More

    ಚನ್ನಗಿರಿಯಲ್ಲಿ ಸೋಂಕು ನಿವಾರಕ ಮಾರ್ಗಕ್ಕೆ ಚಾಲನೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾಹಿತಿ

    ಚನ್ನಗಿರಿ: ಕರೊನಾ ವೈರಸ್ ತಡೆಗಟ್ಟುವ ಸಲುವಾಗಿ ಪಟ್ಟಣದ ಮೂರು ಮುಖ್ಯ ಜಾಗಗಳಲ್ಲಿ ಜೈವಿಕ ಸೋಂಕು ನಿವಾರಣಾ ಕೇಂದ್ರವನ್ನು ಪ್ರಾರಂಭ ಮಾಡಲಾಗುತ್ತದೆ. ಪ್ರಾಯೋಗಿಕವಾಗಿ ಸರ್ಕಾರಿ ಆಸ್ಪತ್ರೆ ಬಳಿ ಪ್ರಾರಂಭಿಸಿದೆ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು.

    ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಬಳಿ ಶುಕ್ರವಾರ ಜೈವಿಕ ಸೋಂಕು ನಿವಾರಣಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ರೋಗವು ಜನರಿಂದ ಜನರಿಗೆ ಅಧಿಕವಾಗುತ್ತಿದೆ. ಸರ್ಕಾರ ಎಷ್ಟೇ ಕಠಿಣ ಕ್ರಮ ತೆಗೆದುಕೊಂಡರೂ ಜನರು ಮನೆಯಲ್ಲಿರದೇ ಹೊರಗೆ ಬರುತ್ತಿದ್ದಾರೆ. ನಮ್ಮ ನಡುವೆ ಒಬ್ಬ ಕರೊನಾ ರೋಗಿ ಬಂದು ಹೋದರೆ ಎಲ್ಲರಿಗೂ ಹರಡುತ್ತದೆ. ಅದನ್ನು ನಿಯಂತ್ರಿಸಲು ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಠಾಣೆ ಹಾಗೂ ಗಣಪತಿ ವೃತ್ತದ ಬಳಿ ಕೇಂದ್ರ ಪ್ರಾರಂಭ ಮಾಡಲಾಗುತ್ತಿದೆ ಎಂದರು.

    ತಹಸೀಲ್ದಾರ್ ಎನ್.ಜೆ.ನಾಗರಾಜ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಆರ್.ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಐಗೂರು, ಸಿಪಿಐ ಆರ್.ಆರ್.ಪಾಟೀಲ್, ಡಾ.ಅರ್.ಎಂ.ಗಿರಿ, ಡಾ.ಪ್ರಭು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts