More

    48 ಗಂಟೆಯೊಳಗೆ ಮದುವೆ ಸ್ಥಳ ಬದಲಾಯಿಸು ಎಂದಿದ್ದಕ್ಕೆ ರಾಷ್ಟ್ರಪತಿಗಳ ಮೊರೆ; ಕೊನೆಗೆ ಎಲ್ಲಾಯಿತು ಮದುವೆ, ಇಲ್ಲಿದೆ ನೋಡಿ ಮಾಹಿತಿ…

    ತಿರುವನಂತಪುರ: ಮದುವೆ ಎಂದರೆ ಏನೆಲ್ಲ ತಯಾರಿ ಮಾಡಬೇಕು. ಸಂಬಂಧಿಕರು, ಮದುವೆಯಾಗುವವರಿಗೂ ಎಷ್ಟೆಲ್ಲ ತಯಾರಿಗಳಿರುತ್ತವೆ. ಆದರೆ, 48 ಗಂಟೆಗಳಲ್ಲಿ ಮದುವೆಯಾಗುವ ಸ್ಥಳ ಬದಲಾಯಿಸಿ ಎಂದು ಸೂಚನೆ ಬಂದರೆ ಹೇಗಾಗಬೇಡ..?

    ಹೌದು, ಆಕಾಶವೇ ಕಳಚಿ ಬಿದ್ದಾಂತಾಗುತ್ತದೆ. ಅದರಲ್ಲೂ ಇಂತಹ ಸೂಚನೆ ಬಂದಿದ್ದು ರಾಷ್ಟ್ರಪತಿ ಭವನದಿಂದ ಎಂದರೆ ನೀವು ನಂಬಲೇಬೇಕು.

    ಕೊಚ್ಚಿಯ ಫೈವ್​ ಸ್ಟಾರ್​ ಹೊಟೇಲ್​ನಲ್ಲಿ ಅಮೆರಿಕ ನಿವಾಸಿ ಆ್ಯಶ್ಲೆ ಹಾಲ್​ ಎಂಬುವವರ ಮದುವೆಗಾಗಿ ಸಿದ್ಧತೆಗೊಂಡಿತ್ತು. ಮದುವೆಗಾಗಿ ಆ್ಯಶ್ಲೆ ಕೊಚ್ಚಿಗೆ ಬಂದಿಳಿದರು. ಆದರೆ, ಅದೇ ಸಮಯದಲ್ಲಿ ರಾಷ್ಟ್ರಪತಿಗಳ ಭೇಟಿ ಇರುವುದರಿಂದ ಆ್ಯಶ್ಲೆ ಅವರಿಗೆ ಸ್ಥಳ ಬದಲಾವಣೆಗೆ ಸೂಚಿಸಲಾಯಿತು.

    ಆ್ಯಶ್ಲೆ ಅವರು ರಾಷ್ಟ್ರಪತಿ ಭವನಕ್ಕೆ ಟ್ವೀಟ್ ಮೂಲಕ ಮೊರೆ ಹೋದರು. ರಾಷ್ಟ್ರಪತಿ ಭವನ ಅವರ ಮದುವೆಗೆ ಅಸ್ತು ಎಂದಿದೆ.

    ಕೊಚ್ಚಿಯ ಹೊಟೇಲ್​ ಮಂಗಳವಾರ (ಜ.7) ಮದುವೆ ನಡೆಯಲಿದೆ. ಸೋಮವಾರವೇ ರಾಷ್ಟ್ರಪತಿಗಳು ಆಗಮಿಸುವುದರಿಂದ, ಸುರಕ್ಷತೆ ದೃಷ್ಟಿಯಿಂದ ಆ ಹೊಟೇಲ್​ನ್ನು ವಶಕ್ಕೆ ಪಡೆಯುವುದಕ್ಕಾಗಿ ಮದುವೆಯನ್ನು ಸ್ಥಳಾಂತರಿಸಲು ಅಧಿಕಾರಿಗಳು ಸಲಹೆ ನೀಡಿದ್ದರು.

    ಈ ಬಗ್ಗೆ ಆ್ಯಶ್ಲೆ ಅವರು ರಾಷ್ಟ್ರಪತಿ ಭವನಕ್ಕೆ ಟ್ವೀಟ್​ ಮಾಡಿದ್ದರು. ಈಗ ಅಧಿಕಾರಿಗಳು ಅದೇ ಸ್ಥಳದಲ್ಲಿ ಮದುವೆಗೆ ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ. ಸೋಮವಾರ ಆಗಮಿಸುವ ರಾಷ್ಟ್ರಪತಿ ಅವರು ಮಂಗಳವಾರ ಬೆಳಗ್ಗೆಯೇ ತೆರಳಲಿದ್ದು ಮದುವೆಗೆ ತೊಂದರೆಯಾಗುವುದಿಲ್ಲ ಅಂದು ಅಧಿಕಾರಿಗಳ ಭರವಸೆ ನೀಡಿದ್ದಾರೆ.

    ವಿಷಯ ತಿಳಿದ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಟ್ವೀಟರ್​ನಲ್ಲಿ ದಂಪತಿಗಳಿಗೆ ಶುಭ ಕೋರಿದ್ದಾರೆ. ಸಮಸ್ಯೆ ಬಗೆಹರಿದುದ್ದರ ಬಗ್ಗೆ ನಮಗೆ ಸಂತಸವಾಗಿದೆ. ಅಲ್ಲದೆ ರಾಷ್ಟ್ರಪತಿಗಳೇ ಟ್ವೀಟ್​ ಮಾಡಿ ನಮ್ಮನ್ನು ಹರಸಿದ್ದು ನಮ್ಮ ಮದುವೆ ಅವಿಸ್ಮರಣೀಯವಾಗಿದೆ ಎಂದು ಆ್ಯಶ್ಲೆ ಸಂತಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts