More

    ಇಂದಿರಾ ಕ್ಯಾಂಟೀನ್‌ನಲ್ಲಿ ಚಪಾತಿ, ಮುದ್ದೆ ಊಟ

    ತುಮಕೂರು: ಇಂದಿರಾ ಕ್ಯಾಂಟೀನ್‌ನಲ್ಲಿ ಇನ್ಮುಂದೆ ಚಪಾತಿ, ಮುದ್ದೆ ಕೂಡ ಸಿಗಲಿದೆ. ನಗರದ ಇಂದಿರಾ ಕ್ಯಾಂಟೀನ್‌ಗಳಿಗೆ ಬರುವ ಮಧುಮೇಹಿಗಳು, ರೋಗಿಗಳಿಗೆ ಚಪಾತಿ, ಮುದ್ದೆ ಊಟವನ್ನು ದಾನಿಗಳ ನೆರವಿನಿಂದ ಉಚಿತವಾಗಿ ಒದಗಿಸಲು ಪಾಲಿಕೆ ಮುಂದಾಗಿದೆ.

    ದೇಶವ್ಯಾಪಿ ಲಾಕ್ ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ನಿರ್ಗತಿಕರು, ಬಡವರ ಹಸಿವು ನೀಗಿಸುವ ಸಲುವಾಗಿ ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ತಿಂಡಿ, ಊಟ ನೀಡಲಾಗುತ್ತಿದ್ದು ಇಲ್ಲಿಗೆ ಬರುವ ಸಕ್ಕರೆ ಕಾಯಿಲೆ ಹಾಗೂ ಇತರ ರೋಗಗಳಿಂದ ಬಳಲುತ್ತಿರುವ ಆರೋಗ್ಯದ ದೃಷ್ಟಿಯಿಂದ ಚಪಾತಿ ಹಾಗೂ ಮುದ್ದೆ ಊಟ ನೀಡುವ ವ್ಯವಸ್ಥೆ ಮಾಡಲಾಗಿದೆ.

    ಇಂದಿರಾ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಅನ್ನಸಾರು ಪೂರೈಸಲಾಗುತ್ತಿದೆ. ಅನ್ನ ತಿಂದು ಸಾಕಷ್ಟು ಮಧುಮೇಹಿಗಳಲ್ಲಿ ಸಕ್ಕರೆ ಅಂಶ ನಿಯಂತ್ರಣಕ್ಕೆ ಬಾರದೆ ಉಲ್ಭಣಗೊಂಡಿದ್ದು ಆರೋಗ್ಯದಲ್ಲಿ ಏರುಪೇರಾದ ವರದಿಗಳು ಬಂದಿದೆ. ಕೆಲವರು ಚಪಾತಿ, ಮುದ್ದೆ ನೀಡುವಂತೆ ಬೇಡಿಕೆ ಇಟ್ಟಿದ್ದು ಇದನ್ನೆಲ್ಲಾ ಪರಿಗಣಿಸಿ ಪ್ರಾಯೋಗಿಕವಾಗಿ ನಗರದ 4 ಇಂದಿರಾ ಕ್ಯಾಂಟೀನ್‌ಗಳಲ್ಲಿ ಜಾರಿಗೊಳಿಸಲಾಗಿದೆ. ಇಂದಿರಾ ಕ್ಯಾಂಟೀನ್‌ಗೆ ಊಟಕ್ಕಾಗಿ ಬರುವ ಬಡವರು, ಕೂಲಿ ಕಾರ್ಮಿಕರಲ್ಲಿರುವ ಮಧುಮೇಹಿಗಳು ಪ್ರತಿನಿತ್ಯ ಅನ್ನ ಊಟ ಮಾಡಲು ಸಾಧ್ಯವಾಗದೆ ವಾಪಸಾಗುತ್ತಿದ್ದನ್ನು ಗಮನಿಸಿದ ಪಾಲಿಕೆಯ ವ್ಯವಸ್ಥಾಪಕ ಮಹೇಶ್ ಅವರೇ ಸ್ವಂತ ಖರ್ಚಿನಲ್ಲಿ ಮಧುಮೇಹಿ ರೋಗಿಗಳಿಗಾಗಿ ಪ್ರತಿನಿತ್ಯ 100 ಚಪಾತಿ ನೀಡಲು ಮುಂದಾಗಿದ್ದಾರೆ.

    ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಕಷ್ಟು ಜನ ಆಹಾರ ಇಲ್ಲದೆ ಪರದಾಡುತ್ತಿದ್ದಾರೆ. ಕೆಲವರು ಅನಾರೋಗ್ಯದಿಂದಲೂ ನರಳುತ್ತಿದ್ದಾರೆ. ಇದನ್ನು ಮಹಾನಗರ ಪಾಲಿಕೆ ಮನಗಂಡು ದಾನಿಗಳ ಮೂಲಕ ಆಹಾರ ಒದಗಿಸುವ ಕೆಲಸ ಮಾಡಲಾಗುತ್ತಿದೆ ಎನ್ನುತ್ತಾರೆ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್. ಯಾರೂ ಹಸಿವಿನಿಂದ ಬಳಲುವುದು ಬೇಡ. ಸಂಕಷ್ಟದಲ್ಲಿರುವವರು ನೇರವಾಗಿ ನಮಗೆ ಅಥವಾ ಜಿಲ್ಲಾಧಿಕಾರಿ ಕಂಟ್ರೋಲ್ ರೂಂಗೆ ಕರೆ ಮಾಡಬಹುದು. ಚಪಾತಿ, ಮುದ್ದೆ ಕೊಡುವುದನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದು ದಾನಿಗಳು ಮುಂದೆ ಬಂದು ಚಪಾತಿ , ಮುದ್ದೆ ಒದಗಿರುಸುವರಿದ್ದರೆ ಮೊ: 9448743984ಕ್ಕೆ ಕರೆ ಮಾಡಿ ಸಂಪರ್ಕಿಸಬಹುದು ಎಂದು ಡಾ.ನಾಗೇಶ್ ಕುಮಾರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts