More

    ಅಂತೂ ತೆರೆಯಿತು ಅಂಗನವಾಡಿ ಬಾಗಿಲು

    ಚಳ್ಳಕೆರೆ: ವರ್ಷಗಳ ಕಾಲ ಬಾಗಿಲಿಗೆ ಬೀಗ ಕಂಡಿದ್ದ ತಾಲೂಕಿನ ಚನ್ನಮ್ಮ ನಾಗತಿಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ ಅಂತೂ ಈಗ ಬಾಗಿಲು ತೆರೆದಿದೆ.

    ಕಾರ್ಯಕರ್ತೆ ಹುದ್ದೆ ನೇಮಕಾತಿ ವಿವಾದದಿಂದಾಗಿ ವರ್ಷಗಳಿಂದಲೂ ಇಲ್ಲಿನ ಅಂಗನವಾಡಿ ಕೇಂದ್ರವನ್ನು ಮುಚ್ಚಲಾಗಿತ್ತು. ಸೋಮವಾರ ಗ್ರಾಮದ ಮುಖಂಡರು ಮತ್ತು ಇಲಾಖೆ ಅಧಿಕಾರಿಗಳ ಸಮನ್ವಯ ಸಭೆ ಸೇರಿ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಿದ್ದು, ಅಂತೂ ಬಾಗಿಲು ತೆರೆದು ಮಕ್ಕಳಿಗೆ ಸೇವೆ ಕಲ್ಪಿಸಲು ಸನ್ನದ್ಧವಾಯಿತು.

    ಏನಿದು ವಿವಾದ: ಚನ್ನಮ್ಮ ನಾಗತಿಹಳ್ಳಿ ಗ್ರಾಮದಲ್ಲಿ ಸ್ಥಾಪಿತವಾಗಿರುವ ಅಂಗನವಾಡಿ ಕೇಂದ್ರ ವ್ಯಾಪ್ತಿಯಲ್ಲಿ ಶೇ.90ರಷ್ಟು ಪರಿಶಿಷ್ಟ ಜನರು ವಾಸವಿದ್ದಾರೆ. ಹಾಗಾಗಿ ಕಾರ್ಯಕರ್ತೆ ಹುದ್ದೆಗೆ ಸ್ಥಳೀಯರಿಗೇ ಆದ್ಯತೆ ನೀಡಿ ನೇಮಕ ಮಾಡಿಕೊಳ್ಳಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು.

    ಆದರೆ ಇಲಾಖೆ ನಿಯಮದಡಿ ಬೇರೊಂದು ಅಂಗನವಾಡಿ ಕೇಂದ್ರದಲ್ಲಿ ಸೇವೆ ಮಾಡುವ ಮತ್ತು ಹೆಚ್ಚಿನ ವಿದ್ಯಾಭ್ಯಾಸ ಇರುವ ಕಾರ್ಯಕರ್ತೆಯನ್ನು ನಿಯೋಜನೆ ಮಾಡಿದ್ದರಿಂದ ಗ್ರಾಮಸ್ಥರು ಅಂಗನವಾಡಿಗೆ ಬೀಗ ಹಾಕಿದ್ದರು.

    ಮುಖಂಡ ಬಿ.ಗುಜ್ಜಾರಪ್ಪ ಮಾತನಾಡಿ, ಆರು ತಿಂಗಳ ಅವಧಿಯಲ್ಲಿ ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳುವ ಭರವಸೆ ನೀಡಲಾಗಿದೆ. ಸರ್ಕಾರದ ಯೋಜನೆಯಡಿ ಗ್ರಾಮಕ್ಕೆ ನೂತನವಾಗಿ 10 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts