More

    ಅಕ್ಷರ ಜ್ಞಾನದ ಜತೆ ಇರಲಿ ಸನ್ನಡತೆ: ಪಂಚಮಸಾಲಿ ಸಮಾಜದ ಅಧ್ಯಕ್ಷ ಪಾಟೀಲ್ ಕಿವಿಮಾತು

    ಹೊನ್ನಾಳಿ: ಎಲ್ಲ ಸಮುದಾಯಗಳಲ್ಲೂ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಬಹುತೇಕ ಜನರಲ್ಲಿ ಸನ್ನಡತೆ, ವಿನಯವಂತಿಕೆ ಮೂಡದಿರುವುದು ಬೇಸರದ ಸಂಗತಿ ಎಂದು ರಾಜ್ಯ ಪಂಚಮಸಾಲಿ ಸಮಾಜದ ಅಧ್ಯಕ್ಷ ಜಿ.ಪಿ.ಪಾಟೀಲ್ ಹೇಳಿದರು.

    ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

    ಕೋವಿಡ್ ಕಾರಣದಿಂದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅನೇಕ ಕಾರ್ಯ ಯೋಜನೆಗಳು ನೀರಿಕ್ಷೆಯಲ್ಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಮಾಡುವುದಾಗಿ ತಿಳಿಸಿದರು.

    ತಾಲೂಕು ಅಧ್ಯಕ್ಷ ಪಿ.ವೀರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಸಮಾಜದ ವಿದ್ಯಾರ್ಥಿಗಳು ಕೆಎಎಸ್, ಕೆಪಿಎಸ್, ಐಎಎಸ್, ಐಪಿಎಸ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಬೇಕು, ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಸರ್ವರಿಗೂ ಆದರ್ಶ ಆಗಬೇಕು ಎಂದರು.

    ಸಮಾರಂಭವನ್ನು ಸಮಾಜದ ಹಿರಿಯ ಮುಖಂಡ ಡಾ.ರಾಜ್‌ಕುಮಾರ್ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಉಪನ್ಯಾಸಕ ಪ್ರಸನ್ನ ಮಾತನಾಡಿದರು. ಮುಖ್ಯಶಿಕ್ಷಕ ದೊಡ್ಡಪ್ಪ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಾ ಪಾಟೀಲ್, ಮುಖಂಡರಾದ ಎನ್.ಡಿ.ಪಂಚಾಕ್ಷಪ್ಪ, ಗುರುಶಾಂತಪ್ಪ, ಶಿಲ್ಪಾ ರಾಜು, ಕುಂಕೋದ ಹಾಲೇಶ್, ಯುವ ಘಟಕದ ಅಧ್ಯಕ್ಷ ಎಚ್.ಪಿ.ಗಿರೀಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts