More

    ‘ಈಸ್ಟ್​ ಇಂಡಿಯಾ ಕಂಪೆನಿ ಪ್ರವೃತ್ತಿ ಬಿಡಿ’: ಇನ್​ಸ್ಟಾಗ್ರಾಂ ಮೇಲೆ ಕಂಗನಾ ಗರಂ!

    ನವದೆಹಲಿ: ವಿವಾದಾತ್ಮಕ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿ ಮಾಡುವ ಬಾಲಿವುಡ್​ ನಟಿ ಕಂಗನಾ ರಣಾವತ್​, ಇದೀಗ ಇನ್​​ಸ್ಟಾಗ್ರಾಂ ಕಂಪೆನಿಯ ಮೇಲೆ ಗರಂ ಆಗಿದ್ದಾರೆ. ತಮ್ಮ ನೂತನ ಚಿತ್ರ ‘ತಲೈವಿ’ಯ ಪ್ರಮೋಷನ್​ ಲಿಂಕ್​ಅನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯ ಪ್ರೊಫೈಲ್​ಗೆ ಸೇರಿಸಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತಮಿಳುನಾಡಿನ ಮಾಜಿ ಸಿಎಂ ಹಾಗೂ ನಟಿಯಾಗಿದ್ದ ಜೆ.ಜಯಲಲಿತಾ ಅವರ ಜೀವನದ ಮೇಲೆ ಚಿತ್ರಿತವಾದ ಚಿತ್ರ ‘ತಲೈವಿ’ ಬಿಡುಗಡೆಗೆ ಸಿದ್ಧವಾಗಿರುವ ಕಂಗನಾ, ಇನ್​​ಸ್ಟಾಗ್ರಾಂನಲ್ಲಿ ಅದನ್ನು ಪ್ರಮೋಟ್​ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಪ್​ಸೆಟ್​ ಆಗಿದ್ದಾರೆ.

    ಇದನ್ನೂ ಓದಿ: ನೆರೆಹಾನಿ ಪರಿಶೀಲಿಸಲು ರಾಜ್ಯಕ್ಕೆ ಎನ್​ಡಿಆರ್​ಎಫ್​ ತಂಡಗಳ ಭೇಟಿ

    “ನನ್ನ ಪ್ರೊಫೈಲ್​ ವಾರಿಫೈಡ್​ ಆಗಿದೆ. ಹಾಗಾಗಿ ನಾನು ಏನನ್ನಾದರೂ ಆ್ಯಡ್​ ಮಾಡಬೇಕೆಂದರೆ ತಮ್ಮ ಅಂತರರಾಷ್ಟ್ರೀಯ ಬಾಸ್​ಗಳ ಅನುಮತಿ ಬೇಕು ಎಂದು ಇನ್​ಸ್ಟಾಗ್ರಾಂ ಇಂಡಿಯಾ ಟೀಂ ಹೇಳಿದೆ. ಅದಕ್ಕಾಗಿ ಒಂದು ವಾರದಿಂದ ಕಾಯುತ್ತಿದ್ದೇನೆ. ನಿಮ್ಮ ಈಸ್ಟ್​ ಇಂಡಿಯ ಕಂಪೆನಿ ಪ್ರವೃತ್ತಿಯನ್ನು ಬದಲಿಸಿಕೊಳ್ಳಿ” ಎಂದು ಕಂಗನಾ ಜರಿದಿದ್ದಾರೆ.

    “ನಾನು ನನ್ನ ತಲೈವಿ ಲಿಂಕನ್ನು ಸೇರಿಸಲು ಅಪ್ಲೈ ಮಾಡಿದಾಗಿನಿಂದ ನನ್ನ ಖಾತೆಯ ಎಡಿಟ್​​ ಸೆಕ್ಷನ್ ಲಾಕ್ ಆಗಿದ್ದು, ಇನ್​​ಸ್ಟಾಗ್ರಾಂನ ಅನುಮೋದನೆಗೆ ಕಾಯಬೇಕಾಗಿದೆ. ವೆಬ್​ಸೈಟ್​ ಸೆಕ್ಷನ್​ನಲ್ಲೂ ನನ್ನ ಚಿತ್ರದ ಲಿಂಕನ್ನು ಹಾಕಲು ಸಾಧ್ಯವಾಗುತ್ತಿಲ್ಲ. ಇಂಥ ಅನ್​ಪ್ರೊಫೆಷನಲಿಸಂಅನ್ನು ಒಪ್ಪಿಕೊಳ್ಳಲಾಗುವುದಿಲ್ಲ” ಎಂದು ಕಂಗನಾ ಗುಡುಗಿದ್ದಾರೆ. (ಏಜೆನ್ಸೀಸ್)

    ಕುಡಿದ ಮತ್ತಿನಲ್ಲಿ ಗಲಾಟೆ: ಹೆಲ್ಮೆಟ್​ನಿಂದ ಹೊಡೆದು ಕಂಟ್ರಾಕ್ಟರ್ ಕೊಲೆ

    ಸೂಪರ್​ ಮಾರ್ಕೆಟ್​ನಲ್ಲಿ 6 ಜನರಿಗೆ ಚಾಕು ಇರಿತ… ‘ಉಗ್ರವಾದಿ’ಗೆ ಅಂತ್ಯ ಹಾಡಿದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts