More

    ಪ್ರವಾಹ ಸಂದರ್ಭದಲ್ಲಿ ಸಿಎಂ ಬದಲಾವಣೆ ದುರದೃಷ್ಟಕರ : ಎಚ್​​ಡಿಕೆ

    ಬೆಂಗಳೂರು : ನಾಡಿನ ಹಲವೆಡೆ ಪ್ರವಾಹ ಉಂಟಾಗುತ್ತಿರುವ ಸಮಯದಲ್ಲಿ ಸಿಎಂ ಬದಲಾವಣೆ ವಿಚಾರ ದುರದೃಷ್ಟಕರ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್​ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ನಗರದ ಜೆ.ಪಿ.ಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019 ರಲ್ಲಿ ದೊಡ್ಡ ಮಟ್ಟದಲ್ಲಿ ಮಳೆ ಅನಾಹುತ ಆಗಿದೆ. ಕೋವಿಡ್ ಸಮಯದಲ್ಲೂ ಜನ ಕಂಗಾಲಾದರು. ಆದರೆ, ಬಿಜೆಪಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸಿಎಂ ಬದಲಾವಣೆ, ನಾಯಕತ್ವ ಬದಲಾವಣೆಯಲ್ಲೇ ಮುಳುಗಿದೆ. ಇದು ನಾಡಿನ ದೌರ್ಬಾಗ್ಯ ಎಂದರು.

    ಇದನ್ನೂ ಓದಿ: 2 ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ : ಬಿಎಸ್​ವೈ

    ಸಿಎಂ ಬದಲಾವಣೆ ವಿಚಾರ, ಮಠಾಧೀಶರ ಲಾಬಿ ವಿಚಾರ ಕುರಿತಾಗಿ ಪ್ರತಿಕ್ರಿಯಿಸಿದ ಎಚ್​ಡಿಕೆ, ಅವರವರ ಭಾವನೆ ವ್ಯಕ್ತಪಡಿಸಲು ಅವಕಾಶವಿದೆ. ಮಠಾಧೀಶರು ಇದೇ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಬಂದು ಸಂದೇಶ ನೀಡಲು ಮುಂದಾಗಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ ಎಂದರು.

    ಮಠಾಧೀಶರ ಬಗ್ಗೆ ಲಘುವಾಗಿ ಮಾತಾಡಲ್ಲ: ಮಠಾಧೀಶರ ತೀರ್ಮಾನ ಸರಿ ಇರಬಹುದು. ಅದು ನನಗೆ ಗೊತ್ತಿಲ್ಲ. ಜನ ಅಂತಿಮವಾಗಿ ತೀರ್ಮಾನ ಮಾಡಬೇಕು. ನಾನು ಅವರೆಲ್ಲಾ ತೆಗೆದುಕೊಂಡ ತೀರ್ಮಾನದ ಬಗ್ಗೆ ಲಘುವಾಗಿ ಮಾತನಾಡಲು ಹೋಗುವುದಿಲ್ಲ ಎಂದರು. ಮಠಾಧೀಶರು ತಮ್ಮ ಮನಸ್ಸಿನಲ್ಲಿ ಬಂದ ಭಾವನೆಯನ್ನು ಸಾರ್ವಜನಿಕವಾಗಿ ತಿಳಿಸಿರಬಹುದು. ಸ್ವಾತಂತ್ರ್ಯ ಬಂದ ನಂತರ ಇಷ್ಟು ದೊಡ್ಡ ಮಟ್ಟದಲ್ಲಿ ಮಠಾಧೀಶರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅದು ಸರಿಯೋ ತಪ್ಪೋ ಎನ್ನುವುದು ನಾಡಿನ ಜನರು ತೀರ್ಮಾನ ಮಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು.

    VIDEO | ವೇದಿಕೆಯಲ್ಲಿ ‘ಬ್ಯಾಟಿಂಗ್’ ಸಿದ್ಧತೆ ತೋರಿದ ಸಿಧು!

    ಸಿಎಂ ಯಡಿಯೂರಪ್ಪ ಸಿಟಿ ರೌಂಡ್ಸ್! ಎಲ್ಲೆಲ್ಲಿಗೆ ಭೇಟಿ – ಇಲ್ಲಿದೆ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts