More

    ಜನ ಕಲ್ಯಾಣ ಬಯಸಿದ ಶರಣರು

    ಚನ್ನಗಿರಿ: ಶರಣರು ಶ್ರೀಮಂತರಲ್ಲ. ಜನ ಕಲ್ಯಾಣ ಬಯಸಿದ ಮಹಾತ್ಮರು ಎಂದು ಶ್ರೀ ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ಹೇಳಿದರು.

    ತಾಲೂಕಿನ ಪಾಂಡೋಮಟ್ಟಿಯ ವಿರಕ್ತಮಠದಲ್ಲಿ ಭಾನುವಾರ ಆಯೋಜಿಸಿದ್ದ ಶಿವಶರಣ ಡೋಹರ ಕಕ್ಕಯ್ಯನವರ ಸ್ಮರಣೋತ್ಸವದಲ್ಲಿ ಮಾತನಾಡಿದರು.

    ಶರಣರು ಜನರ ಸುಖ-ದುಃಖಗಳನ್ನು ತಮ್ಮದಾಗಿಸಿಕೊಂಡು ಅವರ ಕಲ್ಯಾಣಕ್ಕಾಗಿ ನಿಸ್ವಾರ್ಥದಿಂದ ಸೇವೆ ಸಲ್ಲಿಸಿದರು ಎಂದರು.

    ಬಸವ ಕುಲದಲ್ಲಿ ಜಾತಿ, ಮತದ ಭೇದವಿರದೆ ಮನುಜರೆಲ್ಲ ಒಂದೇ ಎಂಬ ಭಾವವಿತ್ತು. ಅವರದು ಕಲ್ಯಾಣ ರಾಜ್ಯದ ಕನಸಾಗಿತ್ತು. ನೂರಾರು ಶರಣರು ಒಂದೇ ಸೂರಿನಡಿಗೆ ಬಂದು ವಚನ ರಚಿಸಿದರು ಎಂದರು.

    ಬೆಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಎಚ್.ಎಸ್. ಬಸವರಾಜಪ್ಪ ಮಾತನಾಡಿ, ಶರಣರು ಜಾತಿವಾದಿಗಳಲ್ಲ, ಜ್ಯೋತಿ ಸ್ವರೂಪಿಗಳು, ವಿಶಾಲಮತಿಗಳು. ಭೋಗ ಜೀವನ ತ್ಯಜಿಸಿ, ಕಾಯಕ ಜೀವಿಗಳಾಗಿ ಜೀವನ ನಡೆಸಿದವರು ಎಂದರು.

    ಪಿಎಸ್‌ಐ ಜಗದೀಶ್, ಸರ್ಕಾರಿ ಸಹಾಯಕ ಅಭಿಯೋಜಕ ಬಿ. ಮಂಜುನಾಥ್, ಕಾಕನೂರಿನ ಎಂ.ಬಿ. ನಾಗರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts