More

    ವಿಜ್ಞಾನ ಕ್ಷೇತ್ರವಾದರೂ ಸಾಹಿತ್ಯದ ಆಯ್ಕೆ

    ಚನ್ನಗಿರಿ: ಕೆ.ಎಸ್.ನಿಸಾರ್‌ಅಹಮದ್ ವ್ಯಾಸಂಗ ಮಾಡಿರುವುದು ವಿಜ್ಞಾನ ಕ್ಷೇತ್ರ. ಆದರೆ ಪ್ರಯಾಣಿಸಿದ ದಾರಿ ಸಾಹಿತ್ಯ ಕ್ಷೇತ್ರ. ಅವರನ್ನು ಆಗಸದಷ್ಟು ಮೇಲಕ್ಕೆ ತೆಗೆದುಕೊಂಡು ಹೋಗಿ ಕನ್ನಡ ನಾಡಿನ ಜನರ ಮನಸ್ಸಲ್ಲಿ ನಿಲ್ಲುವಂತೆ ಮಾಡಿದ್ದು ಮಾತ್ರ ಕನ್ನಡ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ.ಶ್ರೀ ಗುರುಬಸವ ಸ್ವಾಮೀಜಿ ತಿಳಿಸಿದರು.

    ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಕೆ.ಎಸ್.ನಿಸಾರ್ ಅಹಮದ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಸೋಮವಾರ ಮಾತನಾಡಿದರು.

    ಸಾಹಿತ್ಯ ಕ್ಷೇತ್ರದ ಬಹುತೇಕ ಎಲ್ಲ ಪ್ರಶಸ್ತಿಗಳನ್ನು ಪಡೆದರೂ ಅವರಲ್ಲಿ ರಾಷ್ಟ್ರ ಕವಿಯಾಗುವಂಥ ಎಲ್ಲ ಗುಣಗಳಿದ್ದವು. ಶಿವಮೊಗ್ಗದಲ್ಲಿ ನಡೆದ 73ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕೀರ್ತಿ ತಂದು ಕೊಟ್ಟಿದ್ದಾರೆ. ಕನ್ನಡದ ಕಾವ್ಯ ಪರಂಪರೆಗೆ ಹೊಸ ಶಕ್ತಿ ತುಂಬಿದ್ದಾರೆ ಎಂದರು.

    ಕಸಾಪ ತಾಲೂಕು ಅಧ್ಯಕ್ಷ ಎಂ.ಯು.ಚನ್ನಬಸಪ್ಪ, ಕಾರ್ಯದರ್ಶಿ ಎಂ.ಬಿ.ನಾಗರಾಜ್ ಕಾಕನೂರು, ಸಹ ಕಾರ್ಯದರ್ಶಿ ಚಿನ್ನಸ್ವಾಮಿ, ಜಿ.ಎಸ್.ಶಿವಮೂರ್ತಪ್ಪ, ಟಿ.ವಿ.ಚಂದ್ರಪ್ಪ, ಸಿ.ಎಸ್.ನಿಜಲಿಂಗಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts