More

    ಅಭಿವೃದ್ಧಿ ಕಾಮಗಾರಿಗೆ ಸಿಎಂ ಭೂಮಿಪೂಜೆ

    ಚನ್ನಗಿರಿ: ಪುರಸಭೆ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಫೆಬ್ರವರಿಯಲ್ಲಿ ಭೂಮಿಪೂಜೆ ನೆರವೇರಿಸಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಕೆಎಸ್‌ಡಿಎಲ್ ಅಧ್ಯಕ್ಷ, ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

    15ನೇ ಹಣಕಾಸು ಯೋಜನೆಯಡಿ ಖರೀದಿಸಿದ ಮೂರು ಆಟೋ ಟಿಪ್ಪರ್‌ಗಳಿಗೆ ಪುರಸಭೆ ಆವರಣದಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿದರು. 9.40 ಕೋಟಿ ರೂ.ವೆಚ್ಚದ ಯುಜಿಡಿ ಕಾಮಗಾರಿ, ಗೃಹ ಮಂಡಳಿಯಿಂದ ನಿರ್ಮಿಸಲಾದ 1006 ಮನೆ, ಕೇಂದ್ರ ಸರ್ಕಾರದ ಅಮೃತ್ ಮಹಲ್ ಯೋಜನೆ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದು, ಫೆಬ್ರವರಿಯಲ್ಲಿ ದಿನಾಂಕ ನಿಗದಿ ಮಾಡಲಾಗುವುದು ಎಂದರು.

    ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ಪುರಸಭೆ ಸದಸ್ಯರು ಒಂದಾಗಿ ಕೆಲಸ ಮಾಡಬೇಕು. ಚುನಾವಣೆ ವೇಳೆ ಪಕ್ಷದ ಸಿದ್ಧಾಂತದಡಿ ಕೆಲಸ ಮಾಡಬೇಕು. ನಂತರ ಪ್ರಗತಿ ಕಾರ್ಯಕ್ಕೆ ಎಲ್ಲರೂ ಒಂದಾಗಬೇಕು ಎಂದು ಹೇಳಿದರು.

    ಮತದಾರರು ನಿಮ್ಮ ಮೇಲೆ ಭರವಸೆ ಇಟ್ಟು ಮತ ಹಾಕಿ ಗೆಲ್ಲಿಸಿದ್ದು, ಅವರ ನಂಬಿಕೆ ಹುಸಿ ಮಾಡಬಾರದು. ಪ್ರತಿ ದಿನ ವಾರ್ಡ್‌ಗಳಲ್ಲಿ ಸಂಚರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

    ಅಮೃತ್ ಮಹಲ್ ಯೋಜನೆಯಡಿ ಚನ್ನಗಿರಿ ಸೇರಿಸಲಾಗಿದೆ. ಕೇಂದ್ರ ಸರ್ಕಾರದಿಂದ 1 ಕೋಟಿ ರೂ. ಅನುದಾನ ಬರುತ್ತದೆ ಪಟ್ಟಣದಲ್ಲಿನ ಗೋಡೆ ಬರಹ, ಚರಂಡಿ ಸ್ವಚ್ಛತೆ ಹಾಗೂ ಇತರೆ ಕೆಲಸಗಳಿಗೆ ಬಳಕೆ ಮಾಡಬೇಕು. ಮುಂದಿನ ದಿನದಲ್ಲಿ ಅಧಿಕ ಅನುದಾನ ಬರಲಿದೆ. ಪಟ್ಟಣದಲ್ಲಿ 8 ಕೋಟಿ ರೂ.ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಈಗಾಗಲೇ ಟೆಂಡರ್ ಪೂರ್ಣಗೊಂಡಿದೆ ಎಂದರು.

    ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷ ಜರೀನಾಬಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಸ್ಲಾಂಬೇಗ್, ಸದಸ್ಯರಾದ ಚಿಕ್ಕಪ್ಪ, ಪಾರಿ ಪರಮೇಶ್, ನಿಂಗಪ್ಪ, ಅಮೀರ್ ಅಹ್ಮದ್, ಪಟ್ಟಿನಾಗರಾಜ್, ಗಾದ್ರಿ ಬಸವರಾಜ್, ಕಮಲಾ ಹರೀಶ್, ಸರ್ವಮಂಗಳಾ, ಮುಖ್ಯಾಧಿಕಾರಿ ಬಸವರಾಜ್ ಐಗೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts