More

    ಬದಲಾದ ಕೌಶಲಾಭಿವೃದ್ಧಿ ಸ್ವರೂಪ: ಬಿ.ವೈ.ರಾಘವೇಂದ್ರ

    ಶಿವಮೊಗ್ಗ: ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರದ ಕೌಶಲಾಭಿವೃದ್ಧಿ ಎನ್ನುವುದು ಕಾಟಾಚಾರಕ್ಕೆ ಸೀಮಿತವಾಗಿತ್ತು. ಆದರೆ ಇಂದು ಅದರ ಸ್ವರೂಪ ಬದಲಾಗಿದೆ. ಯಾರಿಗೆ ಯಾವ ಕೌಶಲದ ಅಗತ್ಯವಿದೆಯೋ ಅದನ್ನೇ ಕಲಿಸುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ನಗರದ ಕಾಶಿಪುರದ ಜನ ಶಿಕ್ಷಣ ಸಂಸ್ಥೆಯ ಕೌಶಲ್ಯರ್ವನಿ ಸಭಾಂಗಣದಲ್ಲಿ ಗುರುವಾರ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಸಹಯೋಗದಲ್ಲಿ ಕೌಶಲ ಘಟಿಕೋತ್ಸವ ಸಮಾರಂಭ(ಕೌಶಲ ದೀಕ್ಷಾಂತ್ ಸಮರೋಹ್)ದಲ್ಲಿ ವಿವಿಧ ಕೌಶಲ್ಯ ತರಬೇತಿ ಪಡೆದ ಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ಕೌಶಲಾಭಿವೃದ್ಧಿ ಮೂಲಕ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕೇಂದ್ರ ಸರ್ಕಾರ ನೆರವಾಗುತ್ತಿದೆ ಎಂದರು.
    ಒಂದು ಕಾಲದಲ್ಲಿ ಹೆಣ್ಣು ಮಕ್ಕಳು ಮನೆಗೆ ಭಾರ ಎನ್ನುವ ಮನಸ್ಥಿತಿ ಇತ್ತು. ಹೆಣ್ಣು ಬ್ರೂಣ ಹತ್ಯೆಗಳು ನಡೆಯುತ್ತಿದ್ದವು. ಆದರೆ ಇಂದು ಹೆಣ್ಣೆ ಮಕ್ಕಳು ಮನೆಗೆ ಭಾರವಾಗಿಲ್ಲ. ಬದಲಾಗಿ ಬೆಳಕು ಆಗುತ್ತಿದ್ದಾಳೆ. ಪುರುಷರಿಗೆ ಸರಿಸಮನಾಗಿ ಎಲ್ಲ ಕ್ಷೇತ್ರಗಳಲ್ಲೂ ದುಡಿಯುತ್ತಿದ್ದಾಳೆ. ಕುಟುಂಬದ ಜತೆಗೆ ದೇಶದ ಆರ್ಥಿಕತೆ ಅಭಿವೃದ್ಧಿಗೂ ಕೈಜೋಡಿಸುತ್ತಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದರು.
    ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಎಸ್.ವೈ.ಅರುಣಾದೇವಿ ಮಾತನಾಡಿದರು. ಲೀಡ್ ಡಿಸ್ಟ್ರಿಕ್ಟ್ ಡಿವಿಜನಲ್ ಮ್ಯಾನೇಜರ್ ಎಚ್.ಅಮರನಾಥ್ ಪ್ರಮಾಣಪತ್ರ ವಿತರಿಸಿದರು. ಜೆಎಸ್‌ಎಸ್ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಬಿ.ಕಮಲಾಕರ್ ಅಧ್ಯಕ್ಷತೆ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts