More

    ಬಿಜೆಪಿ ಉಳಿಸುವ, ವಿಸ್ತರಿಸುವ ಕೆಲಸ ಮಾಡುವೆವು

    ಚನ್ನಗಿರಿ: ಮಾಜಿ ಶಾಸಕ ಗುರುಸಿದ್ದನಗೌಡ ಅವರ ಮೂರು ಮಕ್ಕಳನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ನನಗೆ ನೋಟಿಸ್ ನೀಡಿದೆ. ಅದಕ್ಕೆ ಹೆದರುವುದಿಲ್ಲ. ಸಂಘಟನೆಗೆ ಕತ್ತರಿ ಆಗಬಾರದು, ಸೂಜಿ- ದಾರ ಆಗಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

    ತಾಲೂಕು ಮಾಡಾಳು ಗ್ರಾಮದಲ್ಲಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮನೆಗೆ ಸೋಮವಾರ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

    ಎಲ್ಲ ಶಾಸಕರು ಸೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದೇವೆ. ಜಿಲ್ಲಾಧ್ಯಕ್ಷ ಅಂದರೆ ಸುಪ್ರೀಮ್ ಅಲ್ಲ, ಜಿಲ್ಲೆಯಲ್ಲಿ ಯಾವಾಗ ಪ್ರವಾಸ ಮಾಡಿದ್ದಾರೆ. ಕೇಂದ್ರ ಸರ್ಕಾರದ ಅಭಿವೃದ್ಧಿಗಳನ್ನು ಪ್ರತಿ ಮನೆಗೆ ತಲುಪಿಸುವ ಕೆಲಸ ನಾವು ಮಾಡಿದ್ದೇವೆ. ಅವರು ನಮ್ಮ ಪಕ್ಷಕ್ಕೆ ಯಾವ ಕೊಡುಗೆ ಏನು ನೀಡಿದ್ದಾರೆ ಎಂದು ತಿಳಿದು ಮಾತಾಡಲಿ. ಪಕ್ಷ ಉಳಿಸುವ, ವಿಸ್ತರಿಸುವ ಕೆಲಸ ಮಾಡುತ್ತೇವೆ ಎಂದರು.

    ನನಗೆ ಯಾವ ಕೋರ್ ಕಮಿಟಿಯಿಂದ ನೋಟಿಸ್ ಬಂದಿಲ್ಲ ಮತ್ತು ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ. ಪಕ್ಷ ಏನು ತಿರ್ಮಾನ ಮಾಡುತ್ತದೆ, ಅದಕ್ಕೆ ಬದ್ಧವಾಗಿರುತ್ತೇನೆ. ನನ್ನ ವಿರುದ್ಧ ಮಾತನಾಡುವಂತವರನ್ನು ನಿರ್ಲಕ್ಷೃ ಮಾಡುತ್ತೇನೆ. ನಾನು ಬಿಜೆಪಿ ಶಿಸ್ತಿನ ಸಿಪಾಯಿ ಈ ಬಾರಿ ಲೋಕಸಭಾ ಚುನಾವಣೆಯ ಪ್ರಬಲ ಅಕಾಂಕ್ಷಿ. ನನ್ನ ಕ್ಷೇತ್ರದ ಮತದಾರರು ನನ್ನ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.

    ಮಾಡಾಳು ಗ್ರಾಮಕ್ಕೆ ಬಂದಿರುವುದು ವಿರೂಪಾಕ್ಷಪ್ಪ ಅವರನ್ನು ಭೇಟಿ ಮಾಡಲು ಹೊರತು, ರಾಜಕಾರಣದ ಬಗ್ಗೆ ಮಾತನಾಡಲು ಅಲ್ಲ. ವಿರೂಪಾಕ್ಷಪ್ಪ ಚನ್ನಗಿರಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ವಿರುದ್ಧವೇ ಪಿತೂರಿ ನಡೆದಿದೆ. ಒಂದು ದಿನ ಅದು ಬೆಳಕಿಗೆ ಬರಲಿದೆ. ಈಗ ನಾವು ನಮ್ಮ ನೋವು- ನಲಿವು ಹಂಚಿಕೊಂಡಿದ್ದೇವೆ ಎಂದರು.

    ಮಾಡಾಳು ಮಲ್ಲಿಕಾರ್ಜುನ ರಾಜಕಾರಣದಲ್ಲಿ ಉಳಿಸಿಕೊಳ್ಳಲು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದರೆ ಅವರೆ ಗೆಲ್ಲುತ್ತಿದ್ದರು. ಅವರಿಗೆ ಧೈರ್ಯ ತುಂಬುವಂಥ ಕೆಲಸ ಮಾಡಿದ್ದೇವೆ ಎಂದರು.

    ಮಾಜಿ ಶಾಸಕ ಗುರುಸಿದ್ಧನಗೌಡ ಮಾತನಾಡಿ, ನಾವು ಮಾಡಾಳು ಕುಟುಂಬದ ಹಿತೈಷಿಗಳು. ಒಂದು ಕಾಲಕ್ಕೆ ಪಕ್ಷದಲ್ಲಿ ಶಕ್ತಿಯಾಗಿದ್ದರು. ಸಾರ್ವಜನಿಕ ಜೀವನದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರನ್ನು ಮಾತನಾಡಿಸಲು ಮನೆಗೆ ಬಂದಿದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts