More

    ಐಸಿಸ್ ಸೇರಲು ಹೊರಟಿದ್ದ ಅಮೆರಿಕನ್ ದಂಪತಿ ! ಮಾರ್ಗದಲ್ಲೇ ಬಂಧನ

    ನ್ಯೂ ಜೆರ್ಸಿ : ಐಸಿಸ್ ಆತಂಕವಾದಿ ಸಂಘಟನೆಯನ್ನು ಸೇರುವ ಉದ್ದೇಶದಿಂದ ಅಮೆರಿಕದಿಂದ ಯೆಮೆನ್​ಗೆ ಹೊರಟಿದ್ದ ದಂಪತಿಯನ್ನು ಅಮೆರಿಕದ ಪೊಲೀಸರು ಬಂಧಿಸಿದ್ದಾರೆ. ಐಸಿಸ್​​ನ ಇಸ್ಲಾಮಿಕ್ ರಾಜ್ಯ ಸ್ಥಾಪನೆಯ ವಿಚಾರದಿಂದ ಪ್ರಭಾವಿತನಾಗಿದ್ದ ಎನ್ನಲಾದ 20 ವರ್ಷದ ಜೇಮ್ಸ್ ಬ್ರ್ಯಾಡ್ಲಿ ಮತ್ತು ಆತನ ಹೆಂಡತಿ ಅರ್ವಾ ಮುತಾನಾ(29) ಎಂಬುವರು ಬಂಧಿತ ಆರೋಪಿಗಳು.

    ಕಳೆದ ವರ್ಷದಿಂದ, ಜೇಮ್ಸ್ ಬ್ರಾಡ್ಲಿ ರಹಸ್ಯ ಏಜೆಂಟ್​ ಒಬ್ಬನ ಸಂಪರ್ಕದಲ್ಲಿದ್ದು, ಇಸ್ಲಾಮಿಕ್ ಸ್ಟೇಟ್​ನ ಧ್ಯೇಯದಲ್ಲಿ ನಂಬಿಕೆಯನ್ನು ಪುನರುಚ್ಚರಿಸಿದ್ದ. ಅಮೆರಿಕದಲ್ಲಿ ದಾಳಿ ನಡೆಸಲು ಸಿದ್ಧರಿರುವುದಾಗಿ ಹೇಳಿದ್ದು, ವೆಸ್ಟ್ ಪಾಯಿಂಟ್‌ನಲ್ಲಿರುವ ಯುಎಸ್ ಮಿಲಿಟರಿ ಅಕಾಡೆಮಿಯ ಮೇಲೆ ದಾಳಿಯ ಬಗ್ಗೆ ಸಂಭಾಷಣೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಮಾವೋವಾದಿಗಳ ಅಟ್ಟಹಾಸ: ಕೋಬ್ರಾ ಪಡೆಯ ಐವರು ಯೋಧರು ಹುತಾತ್ಮ

    ಬ್ರ್ಯಾಡ್ಲಿ, 2019 ರಿಂದ ‘ಹಿಂಸಾತ್ಮಕ ಉಗ್ರಗಾಮಿ ಅಭಿಪ್ರಾಯಗಳನ್ನು’ ವ್ಯಕ್ತಪಡಿಸಿದ್ದ. ಬ್ರ್ಯಾಡ್ಲಿಯ ಸ್ನೇಹಿತನೊಬ್ಬನನ್ನು 2019 ರಲ್ಲಿ ತಾಲಿಬಾನ್ ಸೇರಲು ಅಫ್ಘಾನಿಸ್ತಾನಕ್ಕೆ ಪ್ರಯಾಣಿಸುವ ಪ್ರಯತ್ನದಲ್ಲಿ ಬಂಧಿಸಿದ್ದ ಎಫ್​ಬಿಐ, ಆಗಿನಿಂದ ಆತನ ಚಲನವಲನಗಳನ್ನು ಗಮನಿಸುತ್ತಾ ಬಂದಿತ್ತು ಎನ್ನಲಾಗಿದೆ. ಕಳೆದ ಜನವರಿ ತಿಂಗಳಲ್ಲಿ ಬ್ರ್ಯಾಡ್ಲಿ ಮುತಾನಾರನ್ನು ವಿವಾಹವಾಗಿದ್ದು, ಇಬ್ಬರೂ ಐಸಿಸ್ ಸಂಘಟನೆಯನ್ನು ಸೇರಲು ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ನ್ಯೂಜರ್ಸಿಯ ನೇವಾರ್ಕ್​ನಿಂದ ಯೆಮೆನ್​​ಗೆ ಹೊರಟಿದ್ದ ಹಡಗನ್ನು ಹತ್ತುವ ಪ್ರಯತ್ನದಲ್ಲಿದ್ದಾಗ ಈ ದಂಪತಿಯನ್ನು ಬಂಧಿಸಿರುವ ಪೊಲೀಸರು, ‘ವಿದೇಶಿ ಭಯೋತ್ಪಾದಕ ಸಂಘಟನೆಗೆ ಬೆಂಬಲ ಒದಗಿಸುವ ಸಂಚು’ ನಡೆಸಿದ ಆರೋಪ ಹೊರಿಸಿದ್ದಾರೆ. ಅಮೆರಿಕದ ಕಾನೂನಿನಡಿ ಆರೋಪ ಸಾಬೀತಾದಲ್ಲಿ, 20 ವರ್ಷದವರೆಗಿನ ಜೈಲು ಶಿಕ್ಷೆಯ ಅವಕಾಶವಿದೆ ಎನ್ನಲಾಗಿದೆ. (ಏಜೆನ್ಸೀಸ್)

    VIDEO | ವರದಿಗಾರ್ತಿಯ ಮೈಕ್​ ಕಸಿದು ಓಡಿದ ನಾಯಿ! ಎಲ್ಲವೂ ಲೈವ್ ಟೆಲಿಕಾಸ್ಟ್!

    ನರೇಂದ್ರ ಮೋದಿ, ಶೇಖ್ ಹಸೀನಾ ಬಗ್ಗೆ ಅಪಹಾಸ್ಯ : ಯುವಕನ ಬಂಧನ

    ಈ ಅಪರೂಪದ ತರಕಾರಿಯ ಬೆಲೆ ಕೇಳಿದರೆ ತಲೆ ಸುತ್ತುವುದು ಗ್ಯಾರಂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts