More

    ಹೆಸರು ಬದಲಿಸುವುದರಿಂದ ಜನ ಬದಲಾಗುವುದಿಲ್ಲ: ವಿಪಕ್ಷಗಳ ಮೇಲೆ ಪ್ರಲ್ಹಾದ ಜೋಶಿ ಟೀಕಾಸ್ತ್ರ

    ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವುದಕ್ಕಾಗಿ ‘ಇಂಡಿಯಾ’ ಹೆಸರಿನಲ್ಲಿ ಒಂದಾಗಿರುವ ವಿರೋಧ ಪಕ್ಷಗಳ ನಡೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಟುವಾಗಿ ಟೀಕಿಸಿದ್ದಾರೆ.

    ಇದನ್ನೂ ಓದಿ: VIDEO| ರಾಹುಲ್​ ಗಾಂಧಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್​ ಪ್ರಕರಣ; ಅಮಿತ್​ ಮಾಳವೀಯಾ ಪರ ಹೈಕೋರ್ಟಿನಲ್ಲಿ ವಾದ ಮಂಡಿಸಿದ ತೇಜಸ್ವಿ ಸೂರ್ಯ

    “ಕೇವಲ ತಮ್ಮ ಹೆಸರನ್ನು ಬದಲಿಸಿಕೊಳ್ಳುವುದರಿಂದ ಯಾರೂ ಬದಲಾಗುವುದಿಲ್ಲ. ಯುಪಿಎನಲ್ಲಿದ್ದ ಪಕ್ಷಗಳು ಈಗ ತಮ್ಮ ಘಟಬಂಧನ್‌ನ ಹೆಸರನ್ನು ಇಂಡಿಯಾ ಎಂದು ಬದಲಾಯಿಸಿಕೊಂಡಿವೆ. ಇದು ಒಂಥರ ಹೊಸ ಬಾಟಲಿಯಲ್ಲಿ ಬಂದಿರುವ ಹಳೇ ಮದ್ಯ’” ಎಂದು ಪ್ರಲ್ಹಾದ ಜೋಶಿ ಸುದ್ದಿಗಾರರಿಗೆ ಹೇಳಿದರು.

    ದೇಶದ 26 ವಿರೋಧ ಪಕ್ಷಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ಸಭೆ ಸೇರಿದ್ದವು. ಈ ಹಿಂದೆ ಯುಪಿಎ ಒಕ್ಕೂಟದಲ್ಲಿ ಗುರುತಿಸಿಕೊಂಡಿದ್ದ ಬಹುತೇಕ ಪಕ್ಷಗಳು ಆ ಸಭೆಯಲ್ಲಿ ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ತಮ್ಮ ಒಕ್ಕೂಟಕ್ಕೆ ಅವು ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇಂಕ್ಲೂಸಿವ್ ಅಲಯನ್ಸ್ (ಐಎನ್‌ಡಿಐಎ-ಇಂಡಿಯಾ) ಎಂದು ನಾಮಕರಣ ಮಾಡಿಕೊಂಡಿವೆ.

    VIDEO| ರಾಹುಲ್​ ಗಾಂಧಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್​ ಪ್ರಕರಣ; ಅಮಿತ್​ ಮಾಳವೀಯಾ ಪರ ಹೈಕೋರ್ಟಿನಲ್ಲಿ ವಾದ ಮಂಡಿಸಿದ ತೇಜಸ್ವಿ ಸೂರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts