More

    ಹುಚ್ಚರಾಯಸ್ವಾಮಿ ಸನ್ನಿಧಿಯಲ್ಲಿ ರಾಮ ನಾಮಜಪ

    ಶಿಕಾರಿಪುರ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮೂರ್ತಿ ಪ್ರತಿಷ್ಠಾಪನೆಯ ಸಂಭ್ರಮ ತಾಲೂಕಿನಾದ್ಯಂತ ಮನೆ ಮಾಡಿತ್ತು. ಶ್ರೀರಾಮನ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರಗಳು ಸಾಂಗವಾಗಿ ನೆರವೇರಿದವು.

    ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಶ್ರೀ ಸೀತಾರಾಮಚಂದ್ರ, ಲಕ್ಷ್ಮಣ ಮತ್ತು ವರದಾಂಜನೇಯ ಸ್ವಾಮಿಗೆ ಶಾಸ್ತ್ರೋಕ್ತವಾಗಿ ಅಭಿಷೇಕ, ಪೂಜೆ, ದೀಪಾಲಂಕಾರ, ಅಲಂಕಾರ ನೆರವೇರಿಸಲಾಯಿತು. ಕ್ಷೇತ್ರಾಧಿಪತಿ ಶ್ರೀ ಹುಚ್ಚರಾಯಸ್ವಾಮಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾಕೈಂಕರ್ಯ ನೆರವೇರಿಸಲಾಯಿತು. ಸ್ವಾಮಿಗೆ ಹೂವು ಮತ್ತು ತುಳಸಿಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
    ಶ್ರೀರಾಮ ತಾರಕಹೋಮ ಜರುಗಿತು. ಮುಂಜಾನೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸ್ವಾಮಿಯ ದರ್ಶನಕ್ಕಾಗಿ ದೇವಸ್ಥಾನಕ್ಕೆ ಆಗಮಿಸಿದ್ದರು. ಇಡೀ ದೇವಾಲಯ ತಳಿರು, ತೋರಣ, ಪುಷ್ಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಹರೀಶ್ ಜೋಯ್ಸ್, ಪ್ರದೀಪ್ ಕುಲಕರ್ಣಿ, ಗಣಪತಿ ಭಟ್, ಪ್ರಕಾಶ್ ಹೋತನಕಟ್ಟೆ, ಉಮೇಶ್ ಭಟ್, ಹರೀಶ್ ಭಟ್, ವೆಂಕಟೇಶ್ ಭಟ್, ಪಾಂಡುರಂಗ ದೀಕ್ಷಿತ್ ಇತರರಿದ್ದರು.
    ಸಮೀಪದ ತೊಗರ್ಸಿ ಶ್ರೀರಾಮ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ರಾಮೋತ್ಸವ ಜರುಗಿತು. ಶ್ರೀ ಸೀತಾರಾಮ, ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ರಾಮರಕ್ಷಾಸ್ತೋತ್ರ, ಹನುಮಾನ್ ಚಾಲೀಸ್, ಶ್ರೀವಿಷ್ಣು ಸಹಸ್ರನಾಮ, ಶ್ರೀ ಸೂಕ್ತ, ಪುರುಷ ಸೂಕ್ತ ಪಾರಾಯಣ ನಡೆಯಿತು. ದೇಗುಲದ ಆವರಣದಲ್ಲಿ ಅಯೋಧ್ಯೆಯ ದೃಶ್ಯಾವಳಿಗಳ ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರಾರ್ಥನಾ ಶಾಲೆಯ ಚಿಣ್ಣರು ಶ್ರೀ ಸೀತಾರಾಮ, ಲಕ್ಷ್ಮಣ, ಆಂಜನೇಯನ ವೇಷ ಧರಿಸಿ ಹೆಜ್ಜೆ ಹಾಕಿದರು. ನಂತರ ಪ್ರಸಾದ ವಿತರಣೆ ಮಾಡಲಾಯಿತು. ಸಂಜೆ ಕಾರ್ತಿಕ ಮಾಸದ ಮಾದರಿ ಇಡೀ ಊರಿನ ರಾಜ ಬೀದಿಗಳಲ್ಲಿ ಶ್ರೀ ರಾಮ ಲಲ್ಲಾನ ಪ್ರತಿಷ್ಠಾಪನೆ ಪ್ರಯುಕ್ತ ಸಹಸ್ರಾರು ಹಣತೆಗಳನ್ನು ಬೆಳಗಿಸಿದರು.
    ಗ್ರಾಪಂ ಅಧ್ಯಕ್ಷ ಎಸ್.ನಿರಂಜನ್, ಭೋವಿ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಸಣ್ಣ ಹನುಮಂತಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷ ಪರಶುರಾಮ ಹೆಬ್ಬಾರೆ, ಶಿವಾನಂದ ಬಾಂಬೂರೆ, ಜೆ.ಪರಮೇಶ್ವರಪ್ಪ, ಚನ್ನವೀರಸ್ವಾಮಿ, ದೇವಾಲಯ ಸಂಚಾಲಕ ಪಾಂಡುರಂಗ ನವಲೆ, ದಾಮೋದರ್, ಹರೀಶ್, ಸುನಿಲ್, ಸಾಗರ್, ಪ್ರವೀಣ್, ಮಾರುತಿ, ಎಂ.ಎನ್.ಗೌಳಿ, ಸಮರ್ಥ, ಅನಿಲ್, ಅರ್ಚಕರಾದ ವಿಜಯ ಕುಮಾರ್ ನಾಡಿಗೇರ್, ಸತ್ಯನಾರಾಯಣ ರಾವ್ ನಾಡಿಗೇರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts