More

    ಕಾಡುಬಸವೇಶ್ವರ ದೇವಸ್ಥಾನದಲ್ಲಿ ವಿಜಯದಶಮಿ

    ಚನ್ನರಾಯಪಟ್ಟಣ: ವಿಜಯದ ಸಂಕೇತವಾಗಿರುವ ವಿಜಯದಶಮಿಯನ್ನು ಪಟ್ಟಣದಲ್ಲಿಯೂ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

    ಪಟ್ಟಣದ ಅರಳೆಪೇಟೆಯಲ್ಲಿರುವ ಕಾಡುಬಸವೇಶ್ವರ ದೇವಸ್ಥಾನದಲ್ಲಿ ವಿಜಯದಶಮಿ ಪ್ರಯುಕ್ತ ಬನ್ನಿ ಮರಕ್ಕೆ ಕಟ್ಟಲಾಗಿದ್ದ ಅಲಂಕೃತವಾದ ಬಾಳೆಯ ದಿಂಡನ್ನು ಛೇದಿಸಲಾಯಿತು.

    ಮೇಗಲಕೇರಿಯ ಕಾಡುಬಸವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ 9 ದಿನಗಳ ಕಾಲ ದೇವಿ ಮಹಾತ್ಮೆ ಪಾರಾಯಣ ಹಮ್ಮಿಕೊಂಡು ದೇವರನ್ನು ಪಟ್ಟಕ್ಕೆ ಕೂರಿಸಲಾಗಿತ್ತು. ವಿಜಯದಶಮಿ ದಿನದಂದು ದೇವರನ್ನು ಮೆರವಣಿಗೆ ಮಾಡಿ ಕೊನೆಗೆ ಅರಳೆಪೇಟೆಯ ಕಾಡುಬಸವೇಶ್ವರ ಸ್ವಾಮಿ ದೇವಸ್ಥಾನದ ಬನ್ನಿ ಮಂಟಪದ ಬಳಿ ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಕಿರಿಯ ಸ್ವಾಮೀಜಿ ಅಭಿನವ ಶ್ರೀ ಅವರಿಂದ ಮಹಿಳೆಯರಿಗೆ ಬಾಗಿನ ನೀಡಿ, ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಿ ಬನ್ನಿ ಮರಕ್ಕೆ ಪೂಜೆ ನೆರವೇರಿಸಿದರು.

    ಪೂಜೆಯ ನಂತರ ದೇವಾಲಯದ ಪ್ರಧಾನ ಅರ್ಚಕ ಶಿವಾನಂದ್ ಅವರು ಬಾಳೆಯ ದಿಂಡನ್ನು ಕಡಿದರು. ನಂತರ ಸ್ವಾಮೀಜಿ ಬನ್ನಿ ಕಡಿದರು. ಬನ್ನಿ ಮರದ ಎಲೆಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ವಿಜಯ ನಮ್ಮದಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ ನೆರೆದಿದ್ದ ಭಕ್ತರೆಲ್ಲರಿಗೂ ಸ್ವಾಮೀಜಿ ಬನ್ನಿ ವಿತರಿಸಿದರು.

    ಪ್ರಭುಸ್ವಾಮಿ, ಷಡಕ್ಷರಿ, ಸಿ.ಎಸ್.ರಾಘವೇಂದ್ರ, ಶಂಕರ್ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts