More

    ಮೆಕ್ಕೆಜೋಳ ರಕ್ಷಣೆಗೆ ಸಲಹೆ

    ಚನ್ನಗಿರಿ : ಬೆಳವಣಿಗೆ ಹಂತದಲ್ಲಿರುವ ಮೆಕ್ಕೆಜೋಳದ ಬೆಳೆ ಹಳದಿ ಬಣ್ಣಕ್ಕೆ ತಿರುಗಿದ್ದು ರೈತರು ಸಸ್ಯ ಸಂಸ್ಕರಣಾ ಕ್ರಮ ಕೈಗೊಳ್ಳುವಂತೆ ಕೃಷಿ ಸಹಾಯಕ ನಿರ್ದೇಶಕ ಅರುಣ್ ಗುನ್ನಾ ತಿಳಿಸಿದ್ದಾರೆ.

    ತಾಲೂಕಿನ ಗರಗ ಗ್ರಾಮದ ರೈತರ ಹೊಲಗಳಲ್ಲಿ ಬೆಳೆ ವೀಕ್ಷಣೆ ಮಾಡಿ ಸೋಮವಾರ ಮಾತನಾಡಿದರು.

    ಮಳೆಯಿಂದ ಜಮೀನಿನ ತುಂಬ ನೀರು ನಿಲ್ಲುವ ಸಾಧ್ಯತೆ ಇದ್ದು ನೀರು ನಿಲ್ಲದಂತೆ ಹೊರಹಾಕಬೇಕು. ಲಘು ಪೋಷಕಾಂಶಗಳನ್ನು 5 ಎಂಎಲ್ ಪ್ರತಿ ಲೀಟರ್ ನೀರಿನೊಂದಿಗೆ ಹಾಗೂ ಕರಗುವ ಗೊಬ್ಬರವನ್ನು 4 ಗ್ರಾಂ, ಪ್ರತಿ ಲೀಟರ್ ನೀರಿನೊಂದಿಗೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.

    ಮೆಕ್ಕೆಜೋಳಕ್ಕೆ ಬೇರು ಕೊಳೆ ರೋಗ ಕಂಡು ಬಂದಲ್ಲಿ ಕಾರ್ಬಂಡೈಜಿಂ ಶಿಲೀಂದ್ರ ನಾಶಕವನ್ನು ಬೆಳೆಯ ಬುಡಕ್ಕೆ ಸುರಿಯಬೇಕು. ಬೆಳೆವಿಮೆಗೆ ಜು.31 ಕೊನೆಯ ದಿನವಾಗಿದೆ.

    ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹ ಫಲಾನುಭವಿಗಳು ಮುಂದಿನ ಕಂತು ಪಡೆಯಲು ಇಕೆವೈಸಿ ಮಾಡಿಸುವುದು ಕಡ್ಡಾಯ. ಸಮೀಪದ ರೈತ ಸಂಪರ್ಕ ಕೆಂದ್ರ ಅಥವಾ ಗ್ರಾಮ ಒನ್‌ಗೆ ತೆರಳಿ ಮಾಡಿಸಿಕೊಳ್ಳುವಂತೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಮೆಹತಾಬ್ ಅಲಿ, ರೈತ ಪರಮೇಶ್ವರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts