More

    17 ಶಂಕಿತ ಐಸಿಸ್​ಗಳ ವಿರುದ್ಧ ಚಾರ್ಜ್​ಶೀಟ್​​

    ಬೆಂಗಳೂರು: ದಕ್ಷಿಣ ಭಾರತದಲ್ಲಿ ಐಸಿಸ್ ಸಂಘಟನೆ ಬಲಗೊಳಿಸಿ ವಿಧ್ವಂಸಕ ಕೃತ್ಯ ನಡೆಸಲು ತಯಾರಿ ನಡೆಸಿ ಸೆರೆಸಿಕ್ಕ 17 ಐಸಿಸ್ ಶಂಕಿತ ಉಗ್ರರ ವಿರುದಟಛಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.

    ದಕ್ಷಿಣ ಭಾರತದ ಐಸಿಸ್ ಸಂಘಟನೆಯ ಮುಖ್ಯಸ್ಥ ಖಾಜಾ ಮೊಯಿದ್ದೀನ್, ಬೆಂಗಳೂರಿನ ಮೆಹಬೂಬ್ ಪಾಷ, ಮೊಹಮ್ಮದ್ ಹನೀಫ್ ಖಾನ್, ಮೊಹಮ್ಮದ್ ಮನ್ಸೂರ್ ಅಲಿ ಖಾನ್, ಹುಸೇನ್, ಜೈಬುಲ್ಲಾ, ಸಾದಿಕ್ ಪಾಷಾ, ಕೋಲಾರದ ಸಲೀಂ ಹಾಗೂ ಮಂಡ್ಯದ ಇಮ್ರಾನ್​ಖಾನ್, ತಮಿಳುನಾಡಿನ ತೌಫೀಕ್, ಸೈಯದ್ ಅಲಿ ನವಾಜ್, ಜಾಫರ್ ಹಾಗೂ ಅಬ್ದುಲ್ ಷಾಹೀಂ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವುದಾಗಿ ಎನ್​ಐಎ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: FACT CHECK| ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆಗೆ ಗ್ರೇಸ್ ಮಾರ್ಕ್​ ಸಿಗುತ್ತಾ?

    ಹಿಂದು ಪರ ಸಂಘಟನೆ ನಾಯಕ ಸುರೇಶ್ ಕೊಲೆ ಪ್ರಕರಣದಲ್ಲಿ ಉಗ್ರ ಖಾಜಾ ಮೊಯಿದ್ದೀನ್ ಬಂಧಿತನಾಗಿದ್ದ. 2019ರ ಏಪ್ರಿಲ್​ನಲ್ಲಿ ಜಾಮೀನು ಪಡೆದು ಹೊರಬಂದ ಖಾಜಾ, ಕೆಲ ದಿನಗಳಲ್ಲೇ ಐಸಿಸ್ ಸಂಘಟನೆಯ ವಿದೇಶಿ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿದ್ದ. ಒಂದು ವರ್ಷದ ಹಿಂದೆ ದಕ್ಷಿಣ ಭಾರತದಲ್ಲಿ ಸಂಘಟನೆ ಬಲಪಡಿಸಲು ಮುಂದಾಗಿದ್ದ. ಬೆಂಗಳೂರು ಹೊರವಲಯ, ಗುಂಡ್ಲುಪೇಟೆ ಅರಣ್ಯ ಪ್ರದೇಶ ಹಾಗೂ ಶಿವನಸಮುದ್ರದ ಬಳಿ ಆರೋಪಿ ಅರಣ್ಯಪ್ರದೇಶದಲ್ಲಿ ಹಲವರಿಗೆ ಶಸ್ತ್ರಾಸ್ತ್ರ ತರಬೇತಿಯನ್ನೂ ನೀಡಿದ್ದ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

    ಸಿಗಲಿಲ್ಲ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts