More

    ಚನ್ನಕೇಶವ ಪಾಲಿಟೆಕ್ನಿಕ್ ಉನ್ನತೀಕರಣ

    ಬಂಕಾಪುರ: ಚನ್ನಕೇಶವ ಪಾಲಿಟೆಕ್ನಿಕ್​ನಲ್ಲಿ ಎಐಟಿಸಿ ನಿಯಮಗಳಂತೆ 12 ಕೋಟಿ ರೂ. ಯೋಜನೆ ಹಾಕಿಕೊಳ್ಳಲಾಗಿದೆ. ಇದು ಯಶಸ್ವಿಯಾದರೆ ಡಿಪ್ಲೊಮಾ ಜತೆ ಇಂಜಿನಿಯರಿಂಗ್ ಆರಂಭಿಸಲು ಸಾಧ್ಯವಾಗಲಿದೆ. ಎರಡು ವರ್ಷಗಳಲ್ಲಿ ಎಲ್ಲ ಅಗತ್ಯ ಕಟ್ಟಡಗಳು ನಿರ್ಮಾಣ ಮಾಡಿ, ಎಐಟಿಸಿಯವರ ಒಪ್ಪಿಗೆ ಪಡೆದು ಸಂಸ್ಥೆ ಉನ್ನತೀಕರಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ಸಮೀಪದ ಗುಡ್ಡದ ಚನ್ನಾಪುರ ಚನ್ನಕೇಶವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್​ನಲ್ಲಿ ಶನಿವಾರ ತಾಂತ್ರಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಗೃಹ ಮಂಡಳಿ ಆಶ್ರಯದಲ್ಲಿ ಬಾಲಕಿಯರ ಮತ್ತು ಬಾಲಕರ ವಸತಿ ನಿಲಯದ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಬಾಲಕರ ವಸತಿ ನಿಲಯದ ನೂತನ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

    ಬೇರೆ ಬೇರೆ ಊರುಗಳಿಂದ ಬಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ವಸತಿ ನಿಲಯ ನಿರ್ಮಾಣ ಮಾಡಿದ್ದೇವೆ. ಎಲ್ಲ ವಸತಿ ನಿಲಯಗಳಲ್ಲಿ ಅಡುಗೆ ಮನೆ, ಊಟದ ಹಾಲ್ ನಿರ್ಮಾಣ ಮಾಡಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗದ ಇಲಾಖೆಗಳಿಂದ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುವುದು.

    ಚನ್ನಕೇಶವ ಪಾಲಿಟೆಕ್ನಿಕ್ ಹಂತ ಹಂತವಾಗಿ ಪ್ರಗತಿಯಾಗುತ್ತಿದೆ. ಈಗಾಗಲೇ ಎರಡು ವಸತಿ ನಿಲಯಗಳು ನಿರ್ವಣಗೊಳ್ಳುತ್ತಿದ್ದು, 1.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಣಗೊಂಡ ಬಾಲಕರ ವಸತಿ ನಿಲಯ ಉದ್ಘಾಟಿಸಿದ್ದೇವೆ. ಬಾಲಕರ ವಸತಿ ನಿಲಯಕ್ಕೆ ಹೆಚ್ಚುವರಿಯಾಗಿ 91 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಕೊಠಡಿಗಳು ಹಾಗೂ ಬಾಲಕಿಯರ ವಸತಿ ನಿಲಯದಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ಹೆಚ್ಚುವರಿ ಆರು ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.

    ಬಿಜೆಪಿ ತಾಲೂಕು ಮಂಡಲದ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ತಾಪಂ ಸದಸ್ಯ ವಿಶ್ವನಾಥ ಹರವಿ, ಅಕ್ಕಮ್ಮ ರಟಗೇರಿ, ಶಾರವ್ವ ಹರಿಜನ, ವಿಜಯಲಕ್ಷ್ಮಿ ಮುಂದಿನಮನಿ ಕಾಲೇಜ ಉಪನ್ಯಾಸಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts