ರಾಜಸ್ಥಾನದ ಉದಯಪುರದಲ್ಲಿ ಕನ್ನಯ್ಯ ಲಾಲ್ ತೇಲಿ ಎಂಬ ರ್ದಜಿಯ ಹತ್ಯಾ ಪ್ರಕರಣವು ಭಾರತದಲ್ಲಿ ಒಂಟಿತೋಳ ಭಯೋತ್ಪಾದನೆಯ ಮೊದಲ ದೊಡ್ಡ ಪ್ರಕರಣ.

    Chowkaತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರ್ದಜಿಯನ್ನು ಇಬ್ಬರು ಅರೆಬರೆ ಭಯೋತ್ಪಾದಕರು ಸೇರಿಕೊಂಡು ಹಾಡುಹಗಲೇ ಹತ್ಯೆ ಮಾಡಿ ಅದರ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಪ್ರಕರಣದ ನಂತರ ಭಾರತದ ಭದ್ರತಾ ಸಂಸ್ಥೆಗಳು ಎಚ್ಚೆತ್ತವು.

    ಬ್ರಿಟಿಷ್ ಮೂಲದ ಭಾರತೀಯ ಸಂಜಾತ ಲೇಖಕ ಜೋಸೆಫ್ ರೂಡ್ಯಾರ್ಡ್ ಕಿಪ್ಲಿಂಗ್​ನ ಮೊದಲ ಪುಸ್ತಕ ‘ಜಂಗಲ್ ಬುಕ್’ ಬಂದು ಬರೋಬ್ಬರಿ ನೂರಮೂವತ್ತು ವರ್ಷಗಳು ಸಂದಿವೆ. ಬ್ರಿಟಿಷರ ಅಧಿಪತ್ಯದಲ್ಲಿದ್ದ ಭಾರತದಲ್ಲಿ ಜನಿಸಿ ಸ್ಥಳೀಯರಿಂದ ತಾನು ಕೇಳಿದ ಹಾಗೂ ಇಲ್ಲಿನ ದಟ್ಯಾರಣ್ಯಗಳಲ್ಲಿ ಓಡಾಡಿದ ಅನುಭವಗಳನ್ನೆಲ್ಲ ಸೇರಿಸಿ ಮಕ್ಕಳಿಗಾಗಿ ಹೆಣೆದ ಕಥೆಗಳ ಸರಣಿಯೇ ‘ಜಂಗಲ್ ಬುಕ್’. ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿರುವ ಅತಿ ಕಿರಿಯ ಲೇಖಕ ಎಂಬ ಖ್ಯಾತಿಯನ್ನು ತನ್ನ ಹೆಸರಿನಲ್ಲೇ ಉಳಿಸಿಕೊಂಡಿರುವ ಕಿಪ್ಲಿಂಗ್​ನ ಕೃತಿಗೆ ಮನಸೋಲದವರಿಲ್ಲ. ಪುಸ್ತಕವಾಗಿಯೋ, ಕಾಮಿಕ್ಸ್ ಅವತಾರದಲ್ಲೋ, ಕಾರ್ಟೂನಿನ ರೂಪದಲ್ಲೋ ಅಥವಾ ಚಲನಚಿತ್ರವಾಗಿಯೋ ಹೀಗೆ ಯಾವುದಾದರೊಂದು ವೇಷದಲ್ಲಿ ನಾವೆಲ್ಲ ಬಾಲ್ಯದಲ್ಲಿ ಅಷ್ಟೇ ಏಕೆ ಇಂದಿಗೂ ನೋಡಿ ನಲಿಯುವ ಸಾಮ್ರಾಜ್ಯ ‘ಜಂಗಲ್ ಬುಕ್’.

    ಕಥೆ ಹೇಳುತ್ತ ವನ್ಯಪ್ರಾಣಿಗಳ ಕುರಿತು ಬಹಳಷ್ಟು ವಿಷಯಗಳನ್ನು ನಮಗೆ ತಿಳಿಸಿದ ಕಿಪ್ಲಿಂಗ್ ಶೈಲಿ ಅನನ್ಯ. ಲೇಖಕರು ಈ ಕೃತಿಯಲ್ಲಿ ಹೆಚ್ಚು ಭಾರತೀಯ ಹೆಸರುಗಳನ್ನು ಬಳಸಿದ ಕಾರಣಕ್ಕೇನೋ ಆ ಪಾತ್ರಗಳೆಲ್ಲ ನಮಗೆ ಹೆಚ್ಚು ಆಪ್ತವಾಗಿವೆ. ಅದೇನೆ ಇರಲಿ, ನಮ್ಮ ಹೀರೋ ಮೋಗ್ಲಿಯನ್ನು ತಮ್ಮೊಳಗೆ ಸೇರಿಸಿಕೊಳ್ಳಲು ಒಪ್ಪಿಗೆ ನೀಡಿದ ಆ ತೋಳಗಳ ನಾಯಕ ಅಕೇಲಾ ನನಗಂತೂ ಬಾಲ್ಯದಲ್ಲಿ ಸಿಕ್ಕಾಪಟ್ಟೆ ಆಪ್ತನಾಗಿಬಿಟ್ಟಿದ್ದ. ‘ಜಂಗಲ್ ಬುಕ್’ನ ಪಾತ್ರಗಳನ್ನು ಸೂಕ್ಷ ್ಮಾಗಿ ಅವಲೋಕಿಸಿದಲ್ಲಿ ಲೇಖಕ ಜೋಸೆಫ್ ಅವುಗಳಿಗೆ ನೀಡಿರುವ ಹೆಸರುಗಳ ಮೇಲೂ ಬಹಳಷ್ಟು ಹೋಂವರ್ಕ್ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಉದಾಹರಣೆಗೆ, ಈ ಅಕೇಲಾ ಅಂದರೆ ಏಕಾಂಗಿಯನ್ನೇ ತೆಗೆದುಕೊಳ್ಳಿ. ಅದು ತೋಳಗಳ ಜೀವನಶೈಲಿಗೆ ಪಕ್ಕಾ ಒಗ್ಗುವಂಥ ಹೆಸರು.

    ಜಾಗತಿಕವಾಗಿ ತೋಳಗಳನ್ನು ಎರಡು ಪ್ರಮುಖ ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಬೂದು ಮತ್ತು ಕೆಂಪು. ಇವುಗಳಲ್ಲಿ ಬೂದು ತೋಳಗಳು ಪ್ರಾದೇಶಿಕವಾಗಿ ಭಿನ್ನ ದೇಹರಚನೆಯನ್ನು ಹೊಂದಿದ್ದು, ಅದರನ್ವಯ ಅವುಗಳ ಉಪತಳಿಗಳನ್ನು ಗುರುತಿಸಲಾಗುತ್ತದೆ. ಸಂಖ್ಯಾಬಲದಲ್ಲೂ ಹೆಚ್ಚಾಗಿರುವ ಜೊತೆಗೆ ಇವುಗಳು ಭೌಗೋಳಿಕವಾಗಿ ಹೆಚ್ಚಿನ ಪ್ರದೇಶಗಳಲ್ಲಿ ಹರಡಿವೆ. ಇವಕ್ಕೆ ಹೋಲಿಸಿದಲ್ಲಿ ಕೆಂಪು ತೋಳಗಳು ಕೆಲವೇ ದೇಶಗಳಿಗೆ ಸೀಮಿತವಾಗಿದ್ದು, ಅವನತಿಯತ್ತ ಸಾಗಿವೆ. ತಳಿ ಯಾವುದೇ ಇರಲಿ ತೋಳಗಳು ಸಂಘಜೀವಿಗಳಾಗಿದ್ದು, ಸದಾ ಹತ್ತರಿಂದ ಇಪ್ಪತ್ತರ ಗುಂಪಿನಲ್ಲೇ ಕಂಡುಬರುತ್ತವೆ. ಸಾಮಾನ್ಯವಾಗಿ ಈ ಗುಂಪಿನಲ್ಲಿ ಹೆಣ್ಣು ಮತ್ತು ಗಂಡು ತೋಳಗಳ ಜೊತೆಗೆ ಮರಿಗಳು ಇದ್ದು ತಂದೆ-ತಾಯಿಯ ನಿಗರಾಣಿಯಲ್ಲಿ ಬೇಟೆಯ ಪಟ್ಟುಗಳನ್ನು ಕಲಿಯುತ್ತವೆ. ಕೂಡು ಬಾಳ್ವಿಕೆಯನ್ನು ನೆಚ್ಚಿಕೊಂಡ ಈ ತೋಳಗಳು ಇದ್ದಕ್ಕಿದ್ದಂತೆ ತಮ್ಮ ಗುಂಪನ್ನು ಬಿಟ್ಟು ಒಂಟಿಯಾಗಿ ಅಲೆದಾಡುವುದುಂಟು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಸಾಮಾನ್ಯವಾಗಿ ಮೂರುವರ್ಷ ಪ್ರಾಯಕ್ಕೆ ಮರಿ ತೋಳಗಳು ಪ್ರೌಢಾವಸ್ಥೆಗೆ ತಲುಪುತ್ತವೆ. ಈ ಸಮಯದಲ್ಲಿ ಆ ತೋಳಕ್ಕೆ ಹೆಚ್ಚಿನ ಆಹಾರದ ಜೊತೆಗೆ ಬಾಳಸಂಗಾತಿಯ ಜರೂರತ್ತೂ ಇರುತ್ತದೆ. ತೋಳಗಳ ಗುಂಪಿನ ನಿಯಮದ ಪ್ರಕಾರ ಆ ಗುಂಪಿಗೆ ಮತ್ತು ಅದರ ವ್ಯಾಪ್ತಿಗೆ ಒಬ್ಬನೇ ರಾಜ. ಹೀಗಾಗಿ ಹಿರಿಯ ಗಂಡು ತೋಳವು ತನ್ನ ಆವಾಸವ್ಯಾಪ್ತಿಯನ್ನು ಗುರುತಿಸಿಟ್ಟುಕೊಂಡು ಅಲ್ಲಿ ತನ್ನ ಗುಂಪು ಬಿಟ್ಟು ಬೇರೆ ಯಾರಿಗೂ ಬರಲು ಬಿಡುವುದಿಲ್ಲ. ಈ ಕಾರಣಕ್ಕೆ ಯುವತೋಳದ ಬಳಿ ಇರುವ ಆಯ್ಕೆ ಒಂದೇ ಆ ಗುಂಪಿನಲ್ಲಿ ಒಂದಾಗಿರುವುದು ಅಥವಾ ಗುಂಪಿನಿಂದ ಹೊರನಡೆಯುವುದು. ಈ ಪರಿಸ್ಥಿತಿಯಲ್ಲಿ ಯುವತೋಳವು ಎರಡನೇ ಆಯ್ಕೆಯನ್ನು ಆಯ್ದುಕೊಂಡು ತನ್ನ ಕುಟುಂಬಕ್ಕೆ ಟಾಟಾ ಹೇಳಿ ಅವರ ಕ್ಷೇತ್ರವ್ಯಾಪ್ತಿಯನ್ನು ಬಿಟ್ಟು ಏಕಾಂಗಿಯಾಗಿ ಹೊರನಡೆಯುತ್ತದೆ. ಈ ಪ್ರಕ್ರಿಯೆ ಹೆಣ್ಣು ಮತ್ತು ಗಂಡು ತೋಳಗಳಿಗೂ ಅನ್ವಯ. ಹೀಗೆ ಗುಂಪಿನಿಂದ ಹೊರಬಂದ ತೋಳವು ಹೊಸ ವಾಸ ಮತ್ತು ನೂತನ ಬಾಳಸಂಗಾತಿಯನ್ನು ಹುಡುಕುತ್ತ ಏಕಾಂಗಿಯಾಗಿ ಅಲೆಯುತ್ತ ಸಾಗುತ್ತದೆ. ಒಂಟಿಯಾಗಿ ಅಲೆಯುವ ತೋಳಗಳು ಮುನ್ನೂರಕ್ಕೂ ಹೆಚ್ಚು ಕಿಲೋಮೀಟರ್ ದೂರ ಕ್ರಮಿಸುವುದು ದಾಖಲಾಗಿದೆ. ಕೊನೆಗೆಲ್ಲೋ ತೋಳದ ಒಂಟಿಪಯಣದಲ್ಲಿ ತನ್ನ ರೀತಿಯೇ ಜೋಡಿಯನ್ನು ಹುಡುಕುತ್ತ ಬಂದ ಜೋಡಿ ದೊರೆತು ಒಂದಾಗುತ್ತವೆ. ಆಹಾರ ಲಭ್ಯತೆ ಮತ್ತು ಸುಭದ್ರತೆಯಿರುವ ಹೊಸ ವಾಸಸ್ಥಳವನ್ನು ಹುಡುಕಿ ಅಲ್ಲಿ ಬಿಡಾರ ಹೂಡುತ್ತವೆ. ಹೀಗೆ ತನ್ನದೇ ನೂತನ ಸಾಮ್ರಾಜ್ಯದಲ್ಲಿ ಮೆರೆಯುವ ಈ ಗುಂಪು ಮುಂದೆ ಮಕ್ಕಳುಮರಿಗಳ ಆಗಮನದೊಂದಿಗೆ ಮತ್ತಷ್ಟು ವಿಸ್ತಾರಗೊಂಡು ಮುಂದೆ ಆ ಮರಿಗಳು ದೊಡ್ಡವಾಗಿ ಅವುಗಳೂ ತಮ್ಮದೇ ಸಾಮ್ರಾಜ್ಯ ಕಟ್ಟಲು ಗುಂಪನ್ನು ತೊರೆದು ದೂರಹೋಗುತ್ತವೆ. ತೋಳಗಳಲ್ಲಿ ಕಾಣಬರುವ ಈ ನಡವಳಿಕೆಯಿಂದ ಬಹುಮುಖ್ಯ ಅನುಕೂಲತೆಯೆಂದರೆ ಬೇರೆ ಬೇರೆ ಕುಟುಂಬದ ಜೀನ್​ಗಳು ಮಿಳಿತವಾಗುವುದು. ಇದು ದೂರಗಾಮಿ ಪರಿಣಾಮ ಹೊಂದಿದ್ದು, ಅವುಗಳ ಆರೋಗ್ಯಕರ ವಂಶಾಭಿವೃದ್ಧಿಗೆ ಕಾರಣವಾಗುತ್ತದೆ.

    ತೋಳಗಳಲ್ಲಿನ ಈ ಪ್ರಕ್ರಿಯೆಯನ್ನು ಹಲವೆಡೆ ಉಪಮೆಯನ್ನಾಗಿ ಬಳಸಲಾಗುತ್ತದೆ. ‘ಜಂಗಲ್ ಬುಕ್’ನ ತೋಳದ ನಾಯಕನ ಅಕೇಲಾ ಏಕಾಂಗಿಯಾಗಿರಲು ಕಾರಣವೂ ಅದೇ. ‘ಬಿಹೇವಿಯರಲ್ ಸೈನ್ಸ್’ದಲ್ಲಿಯೂ ಏಕಾಂಗಿಯಾಗಿರಲು ಇಷ್ಟಪಡುವ ವ್ಯಕ್ತಿಗಳನ್ನು ‘ಲೋನ್ ವೂಲ್ಪ್’ ಅಂದರೆ ಒಂಟಿತೋಳಗಳೆಂದು ಬಣ್ಣಿಸಲಾಗುತ್ತದೆ. ಈ ಗುಂಪಿಗೆ ಸೇರುವ ಜನರು ಹೆಚ್ಚಾಗಿ ಜನರ ನಡುವೆ ಇರಲು ಇಷ್ಟಪಡದೆ ತಮ್ಮ ಪಾಡಿಗೆ ತಾವಿರುತ್ತಾರೆ. ತಾವು ನಂಬುವ ಸಿದ್ಧಾಂತಗಳಿಗೆ ಬಲವಾಗಿ ಅಂಟಿಕೊಳ್ಳುವ ಇವರುಗಳು ತಮ್ಮ ಗುರಿಯನ್ನು ತಮಗಿಷ್ಟವಾದ ದಾರಿಯಲ್ಲೇ ನಡೆಯುತ್ತ ತಲುಪುತ್ತಾರೆ. ಯಾವುದೇ ಪ್ರಚಾರ, ಜನಪ್ರಿಯ ನಡೆಗಳಿಂದ ಇಂಥವರು ದೂರವಿದ್ದು ಸಮೂಹ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಅಷ್ಟಕ್ಕೂ ತಮ್ಮ ಪಾಡಿಗೆ ತಾವಿರುವುವರಿಂದ ಯಾರಿಗೇನು ತ್ರಾಸು ಅಲ್ಲವೇ. ಆದರೆ, ಇತ್ತೀಚಿನ ದಿನಗಳಲ್ಲಿ ಬೇರೋಂದು ಕ್ಷೇತ್ರದಲ್ಲಿ ಈ ಒಂಟಿ ತೋಳಗಳ ಹಾವಳಿ ಜಾಸ್ತಿಯಾಗಿದ್ದು, ಇವರುಗಳು ಜಾಗತಿಕ ತಲೆನೋವಾಗಿ ಪರಿಣಮಿಸಿದ್ದಾರೆ.

    ಕೆಲ ದಿನಗಳ ಹಿಂದೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್​ಸ್ಪೋಟದ ಘಟನೆಯನ್ನೊಮ್ಮೆ ಅವಲೋಕಿಸಿದರೆ ಶಂಕಿತ ಭಯೋತ್ಪಾದಕ ಒಬ್ಬನೇ ಬಂದು ಅಲ್ಲಿ ಬಾಂಬ್​ನ್ನು ಇಟ್ಟಿರುವುದು ಸ್ಪಷ್ಟ. ಈ ನಿಟ್ಟಿನಲ್ಲಿ ನಡೆಯುತ್ತಿರುವ ತನಿಖೆಗಳೂ ಈ ಅಪರಾಧದಲ್ಲಿ ಬೆರಳೆಣಿಕೆಯಷ್ಟು ಜನರ ಕೈವಾಡವಿರುವುದನ್ನು ಸೂಚಿಸುತ್ತವೆ. ಇಂತಹ ಏಕಾಂಗಿ ಭಯೋತ್ಪಾದನಾ ಕಾರ್ಯಾಚರಣೆಯನ್ನು ‘ಲೋನ್ ವೋಲ್ಪ್’- ಒಂಟಿ ತೋಳದ ಭಯೋತ್ಪಾದನಾ ಕೃತ್ಯವೆಂದು ಕರೆಯಲಾಗುತ್ತದೆ. ಇದು ಜಾಗತಿಕವಾಗಿ ಎಲ್ಲ ಭಯೋತ್ಪಾದನಾ ಸಂಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಬಳಸುತ್ತಿರುವ ಮಾದರಿ. ಇಂತಹ ಕೃತ್ಯಗಳನ್ನು ಅವಲೋಕಿಸಿದಾಗ ಗಮನಕ್ಕೆ ಬರುವ ಸಂಗತಿಯೇನೆಂದರೆ ಅವುಗಳಲ್ಲಿ ಭಾಗಿಯಾಗುವವರು ಬಹುಪಾಲು ಅರೆಬೆಂದ ಭಯೋತ್ಪಾದಕರು. ಮೂಲಭೂತವಾದಕ್ಕೆ ಗಂಟುಬಿದ್ದು ದಾರಿ ತಪ್ಪುವ ಇವರುಗಳು ತಮ್ಮ ಸಂಶೋಧನೆಗೆ ಹೆಚ್ಚಾಗಿ ಅವಲಂಬಿಸುವುದು ಇಂಟರ್​ನೆಟ್ ಆಧಾರಿತ ಸರಕುಗಳನ್ನು. ಸಣ್ಣಸಣ್ಣ ಭಯೋತ್ಪಾದನಾ ಕೃತ್ಯಗಳನ್ನು ಇಂತಹ ದಾರಿತಪ್ಪಿದ ಒಂಟಿತೋಳಗಳ ಮೂಲಕ ಆಯೋಜಿಸಿ ಸ್ಥಳೀಯ ಮಟ್ಟದಲ್ಲಿ ಭೀತಿಯ ವಾತಾವರಣ ಸೃಷ್ಟಿಸುವುದು ಭಯೋತ್ಪಾದನಾ ಸಂಘಟನೆಗಳ ಯೋಜನೆ. ಮಂಗಳೂರಿನ ಕುಕ್ಕರ್ ಸ್ಪೋಟ, ಬೆಂಗಳೂರಿನಲ್ಲಿ ಈ ಹಿಂದೆ ಕ್ರಿಕೆಟ್ ಪಂದ್ಯದ ಸಮಯದಲ್ಲಿ ನಡೆದ ಸ್ಪೋಟದ ಘಟನೆ ಇವೆಲ್ಲ ಒಂಟಿತೋಳಗಳ ಭಯೋತ್ಪಾದನೆಯೇ.

    ಇಂತಹ ವಿಧ್ವಂಸಕ ಘಟನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲು ನಡೆಯುತ್ತಿದ್ದರೂ ಇತ್ತೀಚೆಗೆ ಇವುಗಳ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. 2022ರಲ್ಲಿ ರಾಜಸ್ಥಾನದ ಉದಯಪುರದಲ್ಲಿ ಕನ್ನಯ್ಯ ಲಾಲ್ ತೇಲಿ ಎಂಬ ರ್ದಜಿಯ ಹತ್ಯಾ ಪ್ರಕರಣವು ಭಾರತದಲ್ಲಿ ಒಂಟಿತೋಳ ಭಯೋತ್ಪಾದನೆಯ ಮೊದಲ ದೊಡ್ಡ ಪ್ರಕರಣ. ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರ್ದಜಿಯನ್ನು ಇಬ್ಬರು ಅರೆಬರೆ ಭಯೋತ್ಪಾದಕರು ಸೇರಿಕೊಂಡು ಹಾಡುಹಗಲೇ ಹತ್ಯೆ ಮಾಡಿ ಅದರ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಪ್ರಕರಣದ ನಂತರ ಭಾರತದ ಭದ್ರತಾ ಸಂಸ್ಥೆಗಳು ಎಚ್ಚೆತ್ತವು. ಕೇರಳದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಅಲ್ಲಿನ ರಾಜ್ಯ ಪೊಲೀಸ್ ಜೊತೆಗೂಡಿ ಯುವಕರನ್ನು ಭಯೋತ್ಪಾದನಾ ಮಾರ್ಗ ತುಳಿಯದಂತೆ ಮನವೊಲಿಸಲು ನಡೆಸಿದ ವಿಶೇಷ ಕಾರ್ಯಕ್ರಮ ‘ಆಪರೇಷನ್ ಪಾರಿವಾಳ’ ಸಹ ಈ ನಿಟ್ಟಿನಲ್ಲಿ ನಡೆದ ಒಂದು ಪ್ರಯತ್ನ.

    ಎಲ್ಲ ಹೊಸತುಗಳಿಗೂ ಒಬ್ಬ ಅನ್ವೇಷಕನಿರುವಂತೆ ಒಂಟಿತೋಳ ಭಯೋತ್ಪಾದನೆ ಹಿಂದೆಯೂ ಒಬ್ಬ ಅನ್ವೇಷಕನಿದ್ದಾನೆ. ಥಾಮಸ್ ಮೇಟ್ಜರ್ ಆತನ ಹೆಸರು. ಕೆಲ ವರ್ಷ ಅಮೆರಿಕದ ಸೈನ್ಯದಲ್ಲಿ ಕೆಲಸ ಮಾಡಿದ ಆತ ಮಹಾನ್ ವರ್ಣದ್ವೇಷಿ. ಬಿಳಿಯರ ಹಿತ ಕಾಯಲು ತನ್ನದೇ ಸಂಘಟನೆ ಸ್ಥಾಪಿಸಿದ ಆತ ಕರಿಯರ ವಿರುದ್ಧ ಹಲವು ವಿಧ್ವಂಸಕ ಕೃತ್ಯಗಳನ್ನು ನಡೆಸಿದ. ಈ ಸಂಘಟನೆಯ ಸದಸ್ಯರು ತಮ್ಮ ವಿಚಾರಧಾರೆ ಕುರಿತು ಎಲ್ಲೂ ಹೊರಗಡೆ ರ್ಚಚಿಸದೆ, ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಒಬ್ಬೊಬ್ಬರೇ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಯೋಜನೆಯನ್ನು ರೂಪಿಸಿ ಅದರನ್ವಯ ಹಲವಾರು ಕೃತ್ಯಗಳನ್ನು ನಡೆಸಿದರು. ಕೆಳ ವರ್ಷಗಳ ಹಿಂದೆಯಷ್ಟೇ ಥಾಮಸ್ ಅಸುನೀಗಿದ. ಆತನ ಈ ಆಲೋಚನೆಯನ್ನು ಇದೀಗ ಹಲವಾರು ಭಯೋತ್ಪಾದಕ ಸಂಘಟನೆಗಳು ಕಾರ್ಯರೂಪಕ್ಕಿಳಿಸುತ್ತಿವೆ.

    ಭಯೋತ್ಪಾದನೆ ಜಾಗತಿಕ ಪಿಡುಗಾಗಿದ್ದು, ಎಲ್ಲ ಕ್ಷೇತ್ರಗಳಂತೆ ಇಲ್ಲಿಯೂ ಭಯೋತ್ಪಾದಕರು ಹೊಸ ಹೊಸ ಆವಿಷ್ಕಾರಗಳೊಂದಿಗೆ ಫೀಲ್ಡಿಗಿಳಿಯುತ್ತಿದ್ದಾರೆ. ನಾವುಗಳು ತಂತ್ರಜ್ಞಾನದ ಪಟ್ಟುಗಳನ್ನು ಅರಿತುಕೊಂಡು ಜಾಗರೂಕರಾದಲ್ಲಿ ‘ಜಂಗಲ್ ಬುಕ್’ನ ಮೋಗ್ಲಿಯ ತರಹ ಹೀರೋ ಆಗಿ ಗೆಲ್ಲಬಹುದು. ಇಲ್ಲದಿದ್ದಲ್ಲಿ ಯಾವ ಒಂಟಿತೋಳ ಅದೆಲ್ಲಿ ಹೊಂಚುಹಾಕಿಕೊಂಡು ಕಾದು ಕುಳಿತಿದೆಯೋ ಎಂದು ಕಂಡುಹಿಡಿಯುವುದೇ ಕಷ್ಟ.

    (ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

    ನಟ ದರ್ಶನ್​ ಎಚ್ಚರಿಕೆ ವಹಿಸದಿದ್ರೆ ಕಾದಿದೆ ಅಪಾಯ! ಸುತ್ತಲೂ ನಡೆಯುತ್ತಿರುವ ಘಟನೆಗಳೇ ಇದರ ಸುಳಿವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts