More

    ಕುಂಸಿ ಬೈಪಾಸ್ ಮಾರ್ಗ ಬದಲಿಸಿ

    ಶಿವಮೊಗ್ಗ: ಕುಂಸಿ ಗ್ರಾಮದ ಗಡಿ ಮೂಲಕ ನಿರ್ಮಿಸಲು ಉದ್ದೇಶಿಸಿರುವ ಬೈಪಾಸ್ ರಸ್ತೆ ಮಾರ್ಗದ ಯೋಜನೆಯನ್ನು ಬದಲಾಯಿಸುವಂತೆ, 1975ರಲ್ಲಿ ಅಗಲೀಕರಣಕ್ಕೆ ಗುರುತು ಮಾಡಿದ್ದ ಜಾಗದಲ್ಲೇ ಬೈಪಾಸ್ ರಸ್ತೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಸ್ಥಳೀಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಬೈಪಾಸ್ ರಸ್ತೆಗೆ ಈಗ ಗುರುತಿಸಿರುವ ಜಾಗದಲ್ಲಿ 75ಕ್ಕೂ ಹೆಚ್ಚು ಮಂದಿಯ ಕೃಷಿ ಜಮೀನಿದೆ. ಈ ಪೈಕಿ ಪರಿಶಿಷ್ಟ ವರ್ಗದವರು ಹಾಗೂ ಸಣ್ಣ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅರ್ಧ ಎಕರೆಯಿಂದ ಎರಡು ಎಕರೆವರೆಗೂ ಭೂಮಿ ಹೊಂದಿದವರು ಇಲ್ಲಿದ್ದಾರೆ. ಈ ತೋಟಗಳಲಲ್ಲಿ ಒಟ್ಟು 28 ಕೊಳವೆ ಬಾವಿಗಳೂ ಇವೆ. ಹೊಸ ಯೋಜನೆಯಿಂದ ವ್ಯಾಪಕ ನಷ್ಟವಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಹಾಲಿ ಇರುವ ರಸ್ತೆಯನ್ನೇ ಅಗಲೀಕರಣ ಮಾಡಲು 1975ರಲ್ಲಿ ಭೂಮಿ ಗುರುತಿಸಲಾಗಿತ್ತು. ಊರ ನಡುವೆಯೇ ಈ ಮಾರ್ಗ ಹಾದು ಹೋಗಲಿದೆ. ಈ ಯೋಜನೆಯಿಂದ ಮೂರು ಆರ್‌ಸಿಸಿ ಮನೆಗಳನ್ನು ಮಾತ್ರ ತೆರವು ಮಾಡಬೇಕಾಗುತ್ತದೆ. ಇದಕ್ಕೆ ಹೆಚ್ಚಿನ ಪರಿಹಾರದ ಅವಶ್ಯಕತೆಯೂ ಇಲ್ಲ. ಆದರೆ ಕೆಲವರು ಈ ಯೋಜನೆ ಜಾರಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ದೂರಿದರು.
    ಸ್ಥಳೀಯರಾದ ಕೆ.ಎಂ.ಚನ್ನಪ್ಪ, ಕೆ.ನಾಗರಾಜ್, ಆರ್.ಮಂಜುನಾಥ್, ಶೇಖರಪ್ಪ, ದೇಶಪಾಂಡೆ, ಪ್ರಕಾಶ್, ಸತ್ಯಪ್ಪ, ವಿಜಯೇಂದ್ರ, ಸುರೇಶ್, ಗಿರಿಜಮ್ಮ, ರಾಮು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts