More

    ಸಾವಯವ ಪದಾರ್ಥದಿಂದ ಮಣ್ಣಿನ ಫಲವತ್ತತೆ ಹೆಚ್ಚಳ

    ಚನ್ನಗಿರಿ: ಸಾವಯವ ಪದಾರ್ಥ ಮಣ್ಣಿಗೆ ಸೇರಿಸುವ ಕಾರ್ಯ ಹಸಿರೆಲೆ ಗೊಬ್ಬರ ಹೊಲಗದ್ದೆಗಳಲ್ಲಿ ಬೆಳೆಯುವ ಮೂಲಕ ಆರಂಭವಾಗಿದೆ. ಡಯಾಂವಾ, ಸನ್‌ಹೆಂಪ್, ಅಲಸಂದೆ ಇನ್ನಿತರೆ ಬೆಳೆ ಬೆಳೆದು ಸಾವಯವ ಪದಾರ್ಥ ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಉತ್ತಮವಾಗಿರುತ್ತದೆ ಎಂದು ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ಸಂಶೋಧನ ಕೇಂದ್ರದ ವಿಸ್ತರಣಾ ವಿಜ್ಞಾನಿ ಡಾ.ಗಂಗಪ್ಪಗೌಡ ಬಿರದಾರ ತಿಳಿಸಿದರು.

    ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿನ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ಸಂಶೋಧನ ಕೇಂದ್ರದಲ್ಲಿನ ರೈತರಿಗೆ ಭೂಮಿ ಫಲವತ್ತತೆ ಕುರಿತು ಮಾಹಿತಿ ನೀಡಿ ಮಂಗಳವಾರ ಮಾತನಾಡಿದರು.

    ರೈತರು ಗೊಬ್ಬರಕ್ಕಾಗಿ ಖರ್ಚು ಮಾಡುವಂತ ಶೇ. 30ರಷ್ಟು ಹಣ ಉಳಿತಾಯ ಮಾಡಲು ಇಂತಹ ಪದ್ಧತಿ ಅನುಸರಿಸಬೇಕು. ಹಸಿರೆಲೆ ಗೊಬ್ಬರ ಮಣ್ಣಿಗೆ ಸೇರಿಸಿದರೆ ಶೇ.40ರಷ್ಟು ಸಾರಜನಕ ಒಂದು ಎಕರೆಗೆ ಸೇರಿಸಿದಷ್ಟು ಸಮ ಎಂದರು.

    ಕೇಂದ್ರದ ಕೃಷಿ ವಿಜ್ಞಾನಿ ಡಾ.ಗಂಗಾಧರ್ ಮಾತನಾಡಿ, ಡಯಾಂಟಾ ಬೆಳೆ ಸಾಕಷ್ಟು ತೇವಾಂಶವಿದ್ದರೆ ಎಲ್ಲ ಋತುಗಳಲ್ಲಿ ಬೆಳೆಯುವ ಬೆಳೆಯಾಗಿದೆ, ಬಿತ್ತನೆ ಬೀಜ ಉತ್ಪಾದನೆಗೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳು ಸೂಕ್ತವಾದ ಕಾಲ ಎಂದರು.
    ರೈತರಾದ ಹರೀಶ್, ತಿಪ್ಪೇಶ್, ಸುನೀಲ್‌ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts